ಕಡೂರು | ಕರ್ನಾಟಕ ಗ್ರಾಮೀಣ ಬ್ಯಾಂಕ್ : ನಕಲಿ ಚಿನ್ನಾಭರಣ ಪತ್ತೆ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ 

Date:

ಬ್ಯಾಂಕಿನಲ್ಲಿ ಅಡವಿಟ್ಟ ಬಂಗಾರದ ಆಭರಣಗಳ ಮರುಮೌಲ್ಯಮಾಪನ ಮಾಡಿದಾಗ ಕೆಲವೊಂದು ನಕಲಿ ಚಿನ್ನಾಭರಣಗಳೆಂದು ಪತ್ತೆಯಾಗಿರುವ ಘಟನೆ ಕಡೂರು ತಾಲೂಕಿನ ಕೆ. ಬಿದರೆ ಭಾಗದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿದೆ.

- Advertisement -

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆ. ಬಿದರೆ ಶಾಖೆಯಲ್ಲಿ ಗ್ರಾಹಕರಿಗೆ ಚಿನ್ನದ ಆಭರಣಗಳ ಮೇಲೆ ಸಾಲ ಸೌಲಭ್ಯವಿರುತ್ತದೆ, ಚಿನ್ನದ ಆಭರಣಗಳ ಮೌಲ್ಯಮಾಪನ ಮಾಡುವ ಕೆಲಸವನ್ನು ಶ್ರೀ ಬಾಬು ಗೋಂವಿಂದ ಶೇಟ ಬಿನ್ ಗೋವಿಂದಪ್ಪ ಆಣೆಗೆರೆ, ಶ್ರೀ ಗಣೇಶ ಬಾಬು ಶೇಟ ಬಿನ್ ಬಾಬು ಗೋವಿಂದ ಶೇಟ ವಾಸ ಕೆ.ಬಿದರೆ ಗ್ರಾಮದವರಿಗೆ ವಹಿಸಿರುತ್ತಾರೆ. ಪ್ರಾದೇಶಿಕ ಕಛೇರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಕ್ಕಮಗಳೂರು ಪ್ರಾದೇಶಿಕ ವ್ಯವಸ್ಥಾಪಕರಾದ ರಾಮಪ್ಪ ಎಸ್ ಎನ್, 2025 ಮೇ 21ರಂದು ಕೆ. ಬಿದರೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಚಿನ್ನಾಭರಣಗಳನ್ನು ಪರಿಶೀಲಿಸುವಾಗ ನಕಲಿ ಚಿನ್ನಾಭರಣಗಳೆಂದು ತಿಳಿದು ಬಂದಿರುತ್ತದೆ. ಈ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. 5ಜನ ಗ್ರಾಹಕರಿಂದ 20 ಸಾಲದ ಖಾತೆಗಳಲ್ಲಿ ಒಟ್ಟು ರೂ-68.35 ಲಕ್ಷ ಸಾಲ ಪಡೆದಿದ್ದು, ಅದರಲ್ಲಿ ಪೂರ್ತಿ ಸಾಲ ಪಾವತಿಸಿರುತ್ತಾರೆ ಆದರೆ ಗ್ರಾಹಕರು ಇಟ್ಟಿರುವ ಆಭರಣಗಳು ನಕಲಿ ಆಭರಣಗಳೆಂದು ಇಂಟರನಲ್ ಆಡಿಟ್ ನಲ್ಲಿ ತಿಳಿದು ಬಂದಿದ್ದು, ಜೂನ್ 4ರಂದು ಪ್ರಕರಣ ದಾಖಲಿಸಲಾಗಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...
Screenshot 2026 01 11 09 11 30 42 c37d74246d9c81aa0bb824b57eaf7062

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆ ಬಿದರೆ ಶಾಖೆಯ ಸಿಬ್ಬಂದಿಯಾದ ವಾಸವಿ ಕೆ.ಕೆ. ಕೋಂ ಗಿರೀಶ ಡಿ, ಸಹಾಯಕ ವ್ಯವಸ್ಥಾಪಕರು ಸಿಬ್ಬಂದಿ ಸಂಖ್ಯೆ-6075, ಚೇತನ ಕೆ.ಪಿ ಸಹಾಯಕ ವ್ಯವಸ್ಥಾಪಕರು ಸಿಬ್ಬಂದಿ ಸಂಖ್ಯೆ-6368 ಪ್ರಾದೇಶಿಕ ಕಛೇರಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಕ್ಕಮಗಳೂರು. ಚಿನ್ನದ ಆಭರಣಗಳ ಮೌಲ್ಯಮಾಪಕರಾದ ಬಾಬು ಗೋವಿಂದ ಶೇಟ ಬಿನ್ ಗೋವಿಂದಪ್ಪ, ಗಣೇಶ ಬಾಬು ಶೇಟ ಬಿನ್ ಬಾಬು ಗೋವಿಂದ ಶೇಟ ಹಾಗೂ ಬ್ಯಾಂಕ್‌ನ ಕೆಲವು ಗ್ರಾಹಕರಾದ ಮೈಲಾರಪ್ಪ, ಪ್ರತೀಮಾ ಆರ್, ರಂಜಿತಾ ವೈ ಆರ್, ರತ್ನಮ್ಮ, ಸುಶ್ಮಿ ಟಿ.ಕೆ ಕಾರಣರಾಗಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಜ. 7ರಂದು 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ

ಈ ಕುರಿತು ಪಂಚನಹಳ್ಳಿ ಠಾಣೆಯಲ್ಲಿ ಮೊ.ನಂ 36/2025, ಕಲಂ 318(2), 318(3), 318(4), 61(2),(A) ಬಿಎನ್‌ಎಸ್ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಮುಚ್ಚು ಹಾಕಲು ಬೇರೆ ಬೇರೆ ಹೊನ್ನರ ರೂಪಿಸುತ್ತಿದ್ದಾರೆ. ಹಾಗೆಯೇ, ಆರೋಪಿಗಳಾಗಿರುವ ಶಾಖಾ ಮುಖ್ಯಸ್ಥರು ಲಕ್ಷಗಟ್ಟಲೇ ಹಣವನ್ನು ಬೇರೆಡೆ ಪಡೆದು, ತನಿಖೆ ಮುಚ್ಚು ಹಾಕಲು ಮುಂದಾಗಿದ್ದಾರೆ. ಈ ತನಿಖೆಯನ್ನು ನ್ಯಾಯ ಬದ್ಧವಾಗಿ ಕೈಗೊಳ್ಳಬೇಕೆಂದು ಕೆ.ಬಿದರೆ ಗ್ರಾಮದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಳು ಭಾಷೆಗೆ ಅಧಿಕೃತ ಮಾನ್ಯತೆ: ತುಳುನಾಡ ರಕ್ಷಣಾ ವೇದಿಕೆಗೆ ಪ್ರವೀಣ ಪರ್ಕಳ ಅಭಿನಂದನೆ

ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ...

ಗದಗ ತಾಲೂಕನ್ನು ಬರಪೀಡಿತ ಸೇರ್ಪಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಎಚ್.ಕೆ ಪಾಟೀಲ್ ಎಚ್ಚರಿಕೆ

ಗದಗ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ, ಶಾಸಕ ಸ್ಥಾನಕ್ಕೆ...

ರಿಯಾಯಿತಿ ನೆಪದಲ್ಲಿ ನಿಯಮ ಉಲ್ಲಂಘನೆ: 16 ಫಾರ್ಮಸಿಗಳ ಲೈಸೆನ್ಸ್ ರದ್ದುಗೊಳಿಸಿದ FDA

ಭಾರಿ ಪ್ರಮಾಣದ ಡಿಸ್ಕೌಂಟ್ (ರಿಯಾಯಿತಿ) ನೀಡಿ ಔಷಧ ಮಾರಾಟ ಮಾಡುತ್ತಿದ್ದ ಹಾಗೂ...