“ಗುರು ಬಲ ಮಾರ್ಗದರ್ಶನದಿಂದ ಉನ್ನತ ಸ್ಥಾನಮಾನ, ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ” ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಹೇಳಿದರು.
ಹಾವೇರಿ ಪಟ್ಟಣದ ಹೊಸಮಠದಲ್ಲಿ ಆಯೋಜಿಸಿದ ಗುರು ಪೂರ್ಣಿಮೆ ದಿನದ ನಿಮಿತ್ತವಾಗಿ ಶ್ರೀಗಳಿಗೆ ಸದ್ಭಕ್ತರಿಂದ ಗುರುವಂದನಾ ಸ್ವೀಕರಿಸಿ ಶ್ರೀ ಅರ್ಶಿವಚನ ನೀಡಿ ಅವರು ಮಾತನಾಡಿದರು.
“ರಾಮಾಯಣ-ಮಹಾಭಾರತ ಕಾಲದಿಂದಲೂ ಪೌರಾಣಿ ಮತ್ತು ಜಗತ್ತಿನ ಇತಿಹಾಸ ನೋಡಿದಾಗ, ರಾಜ-ಮಹಾರಾಜರುಗಳು, ತಮ್ಮ ಸಾಮ್ರಾಜ್ಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಕಾದರೆ, ಗುರುವಿನ ಆಶೀರ್ವಾದ, ಮಾರ್ಗದರ್ಶನ ಪಡೆದುಕೊಂಡು ಮುನ್ನಡಿಯುತ್ತಿದ್ದರು. ಅಜ್ಞಾನದಿಂದ-ಜ್ಞಾನದೆಡೆಗೆ, ಕತ್ತಲೆಯಿಂದ -ಬೆಳಕಿನೆಡಗೆ, ಭಯದಿಂದ-ನಿರ್ಭಯದೆಡೆಗೆ ಕರೆದುಕೊಂಡು ಹೋಗುವ ಶಕ್ತಿ, ಗುರು ಶಕ್ತಿ ಮಾತ್ರ” ಎಂದರು.
“ಗುರು ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಮಹತ್ವವಿದೆ. ಭಕ್ತಿ,ಶ್ರದ್ಧೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯವಾಗಲಿದೆ. ವ್ಯಾಸ ಮಹರ್ಷಿ ಜನ್ಮ ದಿನವಾಗಿಯೂ ಆಚರಣೆ ಮಾಡಲಾಗುವುದು” ಎಂದು ಹೇಳಿದರು.
“ದೇಶದಲ್ಲಿ ಗುರು ಪೂರ್ಣಿಮೆಯನ್ನು ಆಚರಿಸುತ್ತೇವೆ. ಹರ ಮುನಿದರು ಗುರು ಕಾಯಿವನು ಎಂಬ ನುಡಿಯಂತೆ, ಗುರು ಪಥದಿಂದ ಬದುಕು ಉಜ್ವಲವಾಗಲಿದೆ. ಶ್ರದ್ಧೆ, ಭಕ್ತಿಯ ಮಾರ್ಗದರ್ಶನ ಎಲ್ಲರೂ ಮೈಗೂಡಿಸಿಕೊಳ್ಳಲಿ” ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಶ್ರೀಮಠದ ಭಕ್ತರು ರುದ್ರೇಶ ಚಿನ್ನಣ್ಣನವರ, “ಗುರು ಬಲ ಎಲ್ಲ ಬಲಕ್ಕಿಂತ ಶ್ರೇಷ್ಠವಾಗಿದೆ. ಪ್ರತಿಯೊಬ್ಬರಿಗೂ ಗುರು ಪ್ರಭಾವ ಆಗಿರುತ್ತದೆ. ಗುರು ಆರ್ಶಿವಾದ ಮಾರ್ಗದರ್ಶನ ಸದುಪಯೋಗ ಪಡಿಸಿಕೊಳ್ಳಲು ನಾವೆಲ್ಲರೂ ಮುಂದಾಗೋಣ” ಎಂದರು.
ಹೊಸಮಠದ ಶ್ರೀಗಳು ಶ್ರೀ ಬಸವಶಾಂತಲಿಂಗ ಸ್ವಾಮೀಗಳಿಗೆ, ಗೌರವ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರು ಪರಶುರಾಮ ಹರ್ಲಾಪುರ, ಜಯದೇವ ಕೆರೂಡಿ, ಉಡಚಪ್ಪ ಮಾಳಗಿ, ಸೋಮಣ್ಣ ಸವೂರ, ಎ.ಎಚ್ ಕಬ್ಬಿಣಕಂತಿಮಠ, ನಿಂಗಪ್ಪ ಆರೇರ, ಹೊನ್ನಪ್ಪ ಅಗಸಿಬಾಗಿಲ, ಅಮೀರಜಾನ್ ಬೇಪಾರಿ, ಶಾಹಿದ್ ದೇವಿಹೊಸೂರ, ಮಂಜಣ್ಣ ಗಾಜೀಗೌಡ್ರ, ಶ್ರೀಮತಿ ಹೇಮಾವತಿ ಹರ್ಲಾಪುರ, ನವೀದ್ ಅಮ್ಮಿನಭಾವಿ, ಮಾಲತೇಶ ಆನವಟ್ಟಿ, ನಿವೃತ್ತ ಅಧಿಕಾರಿ ಮಹಾದೇವಪ್ಪ ಕುಮ್ಮೂರ, ಗಣೇಶ ಹೆಚ್ ಸೇರಿದಂತೆ ಅನೇಕರಿದ್ದರು.




