ಪಂಚಮಸಾಲಿ ಪೀಠಗಳ ಗೊಂದಲ -ಭಾಗ 11 | ಪಂಚಪೀಠಗಳು ಲಿಂಗಾಯತ ಉಪವರ್ಗಗಳ ಋಣದಲ್ಲಿವೆ

Date:

ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು ಮತ್ತು ಅಮಾಯಕತನವನ್ನು ದುರುಪಯೋಗ ಪಡಿಸಿಕೊಂಡು ವೀರಶೈವ ಪಂಚಪೀಠಗಳ ಜಾತಿ ಜಂಗಮರು ಅವರನ್ನು ಶೋಷಿಸುತ್ತಿದ್ದಾರೆ.

- Advertisement -

ಸ್ವಾತಂತ್ರಪೂರ್ವದಲ್ಲಿ ಲಿಂಗಾಯತ ಧರ್ಮದ ಉನ್ನತಿ ಹಾಗು ಸಂಘಟನೆಗೆ ಸರ್ ಸಿದ್ಧಪ್ಪ ಕಂಬಳಿ, ಅರಟಾಳ್ ರುದ್ರಗೌಡ ಮುಂತಾದ ಪಂಚಮಸಾಲಿ ಉಪವರ್ಗದ ಹಿರಿಯರು ಮಾಡಿದ ಘನ ಕಾರ್ಯಗಳು ಸ್ವಾತಂತ್ರ್ಯ ನಂತರ ಸಹ ಮುಂದುವರೆದವು. ಅನೇಕ ಬಸವ ಪರಂಪರೆಯ ವಿರಕ್ತ ಮಠಗಳನ್ನು ಸ್ಥಾಪಿಸಿದ ಪಂಚಮಸಾಲಿ ಉಪವರ್ಗ ಕೆಲವು ಮಠಗಳ ಕರ್ಣಧಾರತ್ವವನ್ನು ವಹಿಸಿದ ಉದಾಹರಣೆಗಳಿವೆ. ಕಾಲಾನಂತರ ಆ ಮಠಗಳು ಜಂಗಮ ವರ್ಗದ ಪಾಲಾಗಿವೆ. ಇನ್ನು ಪಂಚಮಸಾಲಿ ಸಂಘಟನೆ ಹಾಗು ಪೀಠಗಳ ಸ್ಥಾಪನೆಗೆ ಮೊದಲು ಆ ಉಪವರ್ಗವು ವೀರಶೈವ ಪಂಚಪೀಠಗಳನ್ನು ಬೇಡಿದ್ದನ್ನು ನೀಡಿ ಸಾಕಿ ಸಲಹಿದೆ. ವೀರಶೈವ ಪಂಚಪೀಠಗಳ ಜಾತಿ ಜಂಗಮರ ಶ್ರೇಯೋಭಿವೃದ್ಧಿಯಲ್ಲಿ ಪಂಚಮಸಾಲಿ ಉಪವರ್ಗದ ಕೊಡುಗೆ ಮಹತ್ವದ್ದಾಗಿದೆ. ವೀರಶೈವ ಪಂಚಪೀಠಗಳು ಮುಗ್ಧ ಪಂಚಮಸಾಲಿಗರು ಕೊಟ್ಟ ಅಪಾರ ದೇಣಿಗೆಯಿಂದ ಆರ್ಥಿಕವಾಗಿ ಸೊಕ್ಕಿ ಬಲಾಢ್ಯಗೊಂಡಿವೆ. ದುರಂತವೆಂದರೆ ಪಂಚಮಸಾಲಿಗರ ಸಹಾಯದಿಂದಲೇ ಕೊಬ್ಬಿದ ವೀರಶೈವ ಪಂಚಪೀಠಗಳ ಜಾತಿ ಜಂಗಮರು ಮುಗ್ಧ ಪಂಚಮಸಾಲಿಗಳಿಗೆ ತಮ್ಮ ಐದು ಪೀಠಗಳಲ್ಲಿ ಒಂದು ಪೀಠ ಬಿಟ್ಟುಕೊಡಲಿಲ್ಲ. ಹೋಗಲಿ ಒಂದಷ್ಟು ಬಡ ಪಂಚಮಸಾಲಿ ಯುವಕರನ್ನು ಪಂಚಪೀಠಗಳ ಮಠಗಳಲ್ಲಾಗಲಿ ಅಥವಾ ಸಂಸ್ಥೆಗಳಲ್ಲಾಗಲಿ ಕೆಲಸ ಕೊಡಲಿಲ್ಲ, ಬದಲಾಗಿ ತಮ್ಮ ಪಂಚಪೀಠಗಳ ಮಠ, ಪೀಠ, ಮಾಹೇಶ್ವರ ಬ್ಯಾಂಕ್ ಮಂತಾದ ತಮ್ಮ ಜಾತಿಯ ಸಂಘ ಸಂಸ್ಥೆಗಳಲ್ಲಿ ಕೇವಲ ಜಾತಿ ಜಂಗಮರಿಗೆ ಮಾತ್ರ ಅವಕಾಶ ಕೊಡಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು ಮತ್ತು ಅಮಾಯಕತನವನ್ನು ದುರುಪಯೋಗ ಪಡಿಸಿಕೊಂಡು ವೀರಶೈವ ಪಂಚಪೀಠಗಳ ಜಾತಿ ಜಂಗಮರು ಅವರನ್ನು ಶೋಷಿಸುತ್ತಿದ್ದಾರೆ. ಇವರ ಶೋಷಣೆ, ಮಡಿವಂತಿಕೆ, ಜಾತಿ ಶ್ರೇಷ್ಠತೆಗೆ ಬೇಸತ್ತು ಕೊಡೆಕಲ್ಲು ಬಸವಣ್ಣ, ಸಿದ್ಧಾರೂಢರು, ಹಾಗು ಅಕ್ಕಲಕೋಟೆಯ ರೇವಣಸಿದ್ಧ ಶರಣರು ಲಿಂಗಾಯತ ಧರ್ಮದಿಂದ ದೂರವಾದರು. ಕರ್ನಾಟಕದಲ್ಲಿ ವೀರಶೈವ ಜಾತಿ ಜಂಗಮರ ಮಡಿವಂತಿಕೆಯನ್ನು ಕೇಳಿ ತಿಳಿದ ಡಾ. ಅಂಬೇಡ್ಕರ್, ಛತ್ರಪತಿ ಶಾಹು ಮಹಾರಾಜರ ಅವರು, ಲಿಂಗಾಯತ ಧರ್ಮಕ್ಕೆ ಸೇರುವ ನಿರ್ಧಾರದಿಂದ ಹಿಂದೆ ಸರಿದರು. ಮುಂದೆ ಆರೂಢ ಪರಂಪರೆಯ ಮಠಾಧೀಶರು ಜಾತಿ ಜಂಗಮರಿಂದ ಅಂತರ ಕಾಯ್ದುಕೊಂಡರು. ವಿಜಯಪುರದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳು ಜಂಗಮರಲ್ಲದ ಕಾರಣ ಅವರಿಗೆ ಲಿಂಗದೀಕ್ಷೆ ಕೊಡಲು ಬರುವುದಿಲ್ಲ ಎಂದು ಅವರ ಕುರಿತು ಅಪಪ್ರಚಾರ ಮಾಡಲಾಯಿತು, ಅವರು ಹಡಪದ ಸಮಾಜಕ್ಕೆ ಸೇರಿದವರು ಎಂದು ಸುದ್ದಿ ಹರಿಬಿಡಲಾಯಿತು. ಈ ಎಲ್ಲವನ್ನು ಬಹಳ ಹತ್ತಿರದಿಂದ ನೋಡಿದ ಅವರ ಶಿಷ್ಯ ಸಿದ್ಧೇಶ್ವರ ಸ್ವಾಮಿಗಳು ವೀರಶೈವ ಮತ್ತು ಲಿಂಗಾಯತ ಮಠ ಪರಂಪರೆಯಿಂದ ಅಂತರ ಕಾಯ್ದುಕೊಂಡರು.

ಸಿದ್ಧೇಶ್ವರ ಸ್ವಾಮಿಗಳ ಶಿಷ್ಯರಲ್ಲಿ ಒಬ್ಬನಾದ ಕನೇರಿಯ ಕಾಡಸಿದ್ಧ ಎಂಬ ಹೆಸರಿನ ಅನಾಗರಿಕ ಕಾವಿಧಾರಿಯು, ಜಂಗಮ ಮಠಾಧೀಶರ ವಿರುದ್ಧ ಒಂದು ಸಮಾನ ಮನಸ್ಕ ಜಂಗಮೇತರ ಮಠಾಧೀಶರ ಗುಂಪು ಕಟ್ಟಿಕೊಂಡು ಜಾತಿ ಜಂಗಮರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾನೆ. ದುರಂತವೆಂದರೆ, ಲಿಂಗಾಯತ ಧರ್ಮ ಮತ್ತು ಬಸವ ತತ್ವದ ಮೇಲಿನ ದ್ವೇಷಕ್ಕಾಗಿ ಜಂಗಮದ್ವೇಷಿ ಕಾಡುಸಿದ್ಧನಿಗೆ ಅದೇ ಜಾತಿ ಜಂಗಮರು ಬೆಂಬಲಿಸುತ್ತಿರುವುದು. ಸಿದ್ಧೇಶ್ವರ ಸ್ವಾಮಿಗಳ ಸರಳತೆ ಮತ್ತು ವಿದ್ವತ್ತನ್ನು ಕೆಲವು ವಿರಕ್ತ ಮಠಗಳು ದುರ್ಬಳಕೆ ಮಾಡಿಕೊಂಡದ್ದೂ ಇದೆ. ಆದರೆ, ಸಿದ್ಧೇಶ್ವರ ಸ್ವಾಮಿಗಳನ್ನು ವೀರಶೈವ ಪಂಚಪೀಠಗಳ ಜಾತಿ ಜಂಗಮ ಮಠಾಧೀಶರು ಯಾವತ್ತೂ ಬೆಂಬಲಿಸಿಲ್ಲ ಹಾಗು ಗೌರವಿಸಿಲ್ಲ, ಕಾರಣ ಅವರು “ಜಾಗತಿಕ ಧರ್ಮಗಳ ಸಾರ ಸೂಕ್ತಿ” ಎನ್ನುವ ಕಿರು ಹೊತ್ತಿಗೆ ರಚಿಸಿ ಅದರಲ್ಲಿ ಬಸವಪ್ರಣೀತ ವಚನಾಧಾರಿತ ಲಿಂಗಾಯತ ಧರ್ಮದ ಸಾರ ಸೂಕ್ತಿಗಳನ್ನು ವಿವರಿಸಿ ಬಸವಣ್ಣ ಸ್ಥಾಪಿತ ಲಿಂಗಾಯತವು ಒಂದು ಸ್ವತಂತ್ರ ಧರ್ಮ ಎನ್ನುವುದನ್ನು ಸಾರಿ ಅದಕ್ಕೆ ಜಾಗತಿಕ ಧರ್ಮಗಳ ಸಾಲಿನಲ್ಲಿ ಸ್ಥಾನ ಕಲ್ಪಿಸಿದ್ದು. ಈ ಸಂಗತಿ ಸಿದ್ಧೇಶ್ವರ ಸ್ವಾಮಿಗಳ ಶಿಷ್ಯರೆಂದು ಹೇಳಿಕೊಂಡು ಅಂಡಲೆಯುವ ಕನೇರಿ ಕಾಡಸಿದ್ಧ ಇತ್ಯಾದಿ ಹಿಂದೂತ್ವಕ್ಕೆ ತಮ್ಮನ್ನು ತಾವು ಒತ್ತಿ ಇಟ್ಟುಕೊಂಡಿರುವ ಗಾಂಪರ ಗುಂಪು ಕಡೆಗಣಿಸುವ ಮೂಲಕ ಸಿದ್ಧೇಶ್ವರ ಸ್ವಾಮಿಗಳನ್ನು ನೇರವಾಗಿಯೇ ಅವಮಾನಿಸಿತ್ತಿವೆ.

ಪಂಚಪೀಠಗಳ ವೀರಶೈವ ಜಾತಿ ಜಂಗಮರಿಂದ ತುಚ್ಛವಾಗಿ ಪರಿಗಣಿಸಲ್ಪಟ್ಟು, ತಿರಸ್ಕೃತಗೊಂಡ ಗದುಗಿನ ಸದಾಶಿವಾನಂದ(ಕೈವಲ್ಯಾನಂದ), ಕನೇರಿಯ ಕಾಡಸಿದ್ಧ, ಅಮೃತಾನಂದ, ಮಲೆಯಾಳಿ ತೇಜೊಮಯಾನಂದ ಮುಂತಾದ ಹಿಂದುತ್ವವಾದಿ ವಿದ್ವಂಸಕ ಮನಸ್ಥಿತಿಯ ಕೋಮುವಾದಿ ಕಾವಿಗಳು ಯಾವುದೇ ಒಂದು ನಿರ್ದಿಷ್ಟ ಅಧ್ಯಾತ್ಮಿಕ ಹಿನ್ನೆಲೆ ಅಥವಾ ಒಂದು ದರ್ಶನ ಸಿದ್ಧಾಂತದ ಹಿನ್ನೆಲೆ ಇಲ್ಲದೆ, ಅಥವಾ ಸಿದ್ಧಾರೂಢರು ಪ್ರತಿಪಾದಿಸಿದ ಆರೂಢ/ವೇದಾಂತ ದರ್ಶನವನ್ನೂ ಅನುಸರಿಸದೆ ಸಿದ್ಧೇಶ್ವರ ಸ್ವಾಮಿಗಳ ಜ್ಞಾನಯೋಗಾಶ್ರಮದಲ್ಲಿ ತಿಂದು ಉಂಡು ದಂಡಪಿಂಡಗಳಂತೆ ಬೆಳೆದು ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಇವರುಗಳು ಸಿದ್ಧೇಶ್ವರ ಸ್ವಾಮಿಗಳ ಸರಳತೆ, ಸನ್ನಡತೆ, ಸೌಜನ್ಯ, ವಿದ್ವತ್ತು, ಯಾವುದನ್ನೂ ಅನುಸರಿಸದೆ, ಅನುಕರಿಸದೆ, ಅಳವಡಿಸಿಕೊಳ್ಳದೆ ಐಶಾರಾಮಿ ಬದುಕಿನ ಆಮೀಷಗಳ ಹಿಂದೆ ಬಿದ್ದು ಹಿಂದುತ್ವ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಅನ್ಯ ಧರ್ಮಗಳ ಮೇಲೆ ದ್ವೇಷ ಕಾರುತ್ತಾ ಅಂಡಲೆಯುತ್ತಿದ್ದಾರೆ. ಇವರೆಲ್ಲರೂ ಉತ್ತರಪ್ರದೇಶದಲ್ಲಿ ಒಬ್ಬ ಕಾವಿ ರಾಜಕಾರಣಿ ಮುಖ್ಯಮಂತ್ರಿ ಆಗಿದ್ದನ್ನು ಸಂಭ್ರಮಿಸುತ್ತಾ ಹಗಲುಗನಸು ಕಾಣುತ್ತಿದ್ದಾರೆ, ಆದರೆ ಇವರಿಗೆ ತಾವು ಬಸವಣ್ಣ, ಕನಕ, ಷರೀಫ್ ಮತ್ತು ಕುವೆಂಪು ಅವರ ವೈಚಾರಿಕ ನೆಲ ಕನ್ನಡ ನಾಡಿನಲ್ಲಿ ಇದ್ದೇವೆ ಎನ್ನುವುದು ಮರೆತು ಹೋಗಿದೆ. ಕನ್ನಡ ನಾಡು ಉತ್ತರ ಭಾರತದಂತೆ ಹಿಂದುತ್ವವಾದಿ ಕಾವಿಗಳಿಗೆ ಮಣೆ ಹಾಕುವ ವಿಚಾರಹೀನ ಪರಂಪರೆ ಹೊಂದಿಲ್ಲ ಎನ್ನುವ ಸಂಗತಿ ಈ ಮತಿಹೀನರು ತಿಳಿಯಬೇಕಿದೆ.

ವೀರಶೈವ ಜಾತಿ ಜಂಗಮರ ಮೇಲಿನ ಸಿಟ್ಟಿಗಾಗಿ ಪಂಚಮಸಾಲಿ ಉಭಯ ಪೀಠಗಳ ಸ್ವಾಮಿಗಳು ಯಾವ ನೆಲೆಯೂ ಇಲ್ಲದೆ ಅಂಡಲೆಯುವ ಈ ಉಡಾಳ ಹಿಂದುತ್ವವಾದಿ ಕಾವಿ ಪಟಾಲಂಗಳಂತೆ ತಾವೂ ಕೂಡ ಹಿಂದುತ್ವವಾದಿಗಳ ಆಮಿಷಗಳಿಗೆ ಬಲಿಯಾಗಿ ಅಡ್ಡ ಹಾದಿ ತುಳಿಯುವ ಅಗತ್ಯವಿರಲಿಲ್ಲ. ಏಕೆಂದರೆ ಪಂಚಮಸಾಲಿ ಪೀಠಗಳಿಗೆ ಬಸವಪ್ರಣೀತ ಲಿಂಗಾಯತ ಸಿದ್ಧಾಂತದ ಶ್ರೀಮಂತ ಹಿನ್ನೆಲೆ ಇದೆ. ಲಿಂಗಾಯತ ಸಂಪ್ರದಾಯದಲ್ಲಿ ಜಾತಿ ಜಂಗಮರು ಮಾತ್ರ ಮಠಾಧೀಶರಾಗಬೇಕು ಎನ್ನುವ ಕಡ್ಡಾಯ ನಿಯಮ ರೂಪಿಸಿದ ನಂತರ ದಾರ್ಶನಿಕ ವ್ಯಕ್ತಿತ್ವದ ಜಂಗಮೇತರ ಲಿಂಗಾಯತ ಸನ್ಯಾಸಿಗಳು ಅನಿವಾರ್ಯವಾಗಿ ವೇದಾಂತ ಒಪ್ಪಿಕೊಂಡರೆ ವಿನಃ ವೈದಿಕ ಮೌಢ್ಯಗಳನ್ನಲ್ಲ. ನಾವು ವೇದಾಂತಿಗಳು ಎನ್ನುವ ಇಂದಿನ ಆರೂಢ ಮಾರ್ಗದ ಸನ್ಯಾಸಿಗಳು ಲಿಂಗಾಯತ ಮಹಾಮಾರ್ಗವನ್ನು ಬಿಟ್ಟು ಹಿಂದುತ್ವದ ರಾಜಕೀಯ ಅಜೆಂಡಾದ ಭಾಗವಾಗಿ ಪ್ರತಿಪಾದಿಸಲ್ಪಡುತ್ತಿರುವ ಅಲ್ಪ ಮಾರ್ಗವನ್ನು ತುಳಿದು ಹಣ ಮಾಡುತ್ತಿದ್ದಾರೆ. ಇದೀಗ ಈ ಖದಿಮ ನಕಲಿ ಹಿಂದುತ್ವವಾದಿ ಕಾವಿಗಳನ್ನು ಬ್ರಾಹ್ಮಣವಾದಿ ಹಿಂದೂ ಸಂಘಟನೆಗಳು ಲಿಂಗಾಯತ ಮಠಾಧೀಶರು ಮತ್ತು ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಹೋರಾಟಗಾರರ ವಿರುದ್ಧ ಎತ್ತಿ ಕಟ್ಟಿವೆ. ಈಗ ಈ ಹಿಂದುತ್ವವಾದಿ ಕಾವಿಗಳು ಹಿಂದೂ ಸಂಘಟನೆಯ ಬಾಡಿಗೆ ಕಾಲಾಳುಗಳಾಗಿ ಲಕೋಟೆ ಆಶೆಗೆ ನಾಡಿನಾದ್ಯಂತ ಪೋಲಿಗಳಂತೆ ಅಂಡಲೆಯುತ್ತಿವೆ.

ಒಂದು ಸಂಗತಿಯನ್ನು ನಾವೆಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಸಾಂಪ್ರದಾಯಿಕ ಹಿನ್ನೆಲೆ ಇಲ್ಲದೆ ಬದುಕುವುದಕ್ಕಾಗಿ ಅಂಡಲೆಯುತ್ತಿದ್ದ ಪುಂಡ ಪೋಕರಿಗಳು ಸಿದ್ಧೇಶ್ವರ ಸ್ವಾಮಿಗಳ ಜ್ಞಾನಯೋಗಾಶ್ರಮದಲ್ಲಿ ಆಶ್ರಯ ಪಡೆದಿದ್ದವು. ಸಮಾಜ ಹಾಗು ಜನರ ಮೇಲೆ ಯಾವುದೆ ರೀತಿಯಲ್ಲಿ ಪ್ರಭಾವ ಬೀರುವಷ್ಟು ಶಕ್ತಿಯಾಗಲಿ, ಸಾಮರ್ಥ್ಯ ಅಥವಾ ಪ್ರಭಾವ ಇಲ್ಲದ ಆ ಎಲ್ಲಾ ಕಾವಿಗಳು ಈಗ ಅಪಾಯಕಾರಿ ಹಿಂದುತ್ವದ ಕಾಲಾಳುಗಳು. ಸಿದ್ಧೇಶ್ವರ ಸ್ವಾಮಿಗಳ ಗೌರವವನ್ನು ಈ ಕಾವಿಗಳು ಈಗ ನಾಶ ಮಾಡುತ್ತಿದ್ದಾರೆ. ಈ ನಾಡಿನ ಬ್ರಾಹ್ಮಣ ಮಠಾಧೀಶರು ಹಾಗು ಸಾಂಪ್ರದಾಯವಾದಿ ವೀರಶೈವ ಪಂಚಪೀಠಗಳ ಜಾತಿ ಜಂಗಮ ಮಠಾಧೀಶರು ಸಿದ್ಧೇಶ್ವರ ಸ್ವಾಮಿಗಳ ವಿದ್ವತ್ತು, ಸರಳತೆಯನ್ನು ಎಂದಿಗೂ ಗೌರವಿಸಲಿಲ್ಲ, ಬದಲಾಗಿ ಸ್ವಾಮಿಗಳನ್ನು ದ್ವೇಷಿಸುವ ಧೈರ್ಯ, ನೈತಿಕತೆಯೂ ಇಲ್ಲದೆ ಅನಿವಾರ್ಯವಾಗಿ ಮೌನವಹಿಸಿದ್ದರು. ಅವರ ಜನಪ್ರಿಯತೆ ಈ ಸಾಂಪ್ರದಾಯವಾದಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಆದರೆ ಸಿದ್ಧೇಶ್ವರ ಸ್ವಾಮಿಗಳನ್ನು ಗುರುತಿಸಿ ಗೌರವಿಸಿದ್ದು ಬಸವ ಪರಂಪರೆಯ ಲಿಂಗಾಯತ ವಿರಕ್ತ ಮಠಗಳು. ಸಿದ್ಧೇಶ್ವರ ಸ್ವಾಮಿಗಳು ಕೊನೆಗೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗ ಯಾವೊಬ್ಬ ಬ್ರಾಹ್ಮಣ ಮಠಾಧೀಶನಾಗಲಿ, ವೀರಶೈವ ಪಂಚಪೀಠಗಳ ಜಾತಿ ಜಂಗಮ ಮಠಾಧೀಶರಾಗಲಿ ಅಥವಾ ಹಿಂದುತ್ವವಾದಿ ಬಾಡಿಗೆ ಭಾಷಣಕಾರರಾಗಲಿ ಸೌಜನ್ಯಕ್ಕಾದರೂ ಬಂದು ಕಾಣಲಿಲ್ಲ. ಅಷ್ಟೇ ಅಲ್ಲದೆ ಸ್ವಾಮಿಗಳು ಲಿಂಗೈಕ್ಯರಾದಾಗ ಅವರ ಸಂಸ್ಕಾರದಲ್ಲೂ ಭಾಗವಹಿಸಲಿಲ್ಲ.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 10 | ಅರಟಾಳ್ ರುದ್ರಗೌಡರ ಕೊಡುಗೆ ಮರೆತ ಸಮಾಜ

ಸಿದ್ಧೇಶ್ವರ ಸ್ವಾಮಿಗಳು ಬ್ರಾಹ್ಮಣ ಧರ್ಮದ ಭಗವದ್ಗೀತೆಯ ಮೇಲೆ ಸುದೀರ್ಘ ಅವಧಿ ಅವ್ಯಾಹತವಾಗಿ ಪ್ರವಚನ ಮಾಡಿದ್ದಾರೆ, ವೀರಶೈವ ಜಾತಿ ಜಂಗಮರ ಸಿದ್ಧಾಂತ ಶಿಖಾಮಣಿಯ ಮೇಲೆ ಸಾಕಷ್ಟು ಬರೆದಿದ್ದಾರೆ. ಆದರೂ ಈ ಹಿಂದುತ್ವವಾದಿಗಳಾಗಲಿ, ವೀರಶೈವರಾಗಲಿ ಅವರನ್ನು ಬಂದು ಕಾಣಲಿಲ್ಲ. ಕಾರಣ, ಬ್ರಾಹ್ಮಣೇತರ, ಜಂಗಮೇತರ ಯಾವ ಜನಪ್ರಿಯ ವಿದ್ವಾಂಸರನ್ನೂ ಈ ಸಾಂಪ್ರದಾಯವಾದಿಗಳು ಸಹಿಸುವುದಾಗಲಿ, ಗೌರವಿಸುವುದಾಗಲಿ ಮಾಡಿಲ್ಲ ಎನ್ನುವುದಕ್ಕೆ ಇತಿಹಾಸದಲ್ಲಿ ಅನೇಕ ದಾಖಲೆಗಳಿವೆ. ಆದರೆ ಬಸವ ಪ್ರಣೀತ ಲಿಂಗಾಯತ ಮಠಗಳ ಶ್ರೀಗಳು ಸಿದ್ಧೇಶ್ವರ ಸ್ವಾಮಿಗಳನ್ನು ಸೂಕ್ತವಾಗಿ ಗೌರವಿಸಿದ್ದಾರೆ, ಅವರ ಕೊನೆಗಾಲದಲ್ಲಿ ಬಂದು, ಅವರನ್ನು ಕಂಡು ಧೈರ್ಯದ ಮಾತುಗಳನ್ನಾಡಿದ್ದಾರೆ, ಸ್ವಾಮಿಗಳು ಲಿಂಗೈಕ್ಯರಾದಾಗ ಬಂದು ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಸಿದ್ಧೇಶ್ವರ ಶ್ರೀಗಳ ಆಶ್ರಮದಲ್ಲಿ ಲಿಂಗಾಯತ ಭಕ್ತರ ದೇಣಿಗೆಯ ಅನ್ನು ತಿಂದು ಬೆಳೆದ ಅನೇಕ ಪುಂಡಪೋಕರಿ ಕಾವಿಗಳು ಸಿದ್ಧೇಶ್ವರ ಸ್ವಾಮಿಗಳ ಮನಸ್ಸಿಗೆ ವಿರುಧ್ಧವಾಗಿ, ಹಿಂದುತ್ವವಾದಿ ಸಂಘಟನೆಗಳ ಬಾಡಿಗೆ ಕಾಲಾಳುಗಳಾಗಿ ಕಾರ್ಯ ಮಾಡುತ್ತಿವೆ. ವೈದಿಕರ ಅಣತಿಯಂತೆ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಯ ಹೋರಾಟವನ್ನು ತೀವ್ರವಾಗಿ ವಿರೋಧಿಸುತ್ತಾ ಬಸವಾದಿ ಶರಣರ ಹೆಸರಲ್ಲಿ ವಿಚಿತ್ರ ಹಾಗು ವಿಲಕ್ಷಣ ರೀತಿಯ ಸಮಾವೇಷಗಳ ಹೆಸರಿನಲ್ಲಿ ನಾಡಿನಾದ್ಯಂತ ಲಜ್ಜೆ ಬಿಟ್ಟು ಹೆಜ್ಜೆ ಹಾಕುತ್ತಿವೆ. ಬ್ರಿಟೀಷರಿಗೆ ಒಡೆದಾಳುವ ನೀತಿ ಕಲಿಸಿದ ಕೋಮುವಾದಿ ವೈದಿಕ ಶಕ್ತಿಗಳು ಇಡೀ ಲಿಂಗಾಯತ ಧರ್ಮವನ್ನು ಚೂರು ಚೂರಾಗಿ ಒಡೆಯಲು ಪ್ರಯತ್ನಿಸುತ್ತಿರುವುದಕ್ಕೆ ಈ ಎಲ್ಲಾ ಘಟನೆಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ.

ಮುಂದುವರೆಯುವುದು….

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...