ಕಾರವಾರ | ಆನ್‌ಲೈನ್‌ ಟ್ರೇಡಿಂಗ್‌ ಮೋಸದ ಬಲೆಗೆ ಸಿಕ್ಕು 59 ಲಕ್ಷ ಕಳೆದುಕೊಂಡ ಹೊಟೇಲ್ ಉದ್ಯಮಿ

Date:

ಕಾರವಾರದ ಹೊಟೆಲ್ ಉದ್ಯಮಿ ಒಬ್ಬರು ಇನ್ಸ್ಟಾಗ್ರಾಂನಲ್ಲಿ ಕಂಡ ಜಾಹೀರಾತಿಗೆ ಬಲಿಯಾಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದು ಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. “Nuvama Investment Group” ಎಂಬ ಹೆಸರಿನಲ್ಲಿ ನಡೆದ ಈ ಆನ್‌ಲೈನ್‌ ವಂಚನೆ ಪ್ರಕರಣದಲ್ಲಿ ಕಾರವಾರ ತಾಲೂಕಿನ ಸದಾಶಿವಗಡ ನಿವಾಸಿ ಪಂಕಜ ರೋಹಿದಾಸ ನಾಯ್ಕ ಎಂಬುವರು ಕೆಲವು ವಾರಗಳ ಅಂತರದಲ್ಲಿ ರೂ. 59,50,000 ಹಣ ಕಳೆದುಕೊಂಡಿದ್ದಾರೆ. ಸದ್ಯ ಈ ಘಟನೆ ಕುರಿತು ಸೈಬರ್ ಕ್ರೈಂ ಇಲಾಖೆಯಲ್ಲಿ ದೂರು ದಾಖಲಾಗಿದೆ.

- Advertisement -

ಪಂಕಜ ಅವರ ಹೇಳಿಕೆಯ ಪ್ರಕಾರ, ದಿನಾಂಕ 21 ಸೆಪ್ಟೆಂಬರ್ 2025 ರಂದು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸುತ್ತಿರುವ ವೇಳೆ “Nuvama Investment Group” ಎಂಬ ಟ್ರೇಡಿಂಗ್ ಕಂಪನಿಯ ಜಾಹೀರಾತು ಕಾಣಿಸಿಕೊಂಡಿತು. “ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಲಾಭ ಗಳಿಸಬಹುದು” ಎಂಬ ಆಕರ್ಷಕ ಶೀರ್ಷಿಕೆಯ ಜಾಹೀರಾತಿನ ಕೆಳಗಿನ ಲಿಂಕ್ ಒತ್ತಿದಾಗ, ಅವರು “Nuvama 908 Success Path” ಎಂಬ ಹೆಸರಿನ ವಾಟ್ಸಪ್ ಗುಂಪಿಗೆ ಸೇರಿಕೊಂಡರು. ಆ ಗುಂಪಿನ ಆಡ್ಮಿನ್ “ಆರೋಹಿ ನಂಬೂದಿರಿ” ಎಂಬ ಮಹಿಳೆ (ಮೊಬೈಲ್ ನಂ: 7068099875) ಪಿರ್ಯಾದಿಯವರನ್ನು ಸಂಪರ್ಕಿಸಿ ಟ್ರೇಡಿಂಗ್ ಕುರಿತು ವಿವರ ನೀಡುತ್ತಾ, “NHNW+” ಎಂಬ ಟ್ರೇಡಿಂಗ್ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಿದರು. ಆಕೆಯ ಮಾರ್ಗದರ್ಶನದಂತೆ ಪಿರ್ಯಾದಿಯವರು ಹೂಡಿಕೆ ಪ್ರಾರಂಭಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಆರೋಪಿತೆಯ ಸೂಚನೆಯಂತೆ ಪಂಕಜ ಅವರು 26 ಸೆಪ್ಟೆಂಬರ್‌ನಿಂದ 6 ನವೆಂಬರ್ 2025 ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 59,50,000 ಮೊತ್ತವನ್ನು ಜಮಾ ಮಾಡಿದ್ದಾರೆ. ಆ್ಯಪ್‌ನ ವ್ಯಾಲೆಟ್‌ನಲ್ಲಿ ಲಾಭಾಂಶ ಸೇರಿ ರೂ. 3,62,84,377 ಹಣ ತಮ್ಮ ಖಾತೆಯಲ್ಲಿ ಇದೆ ಎಂದು ತೋರಿಸಿದೆ, ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಯಾವುದೇ ಹಣ ವಾಪಸ್ಸಾಗಲಿಲ್ಲ. ವಿತ್‌ಡ್ರಾ ಆಗದ ಕಾರಣ ಅವರು ಆರೋಪಿತೆಯನ್ನು ಸಂಪರ್ಕಿಸಿದಾಗ “ಇನ್ನೂ ಹೆಚ್ಚಾಗಿ ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭದ ಹಣ ಬಿಡುಗಡೆ ಆಗುತ್ತದೆ” ಎಂದು ಹೇಳುತ್ತಿದ್ದಂತೆ. ಅನುಮಾನ ಬಂದು, ತಾವು ಮೋಸಕ್ಕೆ ಒಳಗಾಗಿರುವುದಾಗಿ ಅರಿತು ತಕ್ಷಣ ಸೈಬರ್ ಕ್ರೈಂ ಇಲಾಖೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿತರು ನಕಲಿ ಟ್ರೇಡಿಂಗ್ ಆ್ಯಪ್‌ ಮತ್ತು ವಾಟ್ಸಪ್‌ ಗ್ರೂಪ್‌ಗಳನ್ನು ಬಳಸಿ ಜನರನ್ನು ಸುಲಭ ಲಾಭದ ಆಶೆಯಿಂದ ಹಣ ವಂಚಿಸುತ್ತಿದ್ದಾರೆ‌ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಆಸ್ತಿ ವಿಚಾರಕ್ಕೆ ನಡೆದ ಕಲಹದಲ್ಲಿ ತಂದೆಯನ್ನೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮಗ

ಸೈಬರ್ ಕ್ರೈಂ ಅಧಿಕಾರಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ಇಂತಹ ಆನ್‌ಲೈನ್‌ ಟ್ರೇಡಿಂಗ್‌ ಮತ್ತು ಇನ್ವೆಸ್ಟ್‌ಮೆಂಟ್‌ ಮೋಸಗಳು ಹೆಚ್ಚಾಗುತ್ತಿದ್ದು, ಜನರು ಅಜಾಗರೂಕರಾಗಿರುವುದೇ ವಂಚಕರಿಗೆ ಅವಕಾಶವಾಗುತ್ತಿದೆ. ಅನಾಮಿಕ ಜಾಹೀರಾತುಗಳ ಮೇಲೆ ನಂಬಿಕೆ ಇಟ್ಟು ಹಣ ಹೂಡಿಕೆ ಮಾಡುವ ಮುನ್ನ ಕಂಪನಿಯ ನಂಬಿಕೆ ಮತ್ತು ಮಾನ್ಯತೆ ಪರಿಶೀಲಿಸಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಯಾವುದೇ “ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಿರಿ” ಎಂಬ ಸಂದೇಶಗಳು ಅಥವಾ ಲಿಂಕ್‌ಗಳು ನಿಜವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಪರಿಚಿತರಿಂದ ಬಂದ ವಾಟ್ಸಪ್‌ ಸಂದೇಶಗಳಲ್ಲಿನ ಲಿಂಕ್‌ಗಳನ್ನು ಒತ್ತಬಾರದು. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್ ಹೊರತಾದ ಮೂಲಗಳಿಂದ ಯಾವುದೇ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದು ಅಪಾಯಕಾರಿ.

ಮೋಸವಾಗಿದೆ ಎಂಬ ಅನುಮಾನ ಬಂದ ತಕ್ಷಣವೇ www.cybercrime.gov.in ಪೋರ್ಟಲ್ ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಯ ಮೂಲಕ ದೂರು ನೀಡಬೇಕು. ಸೈಬರ್ ಅಧಿಕಾರಿಗಳು ಜನರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು — “ಆನ್‌ಲೈನ್‌ನಲ್ಲಿ ಬರುವ ಜಾಹೀರಾತುಗಳು ಹಾಗೂ ಟ್ರೇಡಿಂಗ್ ಆ್ಯಪ್‌ಗಳ ಮೂಲಕ ಸುಲಭ ಲಾಭದ ಭರವಸೆಗೆ ಬಲಿಯಾಗಬೇಡಿ. ಯಾರೇ ಹೇಳಿದರೂ ನಂಬದೆ, ಮೊದಲು ಪರಿಶೀಲಿಸಿ ನಂತರವೇ ಹೂಡಿಕೆ ಮಾಡಿ” ಎಂದು ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಒಂದು ಕ್ಲಿಕ್‌ನಿಂದಲೂ ಲಕ್ಷಾಂತರ ಹಣ ನಷ್ಟವಾಗುವ ಅಪಾಯವಿರುವುದರಿಂದ, ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕೆಂದು ಸೈಬರ್ ಕ್ರೈಂ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಬರ ಪರಿಹಾರ ಹೆಚ್ಚಳ, ಸಾಲಮನ್ನಾಕ್ಕೆ ರಾಜ್ಯ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ...

ಇಂಡಿ | ಸ್ಥಳೀಯ ಚುನಾವಣೆ: ಕಾಂಗ್ರೆಸ್ ಬಲಗೊಳಿಸಲು ಯಶವಂತರಾಯಗೌಡ ಪಾಟೀಲ ಕರೆ

ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ...

ಬಸವನ ಬಾಗೇವಾಡಿ ಸಮೀಪ 3.5 ತೀವ್ರತೆಯ ಭೂಕಂಪ ದಾಖಲು!

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ದಿಂದಾವರ ಗ್ರಾಮ ಪಂಚಾಯಿತಿ ಸಮೀಪ...

ಚಿಕ್ಕಮಗಳೂರು | ಚೇತನ್ ಗೊಡ್ಲುಮನೆ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ 

ಗೊಡ್ಲುಮನೆ ಹೆಚ್.ಹೆಚ್. ರಮೇಶ್ ಗೌಡ ಹಾಗೂ ಹೆಚ್.ಆರ್. ಜಯಲಕ್ಷ್ಮಿ ದಂಪತಿಯ ಹಿರಿಯ...