ಟ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶಹಾಬಾದ್ ಪಟ್ಟಣದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಭೀಮಶಪ್ಪ ನಗರ ಬಳಿ ಗುರುವಾರ ನಡೆದಿದೆ.
ಮೃತರನ್ನು ಮಲ್ಲಪ್ಪ ಚಂದ್ರಾಮ ಪೂಜಾರಿ (27) ಶಹಾಬಾದ್ ತಾಲ್ಲೂಕಿನ ತರನಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ.
ಹಳೆ ಶಹಾಬಾದ್‌ನಿಂದ ಪರಸಿ ತುಂಬಿಕೊಂಡು ಸಿಬಿರಕಟ್ಟಾ ಒಳರಸ್ತೆ ಮೂಲಕ ರಾಜ್ಯ ಹೆದ್ದಾರಿ 125ಕ್ಕೆ ಟ್ರಾಕ್ಟರ್ ಏರಿಸುವ ವೇಳೆ ಇಂಜಿನ್ ಮೇಲಕ್ಕೆ ಎದ್ದ ಪರಿಣಾಮ ಚಾಲಕ ಇಂಜಿನ್ ಹಾಗೂ ಟ್ರಾಲಿ ಮಧ್ಯೆ ಸಿಲುಕಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಸ್ಮಶಾನಭೂಮಿ ಕೊರತೆ: ಶವದೊಂದಿಗೆ ಗ್ರಾಮಸ್ಥರ ಪ್ರತಿಭಟನೆ
ಘಟನಾ ಸ್ಥಳಕ್ಕೆ ಶಹಾಬಾದ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ತಿಳಿದು ಬಂದಿದೆ.





