ಶಹಾಬಾದ್‌ನಲ್ಲಿ ಅಂಬೇಡ್ಕರ್ ಹಬ್ಬದ

Date:

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನೋತ್ಸವದ ಅಂಗವಾಗಿ “ಅಂಬೇಡ್ಕರ್ ಹಬ್ಬ” ಪ್ರಯುಕ್ತ ಮಂಗಳವಾರ ಶಹಾಬಾದ್‌ನ ಸರಕಾರಿ ಬಾಲಕರ ಪ್ರೌಢ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸಂವಿಧಾನ, ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕುರಿತ ಚರ್ಚೆಗಳು ಪ್ರಾಮುಖ್ಯತೆ ಪಡೆದವು.

- Advertisement -

ಕಾರ್ಯಕ್ರಮಕ್ಕೆ ಬುದ್ಧ, ಬಸವ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ವರಜ್ಯೋತಿ ಮಹಾಥೇರೋ ಭಂತೆ ದಿವ್ಯ ಸಾನ್ನಿಧ್ಯ ವಹಿಸಿ ಪಂಚಶೀಲ ಬೋಧಿಸಿದರು. ಸಭೆಯ ಆರಂಭದಲ್ಲೇ ಬೌದ್ಧ ಧಮ್ಮದ ಶಾಂತಿ, ಸಮಾನತೆ ಮತ್ತು ಮಾನವೀಯತೆಯ ಸಂದೇಶಗಳನ್ನು ಸಾರಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ದಸಂಸ ಹಿರಿಯ ಮುಖಂಡ ಮರೆಪ್ಪ ಹಳ್ಳಿ, “ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬ ಪ್ರಜೆಯಿಗೂ ಸಂವಿಧಾನದ ಮೂಲಕ ಸಮಾನ ಹಕ್ಕುಗಳನ್ನು ನೀಡಿದ್ದಾರೆ. ಇಂದು ದೇಶದ ಪ್ರತಿಯೊಬ್ಬರೂ ಸಂವಿಧಾನದ ಫಲಾನುಭವಿಗಳಾಗಿದ್ದಾರೆ. ಆದರೆ ಇದೇ ಸಂವಿಧಾನದ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ,” ಎಂದು ಕಿಡಿಕಾರಿದರು.

“ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕನಲ್ಲ; ಇಡೀ ದೇಶದ ಶೋಷಿತ, ಹಿಂದುಳಿದ ಹಾಗೂ ದುರ್ಬಲ ವರ್ಗಗಳ ಧ್ವನಿಯಾಗಿದ್ದರು,” ಎಂದು ಹೇಳಿದರು.

1899995

ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್ ಮಾತನಾಡಿ, “ಡಾ. ಅಂಬೇಡ್ಕರ್ ಅವರು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಾಗಿರಲಿಲ್ಲ. ಜಾತ್ಯಾತೀತ ತತ್ವಗಳ ಆಧಾರದ ಮೇಲೆ ಎಲ್ಲ ವರ್ಗಗಳ ಜನರು ಗೌರವಯುತವಾಗಿ ಬದುಕಬೇಕು ಎಂಬ ಆಶಯ ಹೊಂದಿದ್ದರು. ಮಹಿಳೆಯರು, ಶೋಷಿತರು ಹಾಗೂ ಸಾಮಾನ್ಯ ಜನರು ಸ್ವಾಭಿಮಾನದಿಂದ ಬದುಕಲು ಅವರು ದಾರಿ ತೋರಿದರು,” ಎಂದರು.

1899993

“ಬಸವಣ್ಣ ಸಮಾನತೆಯ ಸಂದೇಶ ಸಾರಿದರೆ, ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗವನ್ನು ತೋರಿಸಿದರು. ಸಂವಿಧಾನದ ಶಕ್ತಿಯಿಂದಲೇ ಇಂದು ನಾವು ಹಕ್ಕುಗಳೊಂದಿಗೆ ಬದುಕಲು ಸಾಧ್ಯವಾಗಿದೆ,” ಎಂದು ಹೇಳಿದರು.

ಅವರು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಮಾತನಾಡುತ್ತಾ, “ಖರ್ಗೆ ಅವರು ರಾಜಕೀಯದ ಜೊತೆಗೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳೊಂದಿಗೆ ಬದುಕುತ್ತಿರುವ ನಾಯಕರು,” ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ವಿಜಯಕುಮಾರ್ ಸಾಲಿಮನಿ ಮಾತನಾಡಿ, “ಪ್ರತಿ ದಿನ ಸತ್ಯವನ್ನು ಪ್ರಚಾರ ಮಾಡಬೇಕು ಎಂದು ಬಾಬಾ ಸಾಹೇಬ್ ಹೇಳಿದ್ದಾರೆ. ಆದರೆ ಇಂದು ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಆತಂಕ ವ್ಯಕ್ತಪಡಿಸಿದರು.

1899994

“ಈ ದೇಶದ ಮೂಲಭೂತ ವ್ಯವಸ್ಥೆಯಲ್ಲಿ ಚಾತುರ್ವರ್ಣ ಮತ್ತು ವರ್ಣಾಶ್ರಮದಂತಹ ಅಸಮಾನತೆಯ ತತ್ವಗಳು ಬೇರೂರಿದ್ದವು. ಈ ದೇಶವನ್ನು ಪ್ರಬುದ್ಧ ಭಾರತವನ್ನಾಗಿಸಿ ಎಲ್ಲ ಜಾತಿ-ಧರ್ಮದವರು ಸಮಾನತೆಯಿಂದ ಬದುಕಬೇಕು ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು,” ಎಂದರು.

“ಜ್ಞಾನ ದಾನವೇ ಶ್ರೇಷ್ಠ ದಾನ ಎಂದು ಬಾಬಾ ಸಾಹೇಬ್ ಹೇಳಿದ್ದಾರೆ. ಆದರೆ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ನಳಂದ ವಿಶ್ವವಿದ್ಯಾಲಯದಂತಹ ಜ್ಞಾನ ಪರಂಪರೆಯನ್ನು ಜಗತ್ತಿಗೆ ನೀಡಿದ ದೇಶ ನಮ್ಮದು,” ಎಂದು ಹೇಳಿದರು.

ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಸಮಾಜ ಸುಧಾರಣೆಗೆ ಹೋರಾಡಿದ ವಿಚಾರವನ್ನು ಉಲ್ಲೇಖಿಸಿದ ಅವರು, “1937ರಲ್ಲಿಯೇ ‘ನಾನು ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯುವುದಿಲ್ಲ’ ಎಂದು ಅಂಬೇಡ್ಕರ್ ಘೋಷಿಸಿದ್ದರು. ನಂತರ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಮಾನವ ಸಮಾನತೆಯ ದಾರಿಯನ್ನು ಆರಿಸಿಕೊಂಡರು,” ಎಂದರು.

“ಎಲ್ಲಿ ನನಗೆ ಅವಮಾನ ಆಗಿತ್ತೋ ಅಲ್ಲಿಯೇ ನಾನು ಸನ್ಮಾನ ಪಡೆಯಬೇಕು ಎಂಬ ಸಂಕಲ್ಪದಿಂದ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ದೇಶದ ಹಣೆಬರಹ ಬದಲಿಸಿದರು,” ಎಂದು ಹೇಳಿದರು.

ಕಾರ್ಯಕ್ರಮವನ್ನು ಜ್ಞಾನ ಪ್ರಕಾಶ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, “ಅಂಬೇಡ್ಕರ್ ಜೀವಂತವಾಗಿರುವುದು ನಿಮ್ಮ ಪೆನ್ನಿನಲ್ಲಿ. ಸಮಾಜದ ಅನ್ಯಾಯ, ಅಜ್ಞಾನ ಮತ್ತು ದುಷ್ಟಶಕ್ತಿಗಳನ್ನು ಹೊಡೆದುಹಾಕುವ ಶಕ್ತಿ ಪೆನ್ನಿಗಿದೆ,” ಎಂದು ಹೇಳಿದರು.

1899996

“ಅಂಬೇಡ್ಕರ್ ಅವರು ಪೆನ್ನಿನ ಮೂಲಕ ಸಂವಿಧಾನ ಬರೆದು ದೇಶಕ್ಕೆ ದಿಕ್ಕು ತೋರಿದರು. ಇಂದು ಆ ಸಂವಿಧಾನದ ಆಧಾರದ ಮೇಲೆ ನಾವು ಅಧಿಕಾರದ ಸ್ಥಾನಗಳಿಗೆ ಏರಿದ್ದೇವೆ,” ಎಂದರು.

ಅವರು ದೇಶದ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಕುರಿತೂ ಕಳವಳ ವ್ಯಕ್ತಪಡಿಸಿ, “ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಕೈಬಿಡುವ ಘಟನೆಗಳು ನಡೆಯುತ್ತಿವೆ. ಸಂವಿಧಾನವನ್ನು ಮೌನವಾಗಿ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಈ ದೇಶವನ್ನು ಉಳಿಸುತ್ತಿರುವುದು ಅಂಬೇಡ್ಕರ್ ಬರೆದ ಸಂವಿಧಾನವೇ,” ಎಂದು ಹೇಳಿದರು.

“ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆಶಯದಡಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಬಸವಣ್ಣ ‘ಕಲ್ಲು ದೇವರಲ್ಲ, ಮಣ್ಣು ದೇವರಲ್ಲ’ ಎಂದು ಅಂಧಶ್ರದ್ಧೆ ವಿರೋಧಿಸಿದರು. ಗ್ರಂಥಾಲಯಗಳು ಜನರ ಕಣ್ಣು ತೆರೆಸುವ ಶಕ್ತಿಯಾಗಿದೆ,” ಎಂದು ಹೇಳಿದರು.

ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ಆಧಾರಿತ ಹತ್ಯೆಗಳು ಹಾಗೂ ಸಾಮಾಜಿಕ ಅಸಮಾನತೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಅವರು, “ಜಾತಿ ವಿನಾಶ ಪುಸ್ತಕವನ್ನು ಒಮ್ಮೆ ಓದಿದರೆ ಅಂಬೇಡ್ಕರ್ ಅವರ ಮಹತ್ವ ಅರಿವಾಗುತ್ತದೆ. ಅಂಬೇಡ್ಕರ್ ಅವರನ್ನು ಓದಿದವರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ,” ಎಂದರು.

1899238

“ದೇಶದ ವಿದ್ಯಮಾನಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಪಾರ್ಲಿಮೆಂಟ್ ಭವಿಷ್ಯ ಬರೆದು ಕೊಡುವ ಸಾಧನ ಪೆನ್ನು. ಆದ್ದರಿಂದಲೇ ಅಂಬೇಡ್ಕರ್ ಅವರನ್ನು ‘ದಿ ಕಿಂಗ್ ಆಫ್ ನಾಲೆಡ್ಜ್’ ಎಂದು ಕರೆಯಲಾಗುತ್ತದೆ,” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಪೂಜಪ್ಪ ಮೈತ್ರಿ ನಿರೂಪಿಸಿದರು. ಅಲ್ಲಮಪ್ರಭು ಮಸ್ಕಿ ಸ್ವಾಗತಿಸಿದರು. ಸುನೀಲ್ ದೊಡ್ಡಮನಿ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ಯನಗುಂಟಿಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಸಂತಕುಮಾರ ಕೆ. ಕಾಂಬಳೆ, ಡಾ. ಫಾರೋಕ್ ಮಣೂರ, ಸುರೇಶ್ ಮೆಂಗನ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

1899240

ಈ ಸಂದರ್ಭದಲ್ಲಿ ಸತೀಶ ಕೋಬಾಳಕರ್, ಮಲ್ಲಣ್ಣ ಮಸ್ಕಿ, ಸುಭಾಶ ಸಾಕರೆ, ಪ್ರವೀಣ ರಾಜನ್, ಮಲ್ಲಿಕಾರ್ಜುನ ಹಳ್ಳಿ, ಪುನೀತ ಹಳ್ಳಿ, ಸುನೀಲ ದೊಡ್ಡಮನಿ, ನಿಂಗಪ್ಪ, ಕನಗನಹಳ್ಳಿ, ರಾಜು ಸಾಗರ, ಹರೀಶ ಕರಣಿಕ, ಅನೀಲ ದೊಡ್ಡಮನಿ, ಶರಣು ಧನೇಕರ ಪರಶುರಾಮ ಚಲವಾದಿ, ಶ್ಯಾಮ ನಂದೂರಕರ, ಶೈಲೇಂದ್ರ ಕಾಳನೂ, ಪ್ರವೀಣ ರಾಮಕೊಟ್ಟಿ, ಲಕ್ಷ್ಮೀಕಾಂತ ನಡವಿನಕೇರಿ, ಸಾಗರ ಮೇತ್ರೆ ನಾಗೇಂದ್ರ ನಾಟೇಕರ್, ವಿಕಾಶ ಕರಣಿಕ, ಶ್ರೀಶೈಲ ನಡುವಿನಕೇರಿ, ಶಿವಪ್ಪ ಸಾತನೂರ, ಹುಲಗಪ್ಪ ನಾಟೇಕರ್, ಶಿವಯೋಗಿ ಪಾಳ ನಾಗೇಂದ್ರ ಧನ್ನೇಕರ್, ನಾಗರಾಜ ಕಿಣಿಕೇರಿ, ಪ್ರವೀಣ ಬಣಮಗಿ, ಅನೀಲ ಕೋರಬಾ, ಕುಶಾಲ ಕನ್ನಗನಹಳ್ಳಿ, ರಾಜು ನಾಟೇಕರ್ ವಿಜಯಕುಮಾರ ಮೊರಟಗಿ, ಕೀರಣ ಅರ್ಜುಣಗಿ, ಅರುಣಕುಮಾರ ಕಟ್ಟಿ, ಜೈಭೀಮ ಹುಗ್ಗಿ, ರಾಮಕುಮಾರ ಸಿಂಗೆ, ಶರಣಬಸಪ್ಪ ಧನ್ನಾ, ರಾಜು ಜಂಬಗಿ, ನಾಗರಾಜ ಸಿಂಗೆ, ಶಿವಲಿಂಗಪ್ಪ ಹೆಬ್ಬಳಾಕರ್ ಸಿದ್ರಾಮ ಉದಯಕರ್. ಕೃಷ್ಣಪ್ಪ ಕರಣಿಕ, ಶರಣಬಸಪ್ಪ ಸೂಗೂರು, ಶೀವಶಾಲ ಪಟ್ಟಣಕರ್, ಬಸವರಾಜ ಮಯೂರ, ಸ್ನೇಹಲ್ ಜೈ ಪಿ.ಎಸ್. ಮೇತ್ರೆ, ಮಲ್ಲಿಕಾರ್ಜುನ ಕಟ್ಟಿಮನಿ, ಶಂಕರ ಅಳ್ಕೊಳಿ, ಹರಿಚಂದ್ರ ಕೋಬಾಳಕರ್, ಮಲ್ಲಣ್ಣ ಮರತೂರ, ಶಿವಕುಮಾರ ಸುರುಪುರಕರ್ ಮಲ್ಲಿಕಾರ್ಜುನ ಜಲಂಧರ್, ಭರತ ಧನ್ನಾ, ಉದಯಕುಮಾರ ಸಾಗರ, ನಾಗೇಂದ್ರಪ್ಪ ಹುಗ್ಗಿ, ಮಲ್ಲಿಕಾರ್ಜುನ ದೊಡ್ಡ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, 1 ನಾಮಪತ್ರ ತಿರಸ್ಕೃತ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆಯಲಿರುವ...

ಕಲಬುರಗಿ | ಹಳೆಯ ನೆನಪುಗಳಿಗೆ ಮರುಜೀವ: ಹಳೆಯ ವಿದ್ಯಾರ್ಥಿಗಳ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ

ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ...

ಕಲಬುರಗಿ | ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ; ಕಾರಾಗೃಹ ಡಿಐಜಿ ಬಂಧನ

ಬೆಂಗಳೂರು ಸುಪ್ರೀಂ ಕೋರ್ಟ್‌ ಆದೇಶದ ಮಾದರಿಯನ್ನು ಅನುಕರಿಸಿ ನಕಲಿ ಆದೇಶವೊಂದನ್ನು ಸಿದ್ಧಪಡಿಸಿ...

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...