“ಮಳೆ ಕೊರತೆಯಿಂದ ಎಲ್ಲ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಾರಿ ಕಬ್ಬಿಗೆ ಟನ್‌ಗೆ ₹ 5,500 ನಿಗದಿಪಡಿಸಲೇ ಬೇಕು’ ಎಂದು ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಕಛೇರಿ ಎದುರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕಬ್ಬಿಗೆ ಟನ್‌ಗೆ ₹ 5,500 ದರ ನೀಡಬೇಕು. ಸರ್ಕಾರ ದಿಂದಲೇ ಲ್ಯಾಬ್ ತೆರೆಯಬೇಕು. ತೂಕದ ಯಂತ್ರ ಅಳವಡಿಸಬೇಕು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ವಿಜಯ ಮಹಾಂ ತೇಶ ಮೂಲಕ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರಿಗೆ ರೈತರು ಮನವಿ ಸಲ್ಲಿಸಿದರು.
“ಇತ್ತೀಚಿನ ದಿನಗಳಲ್ಲಿ ಸಕ್ಕರೆ ಹಾಗೂ ಬೆಲ್ಲದ ಬೆಲೆಯು ಏರಿಕೆಯಾಗಿದೆ. ಇದರ ಲಾಭವೆಲ್ಲವೂ ರೈತರ ಕೈಗೆ ಸಿಗುವಂತಾಗಬೇಕು. ಕಬ್ಬು ಬೆಳೆಗಾ ರರಿಗೆ ಲಾಭವಾದರೆ ಮಾತ್ರ, ಅವರ ಕುಟುಂಬಗಳು ಉಳಿಯುತ್ತವೆ. ಇಲ್ಲದಿ ದ್ದರೆ, ಸಾಲದ ಹೊರೆ ಹೆಚ್ಚಾಗಲಿದೆ. ಕಬ್ಬು ಬೆಳೆಗಾರರು ತಮಗೆ ಬರಬೇಕಾದ ನ್ಯಾಯ ಯುತ ಬೆಲೆ ಕೇಳುತ್ತಿದ್ದಾರೆ. ಅದನ್ನು ಕೊಡುವುದು ಸರ್ಕಾರದ ಕರ್ತವ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕರಡ್ಡಿ ಮರಚರಡ್ಡೇರ, ಹನುಮಂತಪ್ಪ ಹುಚ್ಚಣ್ಣನವರ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.




