ಕಲಬುರಗಿ | ತೊಗರಿ ಬೆಳೆಗೆ ಗೊಣ್ಣೆಹುಳು ಬಾಧೆ; ಅಗತ್ಯ ಕ್ರಮಕ್ಕೆ ಕೃಷಿ ಅಧಿಕಾರಿಗಳ ಸಲಹೆ

Date:

ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ಗೊಣ್ಣೆಹುಳುವಿನ ಬಾಧೆ ಕಂಡು ಬಂದಿದ್ದು, ರೈತರು ಆತಂಕಗೊಂಡಿದ್ದಾರೆ. ಮಳೆ ವಿಳಂಬದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಇದೀಗ ತೊಗರಿ ಬೆಳೆಗೆ ರೋಗ ಬಡಿದಿರುವುದರಿಂದ ತೊಗರಿ ಬೆಳೆಗಾರರು ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ.

ಅಲ್ಪಸ್ವಲ್ಪ ಬಂದ ಮಳೆಗೆ ತೊಗರಿ ಬಿತ್ತನೆ ಮಾಡಿ ಉತ್ತಮ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ಗೊಣ್ಣೆ ಹುಳಿವಿನ ಬಾಧೆ ಉಂಟಾಗಿದೆ. ಕಳೆದ ವರ್ಷ ಬೆಳೆದ ಬೆಳೆ ನೆಟೆ ರೋಗದಿಂದ ಹಾಳಾಗಿತ್ತು. ಈ ಬಾರಿ ಗೊಣ್ಣೆ ಹುಳುವಿನ ರೋಗ ಬಂದಿರುವುದು ರೈತರಿಗೆ ದಿಕ್ಕು ತೋರದಂತಾಗಿದೆ.

ಕಲಬುರಗಿ ತಾಲೂಕಿನ ಫರಹತಾಬಾದ ಹೋಬಳಿಯ ಫೀರೊಜಾಬಾದ್ ನಡುವಿನಹಳ್ಳಿ ಮತ್ತು ಸೋಮನಾಥಹಳ್ಳಿಗೆ ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕೃಷಿ ಅಧಿಕಾರಿ ಶೃತಿ ಹಾಗೂ ಶಿವರಾಯ ಬಿಟಿಎಂ ಅವರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಮಣ್ಣಿನಲ್ಲಿ ತೇವಾಂಶ ಕೊರತೆಯಿಂದ ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆ ಉಂಟಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅದರ ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗೊಣ್ಣೆ ಹುಳು ಬಾಧೆ ಲಕ್ಷಣಗಳು

“ಬೇರು ಮತ್ತು ಕಾಂಡ ಕೊರೆದು ಗಿಡಗಳು ಬಾಡುವುದು ಈ ಬಾಧೆಯ ಲಕ್ಷಣಗಳಾಗಿದ್ದು, ರೈತರು ಕೆಲವು ಹತೋಟಿ ಕ್ರಮಗಳನ್ನು ಅನುಸರಿಸಬೇಕು” ಎಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.

ಹತೋಟಿ ಕ್ರಮಗಳು

  • ನೀರು ಲಭ್ಯವಿದ್ದಲ್ಲಿ ಜಮೀನಿಗೆ ನೀರು ಹಾಯಿಸುವುದು.
  • ಅಂತರ ಬೇಸಾಯ
  • ಕೈಯಿಂದ ಮಣ್ಣಿನಲ್ಲಿ ಇರುವ ಹುಳುವನ್ನು ಆರಿಸಿ ತೆಗೆಯುವುದು.
  • ಬೇವಿನ ಹಿಂಡಿ 50 ಕೆಜಿ + ಮೆಟಾರಿಜಿಯಂ ಪುಡಿ 2 ಕೆಜಿ ಪ್ರತಿ ಎಕರೆಗೆ ಮಣ್ಣಿಗೆ ಹಾಕಬೇಕು.
  • ಕ್ಲೋರೋಪೈರಿಫಾಸ್ 3 ಮಿ ಲೀ ಪ್ರತಿ ಒಂದು ಲೀಟರ್ ನೀರಿಗೆ ಬೇರಿಸಿ ಬೆಳೆಯ ಬೇರಿಗೆ ಸಿಂಪರಣೆ ಮಾಡಬೇಕು.
  • ಪ್ರತಿ ಎಕರೆಗೆ 4 ಕೆಜಿ ಫೋರೇಟ್ ಅಥವಾ ಕಾರ್ಬೋಪ್ಯೊರಾನ್-3ಜಿಯನ್ನು ಬೆಳೆಯ ಸಾಲಿಗೆ ಸುರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ರಸ್ತೆ ಗುಂಡಿ ಮುಚ್ಚುವಂತೆ ರೈತ ಸಂಘ ಆಗ್ರಹ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ದೇವಸ್ಥಾನದಿಂದ ಸಾತನೂರ ಗ್ರಾಮಕ್ಕೆ ಹೋಗುವ...

ಕಲಬುರಗಿ | ಕ್ರೀಡಾಪಟುಗಳು ದುಶ್ಚಟದಿಂದ ದೂರವಿರಿ: ಮಹೇಶ್ ಹೆಗಡೆ

ಪ್ರತಿಯೊಬ್ಬ ಯುವಜನರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ನಮ್ಮ ತಾಲೂಕಿನ ಕ್ರೀಡಾಪಟುಗಳು...

ಕಲಬುರಗಿ | ಬಿತ್ತನೆ ಬೀಜ, ರಸಗೊಬ್ಬರಗಳ ದರ ಇಳಿಸುವಂತೆ ಕೆಪಿಆರ್‌ಎಸ್‌ ಆಗ್ರಹ

ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಇಳಿಸಲು ಹಾಗೂ ನಕಲಿ ಕಳಪೆ ಮಾರಾಟ...