ಕಲಬುರಗಿ | ಭೀಮಾ ಕೋರೆಗಾಂವ್ ಸ್ವಾಭಿಮಾನಕ್ಕಾಗಿ ನಡೆದ ಯುದ್ಧ: ಡಾ. ಅಶೋಕ ದೊಡ್ಮನಿ

Date:

ದೇಶದ ಇತಿಹಾಸದಲ್ಲಿ ಸಾಮ್ರಾಜ್ಯ, ಸಂಪತ್ತು ಹಾಗೂ ಅಧಿಕಾರಕ್ಕಾಗಿ ಅನೇಕ ಯುದ್ಧಗಳು ನಡೆದಿದ್ದರೂ, ಭೀಮಾ ಕೋರೆಗಾಂವ್ ಯುದ್ಧವು ಸ್ವಾಭಿಮಾನಕ್ಕಾಗಿ ನಡೆದ ಮಹತ್ವದ ಹೋರಾಟವಾಗಿದೆ ಎಂದು ಡಾ. ಅಶೋಕ ದೊಡ್ಮನಿ ಹೇಳಿದರು.

- Advertisement -

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಎರಡನೇ ಬಾಜಿರಾಯ ಪೇಶ್ವೇ ಮಹಾರ್ ಸಮುದಾಯವನ್ನು ಸೇನೆಯಲ್ಲಿ ಸೇರಿಸಿಕೊಳ್ಳದೆ ಅವಮಾನಿಸಿದ ಹಿನ್ನೆಲೆ, ಮಹಾರ್ ರೆಜಿಮೆಂಟ್ ಸ್ವಾಭಿಮಾನಕ್ಕಾಗಿ ಬ್ರಿಟಿಷರೊಂದಿಗೆ ಸೇರಿ ಪೇಶ್ವೇ ಸೈನ್ಯವನ್ನು ಎದುರಿಸಿತು’ ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
1007902

‘1818ರ ಜನವರಿ 1ರಂದು ನಡೆದ ಯುದ್ಧದಲ್ಲಿ ಪೇಶ್ವೇಯರ 28 ಸಾವಿರ ಸೈನಿಕರನ್ನು ಕೇವಲ 500 ಮಹಾರ್ ಸೈನಿಕರು ಸೋಲಿಸಿದ ಘಟನೆ ಇತಿಹಾಸದಲ್ಲಿ ದಾಖಲಾಗಿದ್ದು, ಈ ಮಹತ್ವದ ಇತಿಹಾಸವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದ್ದಾರೆ’ ಎಂದರು.

ಇದನ್ನು ಓದಿದ್ದೀರಾ? ಯಾದಗಿರಿ | ಮನರೇಗಾ ಕೂಲಿ ಕಾರ್ಮಿಕರಿಂದ ಹೊಸ ವರ್ಷದ ಸಂಭ್ರಮ

ಕಾರ್ಯಕ್ರಮದಲ್ಲಿ ರುಕುಮ್ ಪಟೇಲ್ ಇಜೇರಿ, ಲಾಲಯ್ಯ ಗುತ್ತೇದಾರ, ಈರಣ್ಣ ಅವರಾದಿ, ಅಣ್ಣರಾಯ ಯಂಕಂಚಿ, ಅಮೀರ್ ಹಮೀಜ್ ಲಖನಾಪುರ, ಅಲ್ಲಪಟೇಲ್, ಈರಣ್ಣ ತಳವಾರ, ಪಿಡಿಒ ನಂದುಕುಮಾರ್, ಕಾಲಿದಮಿಯಾ, ದೇವು ಪೂಜಾರಿ, ಕಳ್ಳೆಪ್ಪಾ ಬೋವಿ, ಸೋಮನಾಳ ಗ್ರಾಮ ಸದಸ್ಯ, ಮಹಿಬೂಬ ಸೌದಗರ, ಸೈದಪ್ಪ ಶ್ರುತಿ, ಸೈದಪ್ಪ ಹೊಸಮನಿ, ನಿಂಗಣ್ಣ ಗುಳ್ಯಾಳ್, ಅಮೀನಪ್ಪ ಕಟ್ಟಿಮನಿ, ಸೈದಪ್ಪ ಮೂಡಬೂಳ, ಡಿಎಸ್‌ಪಿ ಪ್ರಕಾಶ, ಸದಾಶಿವ ಹಳ್ಳಿಗಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎಸ್‌ಐಆರ್ ವಿರೋಧಿಸಿ ಧರಣಿ; ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಿಲ್ಲಿಸುವುದು, ಪಟ್ಟಿಯಿಂದ...

ಕಲಬುರಗಿ | ಬಸ್, ಬೈಕ್ ಡಿಕ್ಕಿ: ಬೈಕ್ ಹಿಂಬದಿ ಸವಾರ ಸಾವು

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ...