ನಗರದ ಜಿಐಎಸ್ ಸ್ಟೇಷನ್‌ನಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 12ರಂದು ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ರಫೀಕ್ ಚೌಕ್, ಮಿಲ್ಲತ್ ನಗರ, ಲಾಹೋಟಿ, ಕೈಲಾಸ, ಲೇಔಟ್, ಜಯನಗರ ಹಾಗೂ ರಾಘವೇಂದ್ರ ಕಾಲೋನಿ ವಿದ್ಯುತ್ ವಿತರಣಾ ಮಾರ್ಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಇದರಿಂದ ಮೆಕ್ಕಾ ಕಾಲೋನಿ, ಹಾಗರಗಾ ಕ್ರಾಸ್, ಜೂಬರ್ ಕಾಲೋನಿ, ಉಮರ್ ಕಾಲೋನಿ, ಇಸ್ಲಾಮಾಬಾದ್ ಕಾಲೋನಿ, ಸೋನಿಯಾ ಗಾಂಧಿ ಕಾಲೋನಿ, ಅಮನ್ ನಗರ, ಮಿಲ್ಲತ್ ನಗರ, ಮಾಲಗತ್ತಿ ಕ್ರಾಸ್, ಡೆಕ್ಕನ್ ಕಾಲೇಜು, ಕೆಐಎಡಿಬಿ ಕೈಗಾರಿಕಾ ಪ್ರದೇಶ, ಕಪನೂರು ಇಂಡಸ್ಟ್ರಿಯಲ್ ಏರಿಯಾ, ಹುಮನಾಬಾದ್ ಚೆಕ್‌ಪೋಸ್ಟ್, ತೆಂಗಳಿ ಲೇಔಟ್, ಗೋಳಾ ಲೇಔಟ್, ಬಾಗ್ದಾದ್ ಕಾಲೋನಿ, ಜಯನಗರ, ಡಾಕ್ಟರ್ಸ್ ಕಾಲೋನಿ, ಬನಶಂಕರಿ ಲೇಔಟ್, ಆಂಜನೇಯ ನಗರ, ಶರಣ ನಗರ, ಆರ್ಕಿಡ್ ಮಾಲ್, ಶರಣಬಸವೇಶ್ವರ ದೇವಸ್ಥಾನ ಹಾಗೂ ಹೊಸ ಕಾರ್ಪೊರೇಷನ್ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಿಗೂ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ; ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು
ಜಿಐಎಸ್ ಸ್ಟೇಷನ್ ಕಾಮಗಾರಿ ಸುಗಮವಾಗಿ ನಿರ್ವಹಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.





