SIR | ಕಲ್ಯಾಣ ಕರ್ನಾಟಕದಲ್ಲಿ 18.11 ಲಕ್ಷ ಮತದಾರರು ಡಿಲೀಟ್ ಆಗುವ ಆತಂಕ!

Date:

ಕಲ್ಯಾಣ ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆದರೆ ಈ ಪ್ರಕ್ರಿಯೆಯಿಂದ ಲಕ್ಷಾಂತರ ಹೆಸರುಗಳಿಗೆ ಕತ್ತರಿ ಬೀಳುವ ಹಂತಕ್ಕೆ ತಲುಪಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ ಸುಮಾರು 18.11 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ. ಅರ್ಹ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ಎದುರಾಗಿದೆ.

- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ವಿವಿಧ ಸಂಘಟನೆಗಳು ಆರಂಭದಿಂದಲೂ ಆರೋಪಿಸುತ್ತಲೇ ಬಂದಿದ್ದವು. ಇದೀಗ, ಪ್ರಜ್ಞಾವಂತರ ಆರೋಪ-ಕಳವಳ ದಿಟವಾಗುವುದು ನಿಚ್ಚಳವಾಗಿದೆ. ರಾಜ್ಯದ ಲಕ್ಷಾಂತರ ಅರ್ಹರನ್ನು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗಿಡಲು ಈಗಾಗಲೇ ಗುರುತಿಸಲಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಮತದಾರರು ತಮ್ಮ ಮತ ಹಕ್ಕು ಕಳೆದುಕೊಳ್ಳುತ್ತಿರುವುದು ಅಂಕಿಅಂಶಗಳಿಂದ ಬಯಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 1.16 ಕೋಟಿ ಮತದಾರರಿದ್ದಾರೆ. ಈ ಪೈಕಿ ಬಿಎಲ್‌ಒಗಳು ಬಹುತೇಕ ಮನೆ-ಮನೆಗಳಿಗೆ ತೆರಳಿ ಎಸ್‌ಐಆರ್ ಪ್ರಕ್ರಿಯೆಯ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಿದ್ದಾರೆ. ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಿ ಡಿಜಿಟೈಸೇಷನ್ ಪ್ರಕ್ರಿಯೆ ಸಹ ಬಹುತೇಕ ಪೂರ್ಣಗೊಳಿಸಿದ್ದಾರೆ. ಇಲ್ಲಿಯವರೆಗೆ ಅರ್ಜಿ ವಾಪಸ್‌ ನೀಡದೇ ಇರುವವರು ಆಗಸ್ಟ್‌ 8ರೊಳಗೆ ಸಲ್ಲಿಸಲು ಇನ್ನೂ ಅವಕಾಶ ಇದೆ. ಆದರೆ, ಯಾವ ಮತದಾರ ತನ್ನ ಹಕ್ಕು ಕಳೆದುಕೊಳ್ಳುತ್ತಿದ್ದಾನೆ ಎಂಬುದು ಚುನಾವಣೆ ಆಯೋಗ ನೀಡಿದ ಅಂಕಿಅಂಶಗಳಿಂದ ಗೊತ್ತಾಗುತ್ತಿದೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹಲವರು ಹೊರಗುಳಿಯಲು ಮುಖ್ಯ ಕಾರಣಗಳಲ್ಲಿ ಎಎಸ್‌ಡಿಡಿಒ (ಅಬ್‌ಸೆಂಟ್-ಎ, ಶಿಫ್ಟೆಡ್-ಎಸ್, ಡೆಡ್-ಡಿ, ಡ್ಯೂಪ್ಲಿಕೇಟ್-ಡಿ, ಅದರ್ಸ್-ಒ) ವರ್ಗೀಕರಣ ಪ್ರಧಾನವಾಗಿದೆ. ಆ.5ರ ಮಾಹಿತಿಯಂತೆ ಈ ವರ್ಗದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 18,11,236 ಮತದಾರರನ್ನು ಒಳಗೊಂಡು ರಾಜ್ಯದ 1.10 ಕೋಟಿ ಮತದಾರರನ್ನು ಪಟ್ಟಿ ಮಾಡಲಾಗಿದೆ. ಎಎಸ್‌ಡಿಡಿಒ ಅಡಿಯಲ್ಲಿ ಪಟ್ಟಿಯಾಗಿರುವ ಪಟ್ಟು ಮತದಾರರಲ್ಲಿ 18%ರಷ್ಟು ಮಂದಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯವರೇ ಆಗಿದ್ದಾರೆ. ಇವುಗಳಲ್ಲಿ ಬಹುತೇಕ ಹೆಸರುಗಳು ಕರಡು ಪಟ್ಟಿಯಿಂದ ಅಳಿಸಿಹೋಗುವ ಆತಂಕವಿದೆ.

ಏಳು ಜಿಲ್ಲೆಗಳ 41 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1.16 ಕೋಟಿ ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ ಆಗಸ್ಟ್‌ 6ರವರೆಗೆ 83,52,587 ನಮೂನೆಗಳನ್ನು ಸ್ವೀಕರಿಸಲಾಗಿದೆ. ಇಲ್ಲಿಯವರೆಗೆ ಎಲ್ಲ ಅರ್ಜಿಗಳನ್ನು ಡಿಜಿಟೈಸೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೊಂದು ವಿಪರ್ಯಾಸ ಸಂಗತಿ ಎಂದರೆ 2.33 ಲಕ್ಷ ನೋ ಮ್ಯಾಪಿಂಗ್‌ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅವರಲ್ಲಿ ಬಹುತೇಕರಿಗೆ ನೋಟಿಸ್‌ ಬರುವ ಸಾಧ್ಯತೆ ಹೆಚ್ಚಿದೆ.

ಕಲ್ಯಾಣದ ಏಳು ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೇ ಕರಡು ಪಟ್ಟಿಯಿಂದ ಹೊರಗುಳಿಯುವ ಮತದಾರರ ಸಂಖ್ಯೆ ಅಧಿಕವಾಗಿದೆ. ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಬರೋಬ್ಬರಿ 5,32,829 (22%) ಮತದಾರರನ್ನು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿಯೇ 1 ಲಕ್ಷದಷ್ಟು ಮತದಾರರನ್ನು ಹೊರಗಿಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 3.50 ಲಕ್ಷದಷ್ಟು ಶಾಶ್ವತ ಸ್ಥಳಾಂತರ ಎಂದು ಗುರುತಿಸಿದರೆ, 50 ಸಾವಿರದಷ್ಟು ಪತ್ತೆಯಾಗದವರು, 71 ಸಾವಿರ ಮೃತ ಮತದಾರರು ಇರುವುದು ಮಾಹಿತಿಯಿಂದ ತಿಳಿದುಬಂದಿದೆ.

ಯಾದಗಿರಿ ಜಿಲ್ಲೆಯ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ 10.53 ಲಕ್ಷ ಮತದಾರರಿದ್ದಾರೆ. ಈ ಪೈಕಿ 1.89 ಲಕ್ಷ ಜನರನ್ನು ಮತಪಟ್ಟಿಯಿಂದ ಹೊರಕ್ಕೆ ಹಾಕಲು ಪಟ್ಟಿ ಮಾಡಲಾಗಿದ್ದು, ಇವರಲ್ಲಿ 1.16 ಲಕ್ಷ ಜನರನ್ನು ಶಾಶ್ವತ ಸ್ಥಳಾಂತರ ಪಟ್ಟಿಗೆ ಸೇರಿಸಲಾಗಿದೆ. ಬೀದರ್‌ನಲ್ಲಿ 2.45 ಲಕ್ಷ ಮತದಾರರನ್ನು ಕರಡು ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ. ಇದರಲ್ಲಿ 1.63 ಸಾವಿರಕ್ಕೂ ಅಧಿಕ ಮತದಾರರನ್ನು ಶಾಶ್ವತ ಸ್ಥಳಾಂತರ ಪಟ್ಟಿಗೆ ಸೇರಿಸಲಾಗಿದೆ. ಬೀದರ್ ಕ್ಷೇತ್ರದಲ್ಲಿಯೇ 46 ಸಾವಿರ ಜನರು ಸ್ಥಳಾಂತರ ಪಟ್ಟಿಯಲ್ಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 12.29 ಲಕ್ಷ ಮತದಾರರ ಪೈಕಿ 2.23 ಲಕ್ಷ ಹೊರಗುಳಿಯುವ ಪಟ್ಟಿ ಸಿದ್ಧವಾಗಿದೆ. ಅಂದರೆ ಶೇ 18.15ರಷ್ಟು ಮತದಾರರು ಎಎಸ್‌ಡಿಡಿಒ ಎಂದು ವರ್ಗೀಕರಿಸಲಾಗಿದೆ. ಈ ಜಿಲ್ಲೆಯಲ್ಲಿಯೂ ಕೂಡ 1 ಲಕ್ಷಕ್ಕೂ ಅಧಿಕ ಜನರನ್ನು ಶಾಶ್ವತ ಸ್ಥಳಾಂತರ ಪಟ್ಟಿಗೆ ಸೇರಿಸಲಾಗಿದೆ. ಇನ್ನು ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11.42 ಲಕ್ಷ ಮತದಾರರಿದ್ದಾರೆ. ಒಟ್ಟು 1.49 ಲಕ್ಷ ASDDO ಪೈಕಿ 69,465 ಶಾಶ್ವತ ಸ್ಥಳಾಂತರ, ಪತ್ತೆಯಾಗದವರು 22,484 ಎಂದು ವರ್ಗೀಕರಿಸಲಾಗಿದೆ.

ಕೊಪ್ಪಳದಲ್ಲಿ 11.90 ಲಕ್ಷ ಮತದಾರರ ಪೈಕಿ 1.49 ಲಕ್ಷ ಮತದಾರರು ಎಎಸ್‌ಡಿಡಿಒ ಪಟ್ಟಿಯಲ್ಲಿದ್ದಾರೆ. ರಾಯಚೂರಿನಲ್ಲಿ 17.14 ಲಕ್ಷ ಒಟ್ಟು ಮತದಾರರಿದ್ದು, ಅವರಲ್ಲಿ 3.21 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಉಳಿಯುವ ಸಾಧ್ಯತೆ ಇದೆ. ಕಲಬುರಗಿ ನಂತರ ಅತಿ ಹೆಚ್ಚು ಮತದಾರರು ರಾಯಚೂರನಲ್ಲಿಯೇ ಎಎಸ್‌ಡಿಡಿಒ ವರ್ಗೀಕರಣ ಪಟ್ಟಿಗೆ ಸೇರಿಸಲಾಗಿದೆ.

ಎನ್ಯೂಮರೇಷನ್ ಫಾರ್ಮ್‌ಗಳನ್ನು ವಾಪಸ್ ನೀಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್‌ಒ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕು. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಅಥವಾ ಪೋಷಕರ ಹೆಸರು ಇಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಹಾಕಿ ಬಿಎಲ್‌ಒಗೆ ನೀಡಬಹುದು. ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ ಎರಡು ದಿನಗಳಲ್ಲಿ ಈ ಎಲ್ಲ ಅಂಕಿ-ಅಂಶಗಳಲ್ಲಿ ಏರಿಳಿತ ಆಗುವ ಸಾಧ್ಯತೆಯೂ ಇದೆ.

ಆಗಸ್ಟ್ 17ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ. ಹೊಸದಾಗಿ ನೋಂದಾಯಿಸಲು ಅರ್ಜಿ ನಮೂನೆ 6ನ್ನು ಸಲ್ಲಿಸಬೇಕು. 2002ರ ಪಟ್ಟಿಯಲ್ಲಿ ಹೆಸರು ಅಥವಾ ಪೋಷಕರ ಹೆಸರು ಇಲ್ಲದೇ ಅರ್ಜಿ ನೀಡಿದವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಿದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುತ್ತದೆ. ಎಎಸ್‌ಡಿಡಿಒ ಎಂದು ವರ್ಗೀಕರಿಸಿದ ಮತದಾರರ ಪಟ್ಟಿಯ ವಿವರಗಳನ್ನು ಸಾರ್ವಜನಿಕರು ಈ ಲಿಂಕ್‌ ಒತ್ತಿ https://ceo.karnataka.gov.in/asddo.html ಪರಿಶೀಲಿಸಬಹುದಾಗಿದೆ. ನಿಮ್ಮ ಬೂತ್‌ನಲ್ಲಿ ಯಾರು ಮೃತ, ಶಾಶ್ವತ ಸ್ಥಳಾಂತರ ಪಟ್ಟಿಗೆ ಸೇರಿದ್ದಾರೆ ಎಂಬ ವಿವರ ಲಭ್ಯವಾಗಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಆ.5ರವರೆಗೆ ಒಟ್ಟು 18,14386 ಮತದಾರರನ್ನು ಎಎಸ್‌ಡಿಡಿಒ ಕರಡು ಪಟ್ಟಿಯಿಂದ ಹೊರಕ್ಕೆ ಹಾಕಲು ಗುರುತಿಸಲಾಗಿತ್ತು. ಆದರೆ, ವರ್ಗೀಕರಣದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿ ಎಎಸ್‌ಡಿಡಿಒ ಮತಗಳ ರೋಲ್‌ಬ್ಯಾಕ್‌ (ಮರು ಸೇರ್ಪಡೆ) ಆಗಿರುವ ಬಳಿಕ ಆ.6ರ ಮಾಹಿತಿ ಪ್ರಕಾರ 18,11,236ಕ್ಕೆ ಇಳಿಕೆಯಾಗಿರುವುದು ಚುನಾವಣಾ ಆಯೋಗದ ನೀಡಿದ ಮಾಹಿತಿಯಿಂದ ಗೊತ್ತಾಗುತ್ತಿದೆ.

ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಉಡುಪಿ ಜಿಲ್ಲೆಯಲ್ಲಿ ಎಎಸ್‌ಡಿಡಿಒ ಪ್ರಮಾಣ ಕೇವಲ 6.03% ಇದೆ. ಆದರೆ, ಅತ್ಯಂತ ಹಿಂದುಳಿದಿರುವ ಕಲಬುರಗಿ ಜಿಲ್ಲೆಯ ಎಎಸ್‌ಡಿಡಿಒ 22..47%, ಯಾದಗಿರಿ 17.96%, ರಾಯಚೂರು 18.75%, ಬಳ್ಳಾರಿ 18.15%, ಬೀದರ 16.82%, ಕೊಪ್ಪಳ 13.10% ಹಾಗೂ ವಿಜಯನಗರ 12.53%ರಷ್ಟಿದೆ. ಕಲ್ಯಾಣ ಕರ್ನಾಟಕದಿಂದ ಅತಿ ಹೆಚ್ಚು ಬಡವರು, ಕೂಲಿ ಕಾರ್ಮಿಕರು ಕೆಲಸ ಅರಸಿ ಬೆಂಗಳೂರು, ಹೈದರಾಬಾದ್‌, ಮುಂಬೈ, ಪುಣೆ ಸೇರಿದಂತೆ ನಾನಾ ಕಡೆ ಗುಳೆ ಹೋಗುತ್ತಿರುವ ಕಾರಣಕ್ಕೆ ತಮ್ಮ ಸ್ವಂತ ಕ್ಷೇತ್ರದಲ್ಲಿ ಮತಹಕ್ಕು ಕಳೆದುಕೊಳ್ಳುತ್ತಿದ್ದಾರೆ ಎಂಬುದು ನಿಶ್ಚಳವಾಗಿದೆ.

ಬಿಎಲ್‌ಒಗಳಿಗೆ ಸರಿಯಾಗಿ ತರಬೇತಿ ನೀಡಿಲ್ಲ. ಇದರಿಂದಾಗಿ ಅಲೆಮಾರಿಗಳು, ಕೊಳಗೇರಿ ನಿವಾಸಿಗಳು ಹಾಗೂ ವಲಸೆ ಕಾರ್ಮಿಕರಿಗೆ ಅಗತ್ಯ ಮಾಹಿತಿ ತಲುಪಿಲ್ಲ. ಉದ್ಯೋಗಕ್ಕಾಗಿ ವಲಸೆ ಹೋಗುವುದು ಅಥವಾ ಬಾಡಿಗೆ ಮನೆ ಬದಲಾಯಿಸುವುದು ಅಪರಾಧವಲ್ಲ. ಕೇವಲ ಬಿಎಲ್‌ಒ ಭೇಟಿ ವೇಳೆ ಮನೆಯಲ್ಲಿ ಸಿಗಲಿಲ್ಲ ಎಂಬ ಕಾರಣಕ್ಕೆ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವುದು ಸರಿಯಲ್ಲ. ಶೇ.100ರಷ್ಟು ಡಿಜಿಟಲೀಕರಣ ಪೂರ್ಣಗೊಳಿಸಿದ್ದೆ ಸಾಧನೆ ಎಂಬಂತೆ ಹೇಳಲಾಗಿದ್ದರೂ ವಾಸ್ತವ ಚಿತ್ರಣವೇ ಬೇರೆ ಇದೆ. ಇನ್ನು ಆರಂಭದಲ್ಲಿ ಅವಸರದಿಂದ ಗಣತಿ ನಮೂನೆ ಸರಿಯಾಗಿ ಭರ್ತಿ ಮಾಡದ ಮತದಾರರು ತಮ್ಮ ಮತ ಭದ್ರವಾಗಿದೆಯೇ ಅಥವಾ ನೋಟಿಸ್‌ ಬರುವುದೊ ಎಂಬ ಆತಂಕ ಎದುರಾಗಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಕರ್ನಾಟಕ ಹೊರತುಪಡಿಸಿ ನೆರೆ ರಾಜ್ಯಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿ ಅಲ್ಲೇ ನೆಲೆಸಿರುವ ಬಹಳಷ್ಟು ಜನರು ಎರಡು ಕಡೆ ಮತಹಕ್ಕು ಹೊಂದಿದ್ದರು. ಇದೀಗ ಎಸ್‌ಐಆರ್ ಪ್ರಕ್ರಿಯೆ ನೆರೆಯ ತೆಲಂಗಾಣ, ಮಹಾರಾಷ್ಟ್ರದಲ್ಲಿ ಸಹ ನಡೆದಿರುವ ಕಾರಣ ರಾಜ್ಯದ ಮತದಾರರು ತಮ್ಮ ಸ್ವಂತ ಊರಿನಲ್ಲಿ ಮತಹಕ್ಕು ತೆಗೆದು ತಾವು ನೆಲೆಸಿರುವ ರಾಜ್ಯಗಳಲ್ಲಿ ಹಾಗೇ ಉಳಿಸಿಕೊಂಡಿದ್ದಾರೆ. ಹೀಗಾಗಿಯೇ ಶಾಶ್ವತ ಸ್ಥಳಾಂತರ ಪಟ್ಟಿಗೆ ಸೇರಿದವರ ಸಂಖ್ಯೆ ಅಧಿಕವಾಗಿರುವ ಸಾಧ್ಯತೆ ಇದೆ. ಇನ್ನು ಅನೇಕ ಕಡೆ ಬಿಎಲ್‌ಒಗಳು ಮನೆಗೆ ಹೋದ ವೇಳೆ ಪತ್ತೆಯಾಗದವರ ಸಂಖ್ಯೆ ಬಹಳಷ್ಟು ಇರುವುದು ಈ ಭಾಗದ ಶೈಕ್ಷಣಿಕ, ಆರ್ಥಿಕ ಹಿಂದುಳಿರುವಿಕೆಗೆ ಸಾಕ್ಷಿಯಾಗಿದೆ ಎನ್ನಬಹುದು. ಹೀಗೆ ಹಲವಾರು ಕಾರಣಗಳಿಂದ ಹೈದರಾಬಾದ್‌ ಕರ್ನಾಟಕದ ಬಡವರು ಮತ್ತು ದಮನಿತರು ಹೆಚ್ಚು ಸಂಖ್ಯೆಯಲ್ಲಿ ಎಸ್‌ಐಆರ್‌ನಿಂದ ಹೊರಗುಳಿಯುವ ಆತಂಕ ಕಾಣತೊಡಗಿದೆ.

ಪೂರಕ ಮಾಹಿತಿ : ವಿಜಯಕುಮಾರ, ರಫಿ ಗುರಗುಂಟ, ಗೀತಾ ಹೊಸಮನಿ

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಅಕ್ರಮಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ...

33 ಲಕ್ಷ ಮತದಾರರಿಗೆ ನೋಟಿಸ್: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ...

ಕಲಬುರಗಿ | ಬರಗಾಲ ಪ್ಯಾಕೇಜ್ 1000 ಕೋಟಿ ರೂ. ಘೋಷಣೆ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್‌ ಆಗ್ರಹ

ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ಕಲಬುರಗಿ ಸಂಪೂರ್ಣ ಬರ ಪೀಡಿತ ಪ್ರದೇಶವೆಂದು...

ಮರಾಠಾ ಸಮುದಾಯದ ಸಮಗ್ರ ಸಮೀಕ್ಷೆಗೆ ಡಿಜಿಟಲ್ ಆ್ಯಪ್

ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು...