ಕಲಬುರಗಿ | ಬರಗಾಲ ಪ್ಯಾಕೇಜ್ 1000 ಕೋಟಿ ರೂ. ಘೋಷಣೆ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್‌ ಆಗ್ರಹ

Date:

ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ಕಲಬುರಗಿ ಸಂಪೂರ್ಣ ಬರ ಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪ್ಯಾಕೇಜ್ 1000 ಕೋಟಿ ರೂ. ಘೋಷಣೆ ಮಾಡಬೇಕು. ಜತೆಗೆ ವಿಳಂಬ ಮಾಡದೆ ತಕ್ಷಣವೇ ಬರ ಪರಿಹಾರ ವಿತರಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬಾಕಿ ಉಳಿದಿರುವ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಆಗ್ರಹಿಸಲಾಗಿದೆ.

- Advertisement -

ಕಲಬುರಗಿ ನಗರದಲ್ಲಿ ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ಭೀಕರ ಬರಗಾಲದಲ್ಲಿ ರೈತರ ಬೆಳೆ ಸಾಲ ಕಟ್ಟಲು ಒತ್ತಾಯ ಮಾಡಿ ಸಾಲದ ನೋಟಿಸ್ ಜಾರಿ ಮಾಡಿದ್ದು, ತುಂಬಾ ಖೇದಕರ ಸಂಗತಿಯಾಗಿದೆ. ಬ್ಯಾಂಕುಗಳು ಸಾಲದ ನೋಟಿಸ್ ಹಿಂಪಡಿಯಲು ರಾಜ್ಯ ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

“ರೈತರು ಗಂಭಿರ ಪರಿಸ್ಥಿತಿ ಎದುರಿಸುವ ಸಂಧರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ವಸೂಲಾತಿಗಾಗಿ ರೈತರಿಗೆ ಬ್ಯಾಂಕುಗಳು ಸಾಲದ ನೋಟಿಸ್ ಕೊಡುವುದು ರೈತ ವಿರೋಧಿ ದೋರಣೆ ಖಂಡನೀಯ” ಎಂದರು.

“ಬಾವಿಗಳು ಬೋರ್‌ವೆಲ್‌ಗಳು ಬತ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಇದ್ದ ಬೆಳೆಗಳೂ ಒಣಗುತ್ತಿವೆ. ರೊಕ್ಕದ ಮಾಲು ಸಂಪೂರ್ಣ ಕೈ ಕೊಟ್ಟಿದೆ. ಬೆಂಕಿಯಂಥ ಉರಿ ಬಿಸಿಲಿನಲ್ಲಿ ದನಕರುಗಳಿಗೆ ಅಡವಿಯಲ್ಲಿ ಮೇವಿಲ್ಲದೆ ರೈತರು ಚಿಂತಾಜನಕರಾಗಿದ್ದಾರೆ. ಭೀಕರ ಬರಗಾಲ ಸಂಕಷ್ಟದಲ್ಲಿ ಸಾಲದ ಭಾದೆ ತಾಳದೆ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ರೈತ ವಿರೋಧಿಯಾಗಿದೆ” ಎಂದು ಆರೋಪಿಸಿದರು.

“ಜೂನ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆ ಕೊರತೆ ಎದುರಾಗಿದೆ. ಮುಂಗಾರು ಬೆಳೆಗಳು ರೈತರ ರೊಕ್ಕದ ಮಾಲು ಉದ್ದು ಹೆಸರು ಸೋಯಾಬೀನ್, ಎಳ್ಳು, ತೊಗರಿ ಸಂಪೂರ್ಣ ಕೈಕೊಟ್ಟಿದೆ. ಕೆಲವು ತಾಲೂಕುಗಳಲ್ಲಿ ಒಂದು ಹಿಡಿ ಬೀಜವನ್ನು ಕೈಯಲ್ಲಿ ಹಿಡಿದು ಭೂಮಿ ಬಿತ್ತನೆ ಮಾಡಿಲ್ಲ. ಕರಿ ಒಣ ಭೂಮಿ ಹಾಗೆಯೇ ಉಳಿದಿದೆ. ಇನ್ನೂ ಕೆಲವು ಬೆರಳೆಣಿಕೆಯಷ್ಟು ಮಾತ್ರ ಬಿತ್ತನೆ ಮಾಡಿದ್ದೂ ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಇದ್ದ ತೊಗರಿ, ಹತ್ತಿ, ಕಬ್ಬು ಬೆಳೆಗಳೂ ಕೂಡ ಒಣಗಿ ಬಾಡಿ-ಬತ್ತಿ ಹೊಸಿಯುತ್ತಿವೆ. ಇದ್ದ ಕಬ್ಬು ಸುಮಾರು ಹಳ್ಳಿಗಳಾದ್ಯಂತ ರೈತರ ಹೊಲಗಳಲ್ಲಿ ಬಾವಿಗಳು ಬೋರ್‌ವೆಲ್‌ಗಳು ಬತ್ತಿ ಹೋಗಿದ್ದ ಪರಿಣಾಮವಾಗಿ ಕಬ್ಬು ಕಟಾವು ಮಾಡದೆ ಉಳಿಯುವುದು ಸರಾಸರಿ ಅರ್ಧದಷ್ಟು ಕಬ್ಬು ಕಟಿಂಗ್ ಆಗದೆ ಉಳಿಯುತ್ತದೆ. ‌ಇದರಿಂದಾಗಿ ಕಬ್ಬು ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಉಡುಪಿ | ಹೂಡೆ ರಸ್ತೆಬದಿಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವಿನ ಕಳೇಬರ ದಫನ

“ಕಲಬುರಗಿ ಜಿಲ್ಲೆಯ ರೈತರ ಸಂಕಷ್ಟ ರಾಜ್ಯ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಬೆಳೆವಿಮೆಯಲ್ಲಿ ತಾರತಮ್ಯ ಬರಗಾಲ ಘೋಷಣೆಯಲ್ಲಿ ಅನ್ಯಾಯ ದೋರಣೆ ಎಸಗಿದೆ. ಕೇಂದ್ರ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಬರಗಾಲ ಮತ್ತು ಸಾಲ ಮನ್ನಾ ಕುರಿತು ಬಾಯಿ ಬಿಡದೇ ತೋರಿಕೆಗೆ ಮಾತ್ರ ಮೊಸಳೆ ಕಣ್ಣೀರು ಸುರಿಸುತ್ತಿರುವ ರಾಜ್ಯ ಸರ್ಕಾರ ಕೇಂದ್ರದ ಕಡೆ ಕೈ ಮಾಡಿದೆ. ಆದರೆ ಕೇಂದ್ರ ಸರ್ಕಾರ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದಿರುವುದೇ ಬೇಸರದ ಸಂಗತಿಯಾಗಿದೆ. ರೈತರ ಓಟಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ಸರ್ಕಾರ ರೈತರಿಗೇ ದ್ರೋಹ ಬಗೆದಂತಾಗಿದೆ” ಎಂದು ಟೀಕಿಸಿದರು.

ಕೆಪಿಆರ್‌ಎಸ್‌ ಸಹ ಕಾರ್ಯದರ್ಶಿ ದಿಲೀಪ್ ನಾಗೂರೆ, ಉಪಾಧ್ಯಕ್ಷ ದೇವು ಬಿರಾದಾರ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು; ಸಚಿವನ ವಿಕೃತ ಹೇಳಿಕೆ

ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಅಪ್ರಾಪ್ತ ವಿದ್ಯಾರ್ಥಿನಿ ಮೇಲಿನ ಭೀಕರ ದೌರ್ಜನ್ಯ...

ಹಳ್ಳಿ ಮಕ್ಕಳಿಗೆ ‘ಎಐ’ ತಂತ್ರಜ್ಞಾನ, ಉದ್ಯಮ ಆಧಾರಿತ ಪಠ್ಯಕ್ರಮಕ್ಕೆ ಒತ್ತು: ಡಿ ಕೆ ಶಿವಕುಮಾರ್

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಕಿಯೋ’ ಕಂಪ್ಯೂಟರ್‌ಗಳ ಮೂಲಕ ಗ್ರಾಮೀಣ ಭಾಗದ...

ಉಡುಪಿ | ಹೂಡೆ ರಸ್ತೆಬದಿಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವಿನ ಕಳೇಬರ ದಫನ

ಉಡುಪಿ ನಗರದ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಎಂಬಲ್ಲಿ ರಸ್ತೆ...