ಕಲಬುರಗಿ | ಬುದ್ಧ ನಗರಕ್ಕೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌, ಬೀದಿದೀಪ ಅಳವಡಿಕೆ

Date:

ಕಲಬುರಗಿ ಜಿಲ್ಲಾ ವಿದ್ಯುತ್ ಶಕ್ತಿ ನಿಗಮ ನಿಯಮಿತದಿಂದ ಜೇವರ್ಗಿ ತಾಲೂಕಿನ ಮಾರಡಿಗಿ ಗ್ರಾಮದ ಬುದ್ಧ ನಗರದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಮತ್ತು ಬೀದಿದೀಪದ ಕಂಬಗಳು ಹಾಗೂ ಹೊಸ ಲೈನ್ ಅಳವಡಿಸಲಾಯಿತು ಎಂದು ಜೆಸ್ಕಾಂ ಎಇಇ ರಾಜೇಂದ್ರ ಕಟ್ಟಿಮನಿ ತಿಳಿಸಿದರು.

ತಾಲೂಕಿನ ಮಾರಡಿಗಿ ಗ್ರಾಮದ ಬುದ್ಧ ನಗರದಲ್ಲಿ ಬೀದಿದೀಪ ಮತ್ತು ಟಿ ಸಿ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಎಸ್‌ಡಿಪಿ ಯೋಜನೆ ಅಡಿ 2015-16ನೇ ಸಾಲಿನಲ್ಲಿ ಟಿ ಸಿ, ಬೀದಿದೀಪಗಳನ್ನು ಹಾಕುವುದಾಗಿ ಆದೇಶ ನೀಡಿದ್ದರೂ ಕೂಡ ಗ್ರಾಮಸ್ಥರು ತಕರಾರು ಮಾಡಿದ ಕಾರಣಗಳಿಂದ ಟಿ ಸಿ, ಬೀದಿದೀಪ ಅಳವಡಿಸಿಲು ಸಾಧ್ಯವಾಗಿರಲಿಲ್ಲ. ದಲಿತ ಸೇನೆ ಮುಖಂಡ ಪ್ರಕಾಶ್ ಕಾಂಬ್ಳೆ, ಭೀಮರಾಯ ಕಾಂಬ್ಳೆ, ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಹೊಸಮನಿ ಅವರ ನೇತೃತ್ವದಲ್ಲಿ ಟಿ ಸಿ, ಬೀದಿದೀಪ ಅಳವಡಿಸಲು ಸಾಧ್ಯವಾಯಿತು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ

ಈ ಸಂದರ್ಭದಲ್ಲಿ ಗುತ್ತೇದಾರ್ ಚಾಂದ್ ಪಾಶ, ಮಲ್ಕಪ್ಪ, ಗುರುಲಿಂಗಪ್ಪ ಗೌಡ ಪೊಲೀಸ್ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯ ಶಿವಪ್ಪ ಹೊಸಮನಿ, ಪ್ರಕಾಶ್ ಕಾಂಬಳೆ, ದೇವೇಂದ್ರಪ್ಪ ಬಂಗಾರಪ್ಪ, ಭೀಮರಾಯ ಕಾಂಬಳೆ, ಶರಣಪ್ಪ ಹೊಗೆನೂರ್, ಮಲ್ಲಪ್ಪ ನಡುವಿನಕೇರಿ, ದೇವಿಂದ್ರಪ್ಪ, ಚಂದಪ್ಪ ಹೊಸಮನಿ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಕ್ರೀಡಾಪಟುಗಳು ದುಶ್ಚಟದಿಂದ ದೂರವಿರಿ: ಮಹೇಶ್ ಹೆಗಡೆ

ಪ್ರತಿಯೊಬ್ಬ ಯುವಜನರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ನಮ್ಮ ತಾಲೂಕಿನ ಕ್ರೀಡಾಪಟುಗಳು...

ಕಲಬುರಗಿ | ಬಿತ್ತನೆ ಬೀಜ, ರಸಗೊಬ್ಬರಗಳ ದರ ಇಳಿಸುವಂತೆ ಕೆಪಿಆರ್‌ಎಸ್‌ ಆಗ್ರಹ

ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಇಳಿಸಲು ಹಾಗೂ ನಕಲಿ ಕಳಪೆ ಮಾರಾಟ...