ಬಾಗೇಪಲ್ಲಿ | ಮುತ್ತಿನಪಲ್ಲಿ ಕೋಡಿಪಲ್ಲಿ: ಮಾರ್ಗ ರಸ್ತೆ ಡಾಂಬರು ಕಳೆಪೆ ಗುಣಮಟ್ಟ: ಗ್ರಾಮಸ್ಥರು ಗುತ್ತಿಗೇದಾರನ ವಿರುದ್ದ ಆಕ್ರೋಶ

Date:

ಅಭಿವೃದ್ದಿ ಕೆಲಸಗಳ ಹೆಸರಿನಲ್ಲಿ ಕಳೆಪ ರಸ್ತೆ ಕಾಮಗಾರಿಗಳು ಮಾಡುವ ಮೂಲಕ ಸರ್ಕಾರದ ಕೋಟ್ಯಾಂತರ ರೂ ಹಣ ಲೂಟಿ ಮಾಡುತ್ತಿರುವ ಬೆಂಗಳೂರು ಮೂಲದ ವಜ್ರಕಾಯ ಗುತ್ತಿಗೇದಾರ ಸಂಸ್ಥೆ ವಿರುದ್ದ ಮುತ್ತಿನಪಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿಕೊಡುವಂತೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಕೋಡಿಪಲ್ಲಿ ಮುತ್ತಿನಪಲ್ಲಿ ಮಾರ್ಗ ರಸ್ತೆ ಡಾಂಬರು ಕಾಮಗಾರಿ ಅತ್ಯಂತ ಕಳೆಪ ಗುಣಮಟ್ಟದಿಂದ ಮಾಡುತ್ತಿರುವುದನ್ನು ಖಂಡಿಸಿರುವ ಕೋಡಿಪಲ್ಲಿ ಮತ್ತು ಮುತ್ತಿನಪಲ್ಲಿ ಗ್ರಾಮಸ್ಥರು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೇದಾರನ ವಿರುದ್ದ ಕಾನೂನು ಕ್ರಮ ಜರುಗಿಸಿ ಗುಣಮಟ್ಟದ ಕಾಮಗಾರಿ ಮಾಡಿಕೊಡಬೇಕೆಂದು ಅಧಿಕಾರಿಗಳ ಹಾಗೂ ಗುತ್ತಿಗೆದಾರನ ವಿರುದ್ದ ಕಿಡಿಕಾರಿದ್ದಾರೆ.

ಗ್ರಾಮಸ್ಥ ಖಲೇಂಧ್ರ ಮಾತನಾಡಿ, ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಜನರಿಗೋಸ್ಕರ ಮಾಡಬೇಕೆ ಹೊರತು ಸಾರ್ವಜನಿಕರ ಹಣ ಲೂಟಿ ಮಾಡುವ ಉದ್ದೇಶಕ್ಕಾಗಿ ಅಭಿವೃದ್ದಿ ಕೆಲಸಗಳು ಮಾಡಬಾರದು, ದಶಕಗಳ ನಂತರ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಡಾಂಬರು ಹಾಕಲಾಗುತ್ತಿದ್ದು ಇಂತಹ ರಸ್ತೆ ಅಭಿವೃದ್ದಿ ಕೆಲಸಗಳು ಧೀರ್ಘಕಾಲ ಬಾಳಿಕೆ ಬರುವಂತೆ ನಿರ್ವಹಣೆ ಮಾಡಿ ಗುಣಮಟ್ಟವನ್ನು ಕಾಪಾಡಬೇಕಾಗಿದೆ. ಅದರೇ ಈ ಭಾಗದಲ್ಲಿ ಸರ್ಕಾರಿ ಹಣ ಲೂಟಿ ಮಾಡುವ ಉದ್ದೇಶಕ್ಕಾಗಿ ಅಭಿವೃದ್ದಿ ಕೆಲಸಗಳು ಮಾಡುತ್ತಿರುವ ಪ್ರಸಂಗಗಳೆ ಹೆಚ್ಚಾಗುತ್ತಿವೆ. ಕೋಡಿಪಲ್ಲಿ ಮುತ್ತಿನಪಲ್ಲಿ ಮಾರ್ಗ ರಸ್ತೆ ಅಭಿವೃದ್ದಿ ಕಾಮಗಾರಿ ಕೇವಲ ಗುತ್ತಿಗೇದಾರರ ಜೇಬು ತುಂಬಿಸುವ ಉದ್ಧೇಶಕ್ಕಾವಾಗಿದ್ದು, ಕಳಪೆ ಗುಣಮಟ್ಟದ ಕಾಮಗಾರಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದೇವೆ, ರಾಜಕಾರಣಿಗಳ, ಅಧಿಕಾರಿಗಳ ಕೃಪಾಕಟಾಕ್ಷದಿಂದಲೇ ಗುತ್ತೀಗೇದಾರ ಇಷ್ಟೊಂದು ರಾಜಾರೋ಼ಷವಾಗಿ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿ ಸರ್ಕಾರಿ ಹಣ ಗುಳುಂ ಮಾಡಿಕೊಳ್ಳುತ್ತಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವ ಮುಖಂಡ ನವೀನ್‌ರೆಡ್ಡಿ ಮಾತನಾಡಿ, ಬಾಗೇಪಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಬಹುತೇಖ ಎಲ್ಲಾ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಮಾಡಲಾಗುತ್ತಿದ್ದು, ಕ್ಷೇತ್ರದಲ್ಲಿ ನಡೆಯುತ್ತಿರುವ ಯಾವೊಂದು ಕೆಲಸವೂ ಅಭಿವೃದ್ದಿಗಾಗಿ ಮಾಡುತ್ತಿಲ್ಲ ದುಡ್ಡು ಹೊಡೆಯುವ ಉದ್ದೇಶಕ್ಕಾಗಿ ಕಾಟಾಚಾರದ ಅಭಿವೃದ್ದಿ ಕಾಮಗಾರಿ ಕೆಲಸಗಳು ಮಾಡುತ್ತಿದ್ದಾರೆ, ವಿವಿಧ ಇಲಾಖೆಗಳ ಕಾಮಗಾರಿ ಕೆಲಸಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸರ್ಕಾರಿ ಅಧಿಕಾರಿಗಳು, ಚುನಾಯಿತ ಜನಪ್ರತಿನಿದಿಗಳು ಕುಮ್ಮಕ್ಕು ನೀಡುತ್ತಿದ್ದಾರೆ, ಕಳಪೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕಳೆಪೆ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡದೆ ನಿರ್ಲಕ್ಷö್ಯ ತೋರಿದ್ದಾರೆಂದು ಆರೋಪಿಸಿದ್ದಾರೆ.

ಇದನ್ನು ಓದಿದ್ದೀರಾ..?ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

- Advertisement -

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ.ಪಿ.ಮಂಜುನಾಥ ರೆಡ್ಡಿ, ಎಂ.ಎ.ಬೈರೆಡ್ಡಿ, ಎಂ.ಎಸ್.ಮುರಳಿ, ಅಶ್ವತ್ಥರೆಡ್ಡಿ, ಚಿನ್ನಮದ್ದನ್ನ, ಸಿ.ಎಂ.ಬೈರೆಡ್ಡಿ, ನರಸಿಂಹಾರೆಡ್ಡಿ, ನಾರಾಯಣಪ್ಪ, ಮಂಜುನಾಥ ಮತ್ತಿತರರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಳು ಭಾಷೆಗೆ ಅಧಿಕೃತ ಮಾನ್ಯತೆ: ತುಳುನಾಡ ರಕ್ಷಣಾ ವೇದಿಕೆಗೆ ಪ್ರವೀಣ ಪರ್ಕಳ ಅಭಿನಂದನೆ

ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ...

ಗದಗ ತಾಲೂಕನ್ನು ಬರಪೀಡಿತ ಸೇರ್ಪಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಎಚ್.ಕೆ ಪಾಟೀಲ್ ಎಚ್ಚರಿಕೆ

ಗದಗ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ, ಶಾಸಕ ಸ್ಥಾನಕ್ಕೆ...

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್...