ಕಿರಿಯ ವಯಸ್ಸಿನ ಪ್ರತಿಭಾವಂತ ಲೇಖಕಿ ರೂಪಾ ಪೂಜಾರಿ ರಚಿಸಿರುವ ‘ಕನಸಿನ ಭಾವನೆ’ ಪುಸ್ತಕಕ್ಕೆ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ. ಫಾರೂಕ್ ಮಣ್ಣೂರ ಅವರು ಪ್ರೋತ್ಸಾಹ ನೀಡಿದ್ದಾರೆ.
ವಿದ್ಯಾರ್ಥಿನಿಯ ಸಾಹಿತ್ಯ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಅವರು ಪುಸ್ತಕದ 100 ಪ್ರತಿಗಳನ್ನು ಖರೀದಿಸಿ, ಲೇಖಕಿ ರೂಪಾ ಪೂಜಾರಿ ಅವರನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ‘ಯುವ ಪ್ರತಿಭೆಗಳು ಸಮಾಜದ ಅಮೂಲ್ಯ ಸಂಪತ್ತು. ಅವರ ಕನಸುಗಳಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ರೂಪಾ ಪೂಜಾರಿ ಅವರಂತಹ ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಮಾದರಿಯಾಗಬೇಕು,’ ಎಂದು ಹೇಳಿದರು.
‘ಅತಿ ಚಿಕ್ಕ ವಯಸ್ಸಿನಲ್ಲೇ ಪುಸ್ತಕ ರಚಿಸಿರುವ ರೂಪಾ ಪೂಜಾರಿ ಅವರು ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ‘ಕನಸಿನ ಭಾವನೆ’ ಕೃತಿ ಯುವ ಮನಸ್ಸಿನ ಆಲೋಚನೆಗಳು ಮತ್ತು ಭಾವನೆಗಳನ್ನು ಮನಮುಟ್ಟುವ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದು, ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು.
ಇದನ್ನು ಓದಿದ್ದೀರಾ? ಕಲಬುರಗಿ | ಸಚಿವ ಹೆಚ್.ಕೆ. ಪಾಟೀಲರ ಹೇಳಿಕೆಗೆ ಎಐಡಿವೈಒ ತೀವ್ರ ಖಂಡನೆ
ಈ ವೇಳೆ ಉಪಸ್ಥಿತರಿದ್ದವರು ಯುವ ಪ್ರತಿಭೆಗಳನ್ನು ಉತ್ತೇಜಿಸಲು ಇಂತಹ ಪ್ರೋತ್ಸಾಹಗಳು ಅಗತ್ಯವೆಂದು ಅಭಿಪ್ರಾಯಪಟ್ಟರು.





