ವಚನ ಕಲ್ಯಾಣ | ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ..

Date:

ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ, ಉರಿ ಸಿರಿ ಉಭಯವೂ ಸರಿ ಎನ್ನದಿರ್ದಡೆ ಭಕ್ತನಿಗದೇ ಹಾನಿ. ಜಂಗಮವೆಂದು ಪ್ರಮಾಣಿಸಿ, ತನ್ನ ಕಂಗಳ ಮುಂದೆ ಕಂಡವರ ಭಂಜಿಸಲಿಕ್ಕೆ, ತನ್ನಂಗವ ಹೊರೆದಡೆ ತೀರ್ಥಪ್ರಸಾದಕ್ಕೆ ಅವನಂದೇ ಹೊರಗು, ಗವರೇಶ್ವರಾ.

- Advertisement -

ಮೇದಾರ ಕೇತಯ್ಯ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಒಬ್ಬರು. ಬಿದಿರಿನಿಂದ ಬುಟ್ಟಿ, ತೊಟ್ಟಿಲು, ಪೊರಕೆಗಳನ್ನು ಹೆಣೆಯುವ ಕಾಯಕ ನಡೆಸುತ್ತಿದ್ದ ಶರಣ. ಕಾಯಕದಿಂದ ಬಂದ ಫಲವನ್ನು ಜಂಗಮ ದಾಸೋಹಕ್ಕೆ ಬಳಸುತ್ತಿದ್ದರು. ಮೇದಾರ ಕೇತಯ್ಯ ತನ್ನ ವೃತ್ತಿಯನ್ನು ಕೀಳಾಗಿ ಕಾಣದೆ, ಅದನ್ನೇ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನಾಗಿ ಮಾಡಿಕೊಂಡ ಅಪರೂಪದ ನಿಷ್ಠಾವಂತ ವಚನಕಾರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಬಿದಿರು ಹೆಣೆಯುವ ಕಾಯಕ ಕೇವಲ ಹೊಟ್ಟೆಪಾಡಿನ ವೃತ್ತಿಯಾಗಿರಲಿಲ್ಲ. ಕಾಯಕದಲ್ಲಿಯೇ ಬದುಕಿನ ಸತ್ಯವನ್ನು ಕಂಡುಕೊಂಡು ಸಾಮರಸ್ಯ ಸಮಾಜಕ್ಕಾಗಿ ಶ್ರಮಿಸಿದ ನಿಷ್ಠಾವಂತ ಶರಣ. ಬಿದಿರು ಕತ್ತರಿಸುವುದು, ಸೀಳುವುದು, ಹೆಣೆಯುವುದು, ರೂಪ ಕೊಡುವುದು ಮುಂತಾದ ವೃತ್ತಿಯ ಅನುಭವಗಳನ್ನೇ ಅವರು ಆಧ್ಯಾತ್ಮಿಕ ರೂಪಕಗಳಾಗಿ ಪರಿವರ್ತಿಸಿರುವುದು ಅವರ ವಚನಗಳಲ್ಲಿ ನೋಡಬಹುದು.

ಮಲೆನಾಡಗುಡಿಯೊಳಗೆ | ಈ ಉಳಿಮೆ
ಬೆಟ್ಟದ ಕೆಳಗೆ | ಬೇಲೂರ ಕೇತ ಮೇದಾರ
ಕಾಡೊಳಗೆ ಬೆಳೆದಾಡಿ ಕಲೆತ ಶಿವ ಮತವ ||

ಮೇದಾರ ಕೇತಯ್ಯನ ಮೂಲ ಮಲೆನಾಡಿನ ಬೇಲೂರ ಸಮೀಪದ ಉಳಿಮೆಬೆಟ್ಟ ಎಂಬುದು ಸಂಶೋಧಕರು ಹೇಳುತ್ತಾರೆ.ಹಾಗೇ ಕೇತಯ್ಯನ ಕುರಿತು ಜನಪದರು ತಮ್ಮ ಕಾವ್ಯದಲ್ಲಿ ಕೇತಯ್ಯನ ಬದುಕಿನ ವಿವರಣೆಯನ್ನು ಹಿಡಿದಿಟ್ಟಿರುವುದು ಕಾಣುತ್ತೇವೆ.

ಕೇತಯ್ಯ ‘ಗವರೇಶ್ವರ’ ಅಂಕಿತದಲ್ಲಿ ರಚಿಸಿದ 18 ವಚನಗಳು ಲಭ್ಯವಾಗಿವೆ. ಈತನ ವಚನಗಳಲ್ಲಿ ವೃತ್ತಿ ಪರಿಭಾಷೆ, ಆಧ್ಯಾತ್ಮಿಕ ಅನುಭವ ಎರಡೂ ಒಂದಾಗಿ ಬೆರೆತಿವೆ. ವಚನಗಳು ಕೇವಲ ಧಾರ್ಮಿಕ ಉಪದೇಶಗಳಾಗದೆ, ಕಾಯಕದಿಂದ ಮೂಡಿಬಂದ ಲೋಕಾನುಭವ, ಶಿವಾನುಭವ ತತ್ತ್ವಚಿಂತನೆಗಳಾಗಿವೆ. ಅಂತರಂಗ ಶುದ್ಧಿ, ಪ್ರಾಮಾಣಿಕತೆ ಮತ್ತು ಲಿಂಗದೊಂದಿಗಿನ ಆಂತರಿಕ ಸಂಬಂಧ ಮುಖ್ಯ ಎಂಬ ಶರಣ ತತ್ತ್ವವನ್ನು ಕೇತಯ್ಯ ತನದೇ ಭಾಷೆಯಲ್ಲಿ ಸುಂದರವಾಗಿ ಅಭಿವ್ಯಕ್ತಿಸಿದ್ದಾನೆ.

ಕೇತಯ್ಯನವರ ವಚನಗಳಲ್ಲಿ ಬಸವಣ್ಣ, ಅಲ್ಲಮಪ್ರಭು, ಮಾಚಿದೇವ, ಮರುಳಶಂಕರ ಸೇರಿದಂತೆ ಅನೇಕ ಶರಣರ ಸ್ತುತಿಯೂ ಕಂಡುಬರುತ್ತದೆ. ಶರಣರ ಸಂಗದೊಂದಿಗಿನ ಆದರ್ಶ ಚಿಂತನೆ ಮತ್ತು ಶರಣರ ಕಾಯಕನಿಷ್ಠೆ ಗೌರವಿಸುವ ಮನೋಭಾವ ಕೇತಯ್ಯ ಅವರಲ್ಲಿ ಕಂಡುಬರುತ್ತದೆ. ಶರಣ ಚಳವಳಿಯ ಆಶಯಗಳಾದ ಭಕ್ತಿ, ಕಾಯಕ, ದಾಸೋಹ, ಪ್ರಸಾದ, ಸಮಾನತೆ, ಅಂತರಂಗ ಶುದ್ಧಿ ಮತ್ತು ನಿಷ್ಠೆಯ ಭಕ್ತಿ ಕೇತಯ್ಯನ ವಚನಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ.

12ನೇ ಶತಮಾನದಲ್ಲಿ ತಳವರ್ಗ ಸಮುದಾಯಗಳ ಬದುಕು ಬರ್ಬರವಾಗಿತ್ತು. ರಾಜ್ಯಶಕ್ತಿಗಳ ದಬ್ಬಾಳಿಕೆ, ಕ್ರೌರ್ಯದಿಂದ ಕಾಯಕ ಜೀವಿಗಳು ಶೋಷಣೆಗೆ ಒಳಪಟ್ಟಿದ್ದರು. ಅಸಮಾನತೆ, ಜಾತಿವ್ಯವಸ್ಥೆ, ಶೋಷಣೆ ವಿರುದ್ಧ ಬಂಡಾಯ ಸಾರಿದ ಬಸವಾದಿ ಶರಣರು ಶೋಷಣೆ ರಹಿತವಾದ ಸಮಾನತೆ ಸಮಾಜ ಕಟ್ಟುವ ಕನಸು ಹೊತ್ತರು. ಕರ್ಮಸಿದ್ಧಾಂತ ಬದಲಿಗೆ ಕಾಯಕ ಸಿದ್ಧಾಂತ ಎಂಬ ತತ್ವ ಸಕಲ ಕುಶಲಕರ್ಮಿಗಳನ್ನು ಒಗ್ಗೂಡಿಸಿತು. ಕಾಯಕ ಪ್ರಜ್ಞೆಯ ಚಳವಳಿಯು ಸಮಾಜ ಬದಲಾವಣೆಗೆ ನಾಂದಿ ಹಾಡಿತು.

ಕಾಯಕ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕೇತಯ್ಯ ತನ್ನ ಅನುಭವ ತತ್ವ ಬಹಳ ಮಾರ್ಮಿಕವಾಗಿ ಮೇಲಿನ ವಚನದಲ್ಲಿ ವಿವರಿಸುತ್ತಾನೆ. ಮಾನವನಿಗೆ ಸುಖ-ದುಃಖ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಸುಖ ಬಂದಾಗ ಹಿಗ್ಗುವುದು, ದುಃಖ ಬಂದರೆ ನೋವು ಪಡದೆ ನೋವು-ನಲಿವು ಎರಡೂ ಸಮಾನವಾಗಿ ಸ್ವೀಕರಿಸಬೇಕು ಎಂದು ಪ್ರತಿಪಾದಿಸುತ್ತಾನೆ ಕೇತಯ್ಯ.

ʼಉರಿ ಸಿರಿ ಉಭಯವೂ ಸರಿ ಎನ್ನದಿರ್ದಡೆ ಭಕ್ತನಿಗದೇ ಹಾನಿʼ ಎಂದು ಲಾಭ-ನಷ್ಟದ ಕುರಿತಾಗಿದೆ. ಕಷ್ಟ ಬಂದರೂ, ಸಂಪತ್ತು ಲಭಿಸಿದರೂ ಎರಡೂ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಉರಿ-ಸಿರಿ ಎರಡೂ ಸಮಚಿತ್ತದಿಂದ ಸ್ವೀಕರಿಸುವುದು ಬದುಕಿನ ಕಲೆಯಾಗಬೇಕು. ಇಲ್ಲದಿದ್ದರೆ ಅದು ಜೀವನಕ್ಕೆ ಹಾನಿಯುಂಟು ಮಾಡುವುದು ಎಂದು ಕೇತಯ್ಯ ಆತ್ಮಸ್ಥೈರ್ಯ ತುಂಬುತ್ತಾರೆ.

ಜಂಗಮ ಎಂದೆನಿಸಿಕೊಂಡವರು ಸಮಾಜದಲ್ಲಿ ಅತ್ಯಂತ ಗೌರವ, ಘನತೆಯ ಬದುಕು ನಡೆಸಬೇಕು. ಬಾಹ್ಯ ವೇಷದಿಂದ ಜಂಗಮನಾಗದೆ ಅಂತರಂಗ ಶುದ್ಧಿ, ಶ್ರದ್ಧೆ, ಕಾಯಕದಲ್ಲಿ ನಿರತನಾಗಬೇಕು. ನಡೆ-ನುಡಿಯಲ್ಲಿ ವಿನಯತೆ ಕೂಡಿರಬೇಕು. ತನ್ನೆದುರೇ ಇರುವ ಒಬ್ಬರ ಮನ ನೋಯಿಸುವುದು, ಹಿಂಸಿಸುವುದು, ವಂಚಿಸುವುದು ನಿಜ ಭಕ್ತನ ಲಕ್ಷಣವಲ್ಲ. ವಚನಕಾರರ ಕಾಯಕ-ಭಕ್ತಿ-ಪ್ರಸಾದ-ಜಂಗಮದ ಮಹತ್ವವನ್ನು ಕೇತಯ್ಯ ಸರಳವಾಗಿ ನಿರೂಪಿಸಿದ್ದಾನೆ.

ಜೀವನದಲ್ಲಿ ಯಾವ ಕಾಯಕವೂ ಮಾಡದೆ ತೀರ್ಥ-ಪ್ರಸಾದಕ್ಕಾಗಿ ಸೋಮಾರಿಯಂತೆ ತಿರುಗಾಟ ನಡೆಸಿದರೆ ಫಲ ದೊರೆಯದು. ಬೆವರಿನ ಶ್ರಮದಿಂದ ಬಂದ ಪ್ರಸಾದ ಮಾತ್ರ ಸ್ವೀಕರಿಸುತ್ತಾ ಸ್ವಾವಲಂಬಿ, ಘನತೆಯ ಜೀವನ ನಡೆಸಬೇಕು. ಕಾಯಕಕ್ಕೆ ಮಹತ್ವ ನೀಡದೆ ವೇಷವ ಧರಿಸಿ ಮತ್ತೊಬ್ಬರ ಶ್ರಮದ ಫಲ ಸ್ವೀಕರಿಸುವುದು ಭಕ್ತಿಯ ಮಾರ್ಗವಲ್ಲ ಎಂದು ಕೇತಯ್ಯ ಎಚ್ಚರಿಸುತ್ತಾನೆ.

ಒಂದು ಬಿದಿರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು. ಮೂರು ಕವೆಯ ಕೊಚ್ಚಿಸಿ, ಬಿಲ್ಲ ಸಿಕ್ಕ ಬಿಡಿಸಿ, ಸೀಳಿದ ಬಿದಿರ ಹೊರೆಹೊರೆಯಲ್ಲಿ ನೆಯಿದೆ, ತೊಟ್ಟಿಲ ಸಂದ ಕಾಣದಂತೆ. ನಾಲ್ಕು ಕಾಲನಿಕ್ಕಿ, ಅಂದಅಂದವಾದ ತೊಟ್ಟಿಲ ದಂಡೆಯನಿಕ್ಕಿ, ಕಟ್ಟುವದಕ್ಕೆ ಶ್ರುತ ದೃಷ್ಟವೆಂಬೆರಡು ದಾರದಲ್ಲಿ ತೊಟ್ಟಿಲ ಕಟ್ಟಿ, ಗವರೇಶ್ವರಲಿಂಗಕ್ಕೆ ಹುಟ್ಟುಗೆಟ್ಟು ಹೋಗೋ ಎಂದು ಜೋಗುಳವಾಡಿದೆ.

ಮೇದಾರ ಕೇತಯ್ಯನ ಈ ಮೇಲಿನ ವಚನ ತನ್ನ ಸ್ವಕಾಯಕದ ಅನುಭವವನ್ನು ಆಧ್ಯಾತ್ಮಿಕ ಸಂಕೇತವಾಗಿ ರೂಪಿಸಿದ್ದು, ಈ ಮೂಲಕ ಕೇತಯ್ಯ ಮಾನವನ ಬದುಕಿನ ಶುದ್ಧೀಕರಣದ ಕುರಿತು ಅರ್ಥಪೂರ್ಣ ಸಂದೇಶ ತಿಳಿಸಿದ್ದಾನೆ.

ಕೇತಯ್ಯ ಮೇದಾರ ಸಮುದಾಯದ ಕಾಯಕ ಶರಣ. ಅಡವಿಗೆ ಹೋಗಿ ತಂದ ಒಂದು ಬಿದಿರಿನ ಕಡ್ಡಿಗೆ ಮೂರು ಕವಲುಗಳಿರುವುದು, ಅದರೊಳಗೆ ಇರುವ ಸಿಬಿರು ತೆಗೆದು, ಬಿದಿರಿನ ಗಂಟುಗಳನ್ನು ಬಿಡಿಸಿ, ಬಿದಿರನ್ನು ಉದ್ದವಾಗಿ ಸೀಳಿ, ಅದರ ಹೊರಭಾಗದ ಪಟ್ಟಿಗಳನ್ನು ಒಂದಕ್ಕೊಂದು ನೇಯ್ಯುವುದು ಕಾಯಕದ ವಿಧಾನ. ಹಾಗೇ ಒಂದು ತೊಟ್ಟಿಲು ಸಿದ್ಧಪಡಿಸಲು ಕಾಡಿನಿಂದ ಹೊರೆಹೊರೆ ಬಿದಿರು ತಂದು ನೇಯ್ದಿದ್ದೇನೆ. ಸುಂದರವಾಗಿ ತಯ್ಯಾರಾದ ತೊಟ್ಟಿಲಿಗೆ ನಾಲ್ಕು ಕಾಲುಗಳಾಗಿ ದಂಡೆಗಳು ಕೂಡಿಸುತ್ತೇನೆ. ತೊಟ್ಟಿಲು ತೂಗಬೇಕಾದರೆ ಅದಕ್ಕೆ ಶ್ರುತ ಹಾಗೂ ದೃಷ್ಟ ಎಂಬ ಎರಡು ದಾರವ ಕಟ್ಟಿ, ಅದರೊಳಗೆ ಮಗುವನ್ನು ಮಲಗಿಸಿ ಜೋಗುಳ ಹಾಡುವೆ ಎಂದು ಮಾರ್ಮಿಕವಾಗಿ ಕೇತಯ್ಯ ನಿರೂಪಿಸಿದ್ದಾರೆ.

ಈ ವಚನದಲ್ಲಿ ಬಳಸಲಾದ ಬಿದಿರು, ಕವಲು, ಸಿಬಿರು, ತೊಟ್ಟಿಲು, ದಾರ ಇವೆಲ್ಲವೂ ಕೇವಲ ಭೌತಿಕ ವಸ್ತುಗಳಲ್ಲ. ಅವುಗಳಿಗೆ ಆಧ್ಯಾತ್ಮಿಕ ಸಂಕೇತದ ಅರ್ಥವೂ ಇರುವುದು ಗಮನಿಸಬಹುದು. ಮಾನವ ದೇಹವೂ ಬಿದಿರಿನಂತೆ ವಿವಿಧ ಅಂಗಗಳಿಂದ ರೂಪುಗೊಂಡಿದೆ. ಬಿದಿರು ಸಂಸ್ಕರಿಸಿ ತೊಟ್ಟಿಲು ಸಿದ್ಧಪಡಿಸುವಂತೆ ತೊಟ್ಟಿಲು ಎಂಬ ಅಂದವಾದ ಈ ಶರೀರವನ್ನು ಶುದ್ಧಗೊಳಿಸುವುದು ಅಗತ್ಯವಿದೆ.

ಯಾವುದೇ ಕಾಯಕ ಕೈಗೊಳ್ಳಬೇಕಾದರೆ ನಿಷ್ಠೆ, ಏಕಾಗೃತೆ, ಸಮಚಿತ್ತತೆ ಮುಖ್ಯ. ಕೈ-ಕಾಲುಗಳೆಂಬ ನಾಲ್ಕು ದಂಡೆಗಳಿಂದ ಕೂಡಿದ ದೇಹ ಸಮಚಿತ್ತವಾಗಿ ಚಲಿಸಬೇಕಾದರೆ ಕಣ್ಣು, ಮನ, ನಾಲಿಗೆ ಹತೋಟಿಯಲ್ಲಿ ಇರಬೇಕಾಗುತ್ತದೆ. ಗುರು, ಲಿಂಗ, ಜಂಗಮ ಹಾಗೂ ಕಾಯಕವೆಂಬ ನಾಲ್ಕು ತತ್ವ ಆಚರಣೆ ಮುಖಾಂತರ ಬದುಕಿನ ಸಾರ್ಥಕತೆ ಕಾಣಬಹುದು. ಶ್ರುತಿ, ದೃಷ್ಟಿ ಎಂಬ ಎರಡು ದಾರ ಇಲ್ಲಿ ಇಲ್ಲಿ ವಿಶೇಷವಾಗಿದೆ.

ಇದನ್ನೂ ಓದಿ : ವಚನ ಕಲ್ಯಾಣ | ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ!

ಒಬ್ಬ ವ್ಯಕ್ತಿಗೆ ಕಣ್ಣು-ಕಿವಿ ಹತೋಟಿಯಲ್ಲಿ ಇಟ್ಟುಕೊಳ್ಳದಿದ್ದರೆ ತನ್ನನ್ನೇ ಕೊಲ್ಲುತ್ತವೆ. ಕೆಟ್ಟದ್ದನ್ನು ಕೇಳದೇ, ನೋಡದೇ ಜೀವಪರ, ಜನಪರವುಳ್ಳ ಮಾನವೀಯ ಮೌಲ್ಯಗಳನ್ನು ಬಿತ್ತುವ ಚಿಂತನೆ ಆಲಿಸುವುದು, ಕೇಳುವುದು ನಮ್ಮ ನಿಜ ಧರ್ಮವಾಗಬೇಕು. ಶರೀರದಲ್ಲಿನ ದುರ್ಗುಣ, ದುಶ್ಚಟ, ದುರ್ನಡೆ ಅಳಿಸಿ, ನಿಷ್ಠೆ, ಪ್ರಾಮಾಣಿಕತೆಯಿಂದ ಗುರು-ಲಿಂಗ-ಜಂಗಮ-ದಾಸೋಹಗೈಯುವ ಮನೋಭಾವ ಬೆಳೆಸಿಕೊಂಡರೆ ದೇಹ ಎಂಬ ತೊಟ್ಟಿಲು ಸಮಚಿತ್ತದಿಂದ, ಮನೋಲ್ಲಾಸದಿಂದ ತೂಗುವುದು ಎಂದು ಸುಂದರವಾಗಿ ವಿಶ್ಲೇಷಿಸುತ್ತಾನೆ.

ʼಆಚಾರವೆಂಬ ತೊಟ್ಟಿಲು | ವಿವೇಕವೆಂಬ ಹಗ್ಗ || ಆಲೋಚನೆ ಎಂಬ ಕಂಭಕೆ ಕಟ್ಟಿ | ರಂಗನ ತೂಗಿರೇʼ ಎಂಬ ದಾಸರ ವಾಣಿಯೂ ಇಲ್ಲಿ ಸ್ಮರಿಸಬಹುದು.

ಎನ್ನ ಭಕ್ತಿ, ಬಸವಣ್ಣನಲ್ಲಿ ಬಯಲಾಯಿತ್ತು. ಎನ್ನ ಜ್ಞಾನ, ಚೆನ್ನಬಸವಣ್ಣನಲ್ಲಿ ಬಯಲಾಯಿತ್ತು. ಎನ್ನ ವೈರಾಗ್ಯ, ಪ್ರಭುದೇವರಲ್ಲಿ ಬಯಲಾಯಿತ್ತು. ಇಂತೀ ಮೂವರು ಒಬ್ಬರೊಂದ ಬಯಲಮಾಡಿದರಾಗಿ, ಗವರೇಶ್ವರಲಿಂಗದಲ್ಲಿ ನಿಶ್ಚಿಂತವಾಯಿತ್ತು

ಹೀಗೆ ಕೇತಯ್ಯ ಸುಮಾರು 7 ವಚನಗಳಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವರು, ಘಟಿವಾಳಯ್ಯ ಸೇರಿ ಹಲವು ಶರಣರನ್ನು ಸ್ತುತಿಸಿರುವುದು ಕಾಣುತ್ತೇವೆ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸದನೆಂದು ಹೇಳಿದರೂ ಬಿಡದೆ ಹಲ್ಲೆ, ಉಸಿರುಗಟ್ಟಿಸಲು ಯತ್ನ: ಸಿಆರ್‌ಪಿಎಫ್ ವಿರುದ್ಧ ಸಿಪಿಐಎಂ ಎಂಪಿ ಗಂಭೀರ ಆರೋಪ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ತಮ್ಮನ್ನು ಸಿಆರ್‌ಪಿಎಫ್ ಸಿಬ್ಬಂದಿ ಬಸ್‌ನೊಳಗೆ ಕೆಳಗೆ...

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...