ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

Date:

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು. ಎನಗೆ ಜಂಗಮಸ್ಥಲವ ತೋರಿದಾತ ಸಿದ್ಧರಾಮಯ್ಯನು. ಎನಗೆ ಪ್ರಸಾದಿಸ್ಥಲವ ತೋರಿದಾತ ಬಿಬ್ಬಬಾಚಯ್ಯನು. ಎನಗೆ ಪ್ರಾಣಲಿಂಗಿಸ್ಥಲವ ತೋರಿದಾತ ಚಂದಯ್ಯನು. ಎನಗೆ ಶರಣಸ್ಥಲವ ತೋರಿದಾತ ಸೊಡ್ಡಳ ಬಾಚರಸನು. ಎನಗೆ ಐಕ್ಯಸ್ಥಲವ ತೋರಿದಾತ ಅಜಗಣ್ಣನು. ಎನಗೆ ನಿಜಸ್ಥಲವ ತೋರಿದಾತ ಪ್ರಭುದೇವರು. ಇಂತೀ ಸ್ಥಲಗಳ ಕಂಡು ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.

- Advertisement -

ಹಿರಿಯ ವಚನಕಾರ ಡೋಹರ ಕಕ್ಕಯ್ಯ ಮೂಲತಃ ಮಾಳವ ದೇಶದವರು. ಚರ್ಮ ಹದ ಮಾಡುವ ಕಾಯಕದಲ್ಲಿ ಮಾಡುತ್ತಿದ್ದ ಕಕ್ಕಯ್ಯ ಡೋಹರ ಸಮುದಾಯದವರು. ಕಲ್ಯಾಣದ ಶರಣರ ಪರಿಚಯವಾದ ಬಳಿಕ ಗುರು, ಲಿಂಗ, ಜಂಗಮ ದಾಸೋಹ ಸೇವೆಯಲ್ಲಿ ತೊಡಗಿದರು. ಕಕ್ಕಯ್ಯ ಬಸವಣ್ಣ ಹಾಗೂ ಅಲ್ಲಪ್ರಭುದೇವರಿಗಿಂತ ವಯಸ್ಸಿನಲ್ಲಿ ಹಿರಿಯನಾಗಿದ್ದ ಎಂಬುದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಬಸವಣ್ಣನವರೇ ಡೋಹರ ಕಕ್ಕಯ್ಯ ಅವರನ್ನು ʼಅಪ್ಪʼ, ʼಬೊಪ್ಪʼ ಎಂದು ಗೌರವದಿಂದ ಕರೆದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಬಸವಣ್ಣನವರು ಇಷ್ಟಲಿಂಗವನ್ನು ತನಗೆ ಕೊಟ್ಟ ಬಳಿಕ ತನ್ನ ಕಷ್ಟಕುಲದಲ್ಲಿ ಹುಟ್ಟಿದ ಕರ್ಮ ಪರಿಹಾರಗೊಂಡಿತು ಎಂದು ಕಕ್ಕಯ್ಯ ತನ್ನದೊಂದು ವಚನದಲ್ಲಿ ಹೇಳಿಕೊಂಡಿದ್ದಾರೆ. ಡೋಹರ ಕಕ್ಕಯ್ಯ ರಚಿಸಿದ 6 ವಚನಗಳು ಮಾತ್ರ ಲಭ್ಯವಾಗಿದೆ. ‘ಅಭಿನವ ಮಲ್ಲಿಕಾರ್ಜುನ’ ಎಂಬುದು ಕಕ್ಕಯ್ಯ ವಚನಗಳ ಅಂಕಿತ. ಮೇಲು-ಕೀಳೆಂಬ ಕಳಂಕವನ್ನು ನಿರಾಕರಿಸಿ ಸಮಾನತೆ ಸಮಾಜಕ್ಕಾಗಿ ಶ್ರಮಿಸಿದ ಶ್ರೇಷ್ಠ ಅನುಭಾವಿ ಡೋಹರ ಕಕ್ಕಯ್ಯ.

12ನೇ ಶತಮಾನವನ್ನು ಶರಣ ಚಳವಳಿಯ ಶತಮಾನವೆಂದು ಕರೆಯಬಹುದು. ಅಂದು ಸಮಾಜವು ಜಾತಿ, ಕುಲ, ವರ್ಣ, ಲಿಂಗ, ಮತ, ಪಂಥ, ಮೇಲು-ಕೀಳುಗಳಂತಹ ಅಸಮಾನತೆಗಳಿಂದ ಜರ್ಜರಿತಗೊಂಡಿತು. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ತಳವರ್ಗದವರ ಬದುಕು ದುರ್ಬರವಾಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ ಮತ್ತು ಮಾನವ ಘನತೆಯನ್ನು ಪ್ರತಿಪಾದಿಸಿದರು. ಕಾಯಕ ತತ್ವಸಿದ್ಧಾಂತದ ಮುಖಾಂತರ ವೈಚಾರಿಕ, ವೈಜ್ಞಾನಿಕ ತಳಹದಿಯ ಚಳವಳಿ ಸಮ-ಸಮಾಜ ನಿರ್ಮಾಣಕ್ಕೆ ನಾಂದಿಹಾಡಿತು .

ಹಿರಿಯ ವಚನಕಾರರಲ್ಲಿ ಒಬ್ಬರಾದ ಡೋಹರ ಕಕ್ಕಯ್ಯನು ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮಯ್ಯ, ಬಿಬ್ಬಬಾಚಯ್ಯ, ಚಂದಯ್ಯ, ಅಜಗಣ್ಣ, ಸೊಡ್ಡಳ ಬಾಚರಸ ಸೇರಿದಂತೆ 770 ಅಮಗಣಗಳನ್ನು ಸ್ತುತಿಸುತ್ತಾನೆ. ಗುರು-ಲಿಂಗ-ಜಂಗಮ-ಪ್ರಸಾದ ಎಂಬ ಆಧ್ಯಾತ್ಮಿಕ ಪ್ರಗತಿಯನ್ನು ಒಬ್ಬೊಬ ಶರಣರಿಂದ ಪಡೆದೆ. ಪ್ರಾಣ, ಶರಣ, ಐಕ್ಯ ಹಾಗೂ ನಿಜಸ್ಥಲ ತೋರಿದ ಶರಣ ಸಂಕುಲ ಪಾದಕ್ಕೆ ಶರಣಾಗಿ ಬದುಕಿದೆನು ಎಂದು ಗೌರವಿಸಿ ಘನತೆ ಮೆರೆಯುತ್ತಾನೆ ಕಕ್ಕಯ್ಯ.

ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು ಮುಟ್ಟಿ ಪಾವನವ ಮಾಡಿ ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ! ಆ ಲಿಂಗ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ! ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ, ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ, ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ! ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ ಸಂಗನ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.

ಬಸವಣ್ಣನವರ ಕಲ್ಯಾಣ ಚಳುವಳಿಗೆ ಹೆಗಲುಕೊಟ್ಟವರಲ್ಲಿ ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಕೇತಯ್ಯ, ಹರಳಯ್ಯ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಾಚಿದೇವ, ಮಾರಯ್ಯ, ಚೌಡಯ್ಯ ಸೇರಿದಂತೆ ಅನೇಕ ಶರಣರು ಪ್ರಮುಖರು. ತಮ್ಮ ತಮ್ಮ ವೃತ್ತಿ ಕಾಯಕವನ್ನು ನಿಷ್ಠೆಯಿಂದ ನಿರ್ವಹಿಸುತ್ತಲೇ ಶರಣರ ಸಂಗದಲ್ಲಿ ಅನುಭಾವಿಗಳಾಗಿ, ಸಮಾಜದ ಒಳಿತಿಗಾಗಿ ವೈಚಾರಿಕ ಬದುಕನ್ನು ಕಟ್ಟಿಕೊಂಡರು.

ಅಂದಿನ ಕಾಲದಲ್ಲಿಯೂ ವರ್ಣಾಶ್ರಮ ಪದ್ಧತಿ ಆಳವಾಗಿ ಬೇರೂರಿತು. ಸ್ಪೃಶ್ಯ-ಅಸ್ಪೃಶ್ಯ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಭೇದ-ಭಾವ ಢಾಳವಾಗಿತ್ತು. ತಳವರ್ಗ ಸಮುದಾಯದಲ್ಲಿ ಜನಿಸಿದ ಕಕ್ಕಯ್ಯ ಇಂತಹ ಸಾಮಾಜಿಕ ಅಸಮಾನತೆಯನ್ನು ನಿರಾಕರಿಸಿದ. ʼನಾನು ಕಷ್ಟ ಕುಲದಲ್ಲಿ ಹುಟ್ಟಿದ್ದೇನೆʼ ಎಂಬ ಸಾಮಾಜಿಕ ಹಣೆಪಟ್ಟಿಯ ಕರ್ಮವನ್ನು ಬಸವಣ್ಣನವರು ಕಳೆದು, ತನ್ನನ್ನು ಮುಟ್ಟಿ ಪಾವನಗೊಳಿಸಿ ಕರಸ್ಥಲದಲ್ಲಿ ಲಿಂಗ ಅನುಗ್ರಹಿಸಿದ್ದಾರೆ ಎಂದು ಕಕ್ಕಯ್ಯ ಹೇಳಿಕೊಳ್ಳುತ್ತಾನೆ.

ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟಗಳು ಪ್ರಬಲವಾಗಿದ್ದ ಕಾಲದಲ್ಲಿ, ಕೆಳಜಾತಿಯವನೆಂದು ಪರಿಗಣಿಸಲ್ಪಟ್ಟ ವ್ಯಕ್ತಿಯನ್ನು ಮುಟ್ಟುವುದೇ ಅಪವಿತ್ರವೆಂದು ಭಾವಿಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಬಸವಣ್ಣನವರು ಕಕ್ಕಯ್ಯನನ್ನು ಜಾತಿಯ ದೃಷ್ಟಿಯಿಂದ ನೋಡದೆ, ಮನುಷ್ಯನಾಗಿ ಸ್ವೀಕರಿಸಿ ಲಿಂಗದೀಕ್ಷೆ ನೀಡಿದ ವಿಚಾರ ಈ ಮೇಲಿನ ವಚನದಿಂದ ತಿಳಿಯಬಹುದು.

ಒಬ್ಬ ಮನುಷ್ಯನ ಮೌಲ್ಯವನ್ನು ಅವನ ಜಾತಿ, ಧರ್ಮದಿಂದ ಗುರುತಿಸದೆ, ಅವನ ನಡೆ-ನುಡಿ, ಕಾಯಕ ಮತ್ತು ಜ್ಞಾನದಿಂದ ನಿರ್ಧರಿಸಬೇಕು ಎಂಬುದು ಶರಣರ ಮಹತ್ವದ ಸಂದೇಶ ಇಲ್ಲಿ ಅಡಗಿದೆ. ದೇಹದಲ್ಲಿ ಗುರು, ಮನದಲ್ಲಿ ಜಂಗಮ ಮತ್ತು ಅರಿವಿನಲ್ಲಿ ಪ್ರಸಾದ ಎಂಬ ತ್ರಿವಿಧ ಆಂತರಿಕ ಶುದ್ಧಿಯ ಕಲ್ಪನೆ ವ್ಯಕ್ತವಾಗುತ್ತದೆ. ʼಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದೂರ ದುರ್ಜನರ ಸಂಗವದು ಮಾನಭಂಗವಯ್ಯ” ಎಂಬ ಮಾತಿನಂತೆ, ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಸಂಗಕ್ಕೆ ಮಹತ್ವವಿದೆ ಎಂಬುದನ್ನು ತಿಳಿಸುತ್ತಾನೆ.

ಕಕ್ಕಯ್ಯನ ಬದುಕಿನಲ್ಲಿಯೂ ಶರಣರ ಸಂಗವೇ ಪರಿವರ್ತನೆಯು ಅವರಲ್ಲಿ ವೈಚಾರಿಕತೆ ಬೆಳವಣಿಗೆಗೆ ಕಾರಣವಾಯಿತು. 12ನೇ ಶತಮಾನದ ಅನುಭವ ಮಂಟಪ ಕೇವಲ ಒಂದು ಸಭಾಮಂಟಪವಾಗಿರಲಿಲ್ಲ. ಅದು ವಿವಿಧ ಸಮುದಾಯಗಳ ಜನರು ತಮ್ಮ ಅನುಭವ, ಪ್ರಶ್ನೆ ಮತ್ತು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡ ವೈಚಾರಿಕ ವೇದಿಕೆಯಾಗಿತ್ತು. ʼಶರಣರ ಬರವೆಮಗೆ ಪ್ರಾಣ ಜೀವಾಳʼ ಎಂಬ ಭಾವದಿಂದ ಅನುಭವ ಮಂಟಪ ಎಲ್ಲ ಸಮುದಾಯಗಳ ಶರಣರನ್ನು ಒಳಗೊಳ್ಳುವಿಕೆಯ ಸಂಗಮವಾಗಿತ್ತು.

ಜಾತಿ, ಕುಲ, ವೃತ್ತಿ, ಲಿಂಗದ ಆಧಾರದ ಮೇಲೆ ಜ್ಞಾನಕ್ಕೆ ನಿರ್ಬಂಧವಿರಲಿಲ್ಲ. ಎಲ್ಲ ಕಾಯಕಜೀವಿಗಳ ಅನುಭಾವಕ್ಕೂ ಅಲ್ಲಿ ಮೌಲ್ಯವಿತ್ತು. ಅದರ ಫಲವಾಗಿ ವಚನ ಸಾಹಿತ್ಯವು ಹುಟ್ಟಿಕೊಂಡಿತು. ವಚನಗಳು ಕೇವಲ ಧಾರ್ಮಿಕ ಭಕ್ತಿಯ ಮಾತುಗಳಾಗದೆ, ಸಾಮಾಜಿಕ ಸಮಾನತೆ, ಮಾನವ ಘನತೆ, ಕಾಯಕನಿಷ್ಠೆ, ದಾಸೋಹ, ಸ್ತ್ರೀ-ಪುರುಷ ಸಮಾನತೆ ಮತ್ತು ವೈಚಾರಿಕ ಸ್ವಾತಂತ್ರ್ಯದ ಧ್ವನಿಯಾದವು.

ಡೋಹರ ಕಕ್ಕಯ್ಯ ಬಸವಣ್ಣನವರಿಗಿಂತ ಹಿರಿಯ ವಚನಕಾರ. ಹೀಗಾಗಿಯೇ ಬಸವಣ್ಣನವರು ತಮ್ಮ ಹಲವು ವಚನಗಳಲ್ಲಿ ಕಕ್ಕಯ್ಯನವರನ್ನು ಸ್ಮರಿಸಿ ʼಅಪ್ಪ-ಬೊಪ್ಪʼ ಎಂದು ಮನದುಂಬಿ ಗೌರವಿಸಿದ್ದಾರೆ.

ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ

ಶರಣರು ಎಂದೂ ತಮ್ಮನ್ನು ಹಿರಿಯ ಎಂದು ಕರೆದುಕೊಳ್ಳಲಿಲ್ಲ. ಯಾವ ಪದವಿಗಳಿಗೂ ಆಸೆ ಪಡಲಿಲ್ಲ. ಅವರದು ʼಎನಗಿಂತ ಕಿರಿಯರಿಲ್ಲʼ ಎಂಬ ಮಹಾಸಂಸ್ಕೃತಿ. ಹೀಗಾಗಿ ಬಸವಣ್ಣನವರು ಚೆನ್ನಯ್ಯ, ಕಕ್ಕಯ್ಯ, ಬೊಮ್ಮಯ್ಯ ಅವರನ್ನು ಅತ್ಯಂತ ಗೌರವದಿಂದ ಅಪ್ಪ-ಬೊಪ್ಪ, ಅಣ್ಣ ಎಂದು ಕರೆದು ತಾನೇ ಕಿರಿಯವನು ಎಂದು ಘೋಷಿಸಿ ಶರಣ ಸಂಸ್ಕೃತಿಯ ಮಾನವ ಘನತೆಯನ್ನು ಎತ್ತಿಹಿಡಿಯುತ್ತಾರೆ.

ಹಿರಿಯರಾದ ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ಅವರು ನನ್ನನ್ನು ಎತ್ತಿ ಮುದ್ದಾಡಿಸಿದರು ಎಂದು ಹೆಮ್ಮೆಪಡುತ್ತಾರೆ ಬಸವಣ್ಣ. ಜಾತಿವ್ಯವಸ್ಥೆ ಸಮಾಜದಲ್ಲಿ ಜಾತಿ ಮೀರಿ ಸಂಬಂಧ ಬೆಳೆಸುವುದು ಅಪರಾಧ, ಅದು ಜಾತಿಸಂಕರ ಎಂಬುದು ಹೇಳುವ ಜಾತಿಗ್ರಸ್ತ ಮನಸ್ಥಿಯ ಜನರು ಇದ್ದೇ ಇರುತ್ತಾರೆ. ಜಾತಿವ್ಯವಸ್ಥೆಯ ಗೋಡೆ ದಾಟಿದ ಶರಣರು ಜಾತಿರಹಿತವಾದ ಮನುಷ್ಯತ್ವದ ಸಮಾಜ ಕಟ್ಟಬಯಸಿದರು. ಇಂತಹ ಅವ್ಯವಸ್ಥೆಯನ್ನು ಕಂಡ ಜೀವಪರ ಚಿಂತಕ ಬಸವಣ್ಣನವರು ಮಾದರ ಚೆನ್ನಯ್ಯ-ಡೋಹರ ಕಕ್ಕಯ್ಯನವರ ವ್ಯಕ್ತಿತ್ವವನ್ನು ಮಾನವ ಘನತೆಯೆಂದು ಎತ್ತಿಹಿಡಿಯುತ್ತಾರೆ. ಅದು ಕೂಡಲಸಂಗಮದೇವರ ಸಾಕ್ಷಿಯಾಗಿ ಎಂದು ಪ್ರಮಾಣಿಸುತ್ತಾರೆ.

ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.

ಇದನ್ನೂ ಓದಿ : ವಚನ ಕಲ್ಯಾಣ | ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ!

ಎನಗಾರೂ ಇಲ್ಲ, ಎನಗಾರೂ ಇಲ್ಲವೆಂಬರು. ಬಾಣನವ ನಾನು, ಮಯೂರನವ ನಾನು, ಕಾಳಿದಾಸನವ ನಾನು. ಕಕ್ಕಯ್ಯ ಹಿರಿಯಯ್ಯ, ಚಿಕ್ಕಯ್ಯ ಚೆನ್ನಯ್ಯ ಎತ್ತಿ ಮುದ್ದಾಡಿಸಿದರೆನ್ನ, ಕೂಡಲಸಂಗಯ್ಯಾ

ಬಸವಣ್ಣ ಅವರಂತೆ ವಚನಕಾರ ವೈದ್ಯ ಸಂಗಣ್ಣ ʼಕಕ್ಕಯ್ಯನೆನಗೆ ಕಾಮಧೇನುವಯ್ಯʼ ಎಂದು ಹೇಳಿದರೆ, ʼಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾʼ ಎಂದು ಶರಣ ಅಮುಗಿದೇವಯ್ಯ ಹೆಮ್ಮೆಪಡುತ್ತಾರೆ. ಎಲ್ಲ ಮಾನವರು ಹುಟ್ಟಿನಿಂದಲೇ ಸ್ವತಂತ್ರರು ಹಾಗೂ ಘನತೆ, ಹಕ್ಕುಗಳಲ್ಲಿ ಸಮಾನರುʼ ಎಂದು ಮಾನವ ಘನತೆಯನ್ನು ಉತ್ತುಂಗಕ್ಕೇರಿಸಿದ್ದು ಶರಣತತ್ವ. ಆದರೆ, ಜಾತಿವ್ಯವಸ್ಥೆ ಜೀವಂತ ಇರುವ ಸಮಾಜದಲ್ಲಿ ಕೆಳಜಾತಿಯವರನ್ನು ಅಸ್ಪೃಶ್ಯರೆಂದೇ ಪರಿಗಣಿಸಿ ಸಮಾಜದ ಮುಖ್ಯವಾಹಿನಿಯಿಂದ ದೂರವಿಡುವ ಸಾಮಾಜಿಕ ಅಸಮಾನತೆ ಮಾನವ ವಿರೋಧಿ ಎಂಬುದು ಕಟುಸತ್ಯ. ಜಾತಿಯತೆಯಿಂದಾಗಿ ಕೆಳಸ್ತರ ಸಮುದಾಯ ಸಾಮಾಜಿಕ, ಮಾನಸಿಕವಾಗಿ ನರಳುತ್ತಲೇ ಬದುಕುವ ವ್ಯವಸ್ಥೆ ನಿರಾಕರಿಸಿ ಜಾತ್ಯಾತೀತ ಸಮಾಜ ಕಟ್ಟುವ ಬಂಡಾಯದ ಧ್ವನಿಯನ್ನು ಶರಣರು ಮೊಳಗಿಸಿದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸ್‌ಗಳನ್ನೇ ಜೈಲುಗಳನ್ನಾಗಿ ಪರಿವರ್ತಿಸಲಾಗುತ್ತಿದೆಯೇ? – ಕಸ್ಟಡಿ ವಾಹನದ ಪರಿಸ್ಥಿತಿ ಬಿಚ್ಚಿಟ್ಟ ನೇಹಾ ಬೋರಾ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ...

ಪ್ರತಿಭಟನೆ ನಡೆಸುವುದಿಲ್ಲವೆಂದು ಯಾವುದೇ ಬಾಂಡ್‌ಗೆ ಸಹಿ ಹಾಕಿಲ್ಲ: ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಸ್ಪಷ್ಟನೆ

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಸಿಪಿಜೆ ಆಯೋಜಿಸಿದ್ದ ಪ್ರತಿಭಟನೆಯ ವೇಳೆ...

ಸಂಸದನೆಂದು ಹೇಳಿದರೂ ಬಿಡದೆ ಹಲ್ಲೆ, ಉಸಿರುಗಟ್ಟಿಸಲು ಯತ್ನ: ಸಿಆರ್‌ಪಿಎಫ್ ವಿರುದ್ಧ ಸಿಪಿಐಎಂ ಎಂಪಿ ಗಂಭೀರ ಆರೋಪ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ತಮ್ಮನ್ನು ಸಿಆರ್‌ಪಿಎಫ್ ಸಿಬ್ಬಂದಿ ಬಸ್‌ನೊಳಗೆ ಕೆಳಗೆ...

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...