ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ರೈತ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ ವಿಫಲವಾದ ಹಿನ್ನಲೆಯಲ್ಲಿ ರೈತ ಸಂಘವು ಮತ್ತೆ ಪ್ರತಿಭಟನೆಗೆ ಕರೆ ನೀಡಿದ್ದು, ಬಂಕಾಪುರ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಬೆಳೆಗ್ಗೆ 11ಗಂಟೆಯಿಂದಲೇ ರೈತರು ಟೋಲ್ ಬಳಿ ಜಮಾಯಿಸಿ, ಐದನೂರಕ್ಕೂ ಹೆಚ್ಚು ರೈತರು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ, ದಿಕ್ಕಾರ ಕೂಗಿ. ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿ, ಕಬ್ಬಿಗೆ ದರ ನಿಗದಿಪಡಿಸಬೇಕೆಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಂಚಾರ ಅಸ್ತವ್ಯಸ್ಥ ಉಂಟಾಗಿದ್ದು, ಪೋಲಿಸರು ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಿದ್ದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ರುದ್ರಪ್ಪ ಬಳಿಗಾರ ಮಾತನಾಡಿ, “ಕಬ್ಬಿಗೆ ಎಮ್.ಎಸ್.ಪಿ ಬೆಲೆ ನಿಗದಿ ಪಡಿಸುವಂತೆ ಮೊದಲ ಹಂತದಲ್ಲಿ ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರ ಪ್ರಭಟನೆಯೊಂದಿಗೆ ಎಚ್ಚರಿಕೆ ನೀಡಲಾಗಿತ್ತು. ಅಧಿಕಾರದ ದರ್ಪದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರೈತರನ್ನು ದೆಹಲಿಗೆ ಕರೆಸಿ, ಯಾವುದೇ ಭರವಸೆ ನೀಡದೆ ಬರಿಗೈಯಲ್ಲಿ ಕಳಿಸಿದ್ದಾರೆ. ರೈತರಿಗೆ ಅವಮಾನ ಮಾಡಿದ್ದಾರೆ. ಎಮ್.ಎಸ್.ಪಿ 60 ಹಾಗೂ ಕಬ್ಬಿಗೆ ₹5500 ನಿಗದಿ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
“ಕಾರ್ಖಾನೆಯಿಂದ ಹೊರಬರುವ ಎಥನಾಲ್ ಅನ್ನು ಕೇಂದ್ರ ಸರ್ಕಾರ ಖರೀದಿ ಮಾಡಬೇಕು. ಇದರ ಜೊತೆಗೆ ಗೋವಿನ ಜೋಳ, ಭತ್ತಕ್ಕೂ ಬೆಂಬಲ ಬೆಲೆ ಕೊಡಬೇಕು. ಸ್ವಾಮಿನಾಥನ್ ವರದಿಯನ್ನು ಯತಾವತ್ತಾಗಿ ಜಾರಿಯಾಗಬೇಕು. ನಮ್ಮ ಬೇಡಿಕೆಗಳು ಈಡೇರುವರೆಗೂ ಪ್ರತಿಭಟನೆ ಮುಂದುವರೆಯಲಾಗುವುದು” ಎಂದು ಹೇಳದರು.
“ರೈತ ಸಂಘದ ರಾಜ್ಯಾಧ್ಯಕ್ಷರು, ‘ಕಬ್ಬಿಗೆ ಬೆಂಬಲ ಬೆಲೆ ಸಿಗುವವರೆಗೂ ಪ್ರತಿಭಟನೆಯನ್ನು ಮುಂದುವರೆಸುದಾಗಿ ದಿನದ ವರೆಗೂ ಮುಂದುವರೆಸಿ, ಎಂದು ಆದೇಶಿಸಿದ್ದಾರೆ. ಕಬ್ಬಿಗೆ ದರ ನಿಗದಿ ಆಗುವರೆಗೂ ಪ್ರತಿಭಟಮೆ ಮುಂದು ವರೆಯಲಿದೆ. ರಾತ್ರಿಯಿಡಿ ಟೋಲ್ ಬಳಿಯೇ ಧರಣಿ ನಡೆಯಲಿದೆ” ರೈತ ಸಂಘದ ಜಿಲ್ಲಾಧ್ಯಕ್ಷ ಹನಮಂತಪ್ಪ ಹುಚ್ಚಣ್ಣನವರ ತಿಳಿಸಿದರು.
ಪ್ರಪ್ರತಿಟನೆಯಲ್ಲಿ ರೈತರು ಹಾವೇರ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಟ್ರಾಕ್ಟರ್, ಚಕ್ಕಡಿ ಮೂಲಕ ಪ್ರತಿಭಟನೆ ಆಗಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.




