ಕೊಡಗು | ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ರದ್ದು; ಕ್ರೀಡಾಪಟುಗಳ ಆಕ್ರೋಶ

Date:

  • 23 ವರ್ಷಗಳಿಂದ ಕೊಡಗು ವಿದ್ಯಾರ್ಥಿಗಳ ವಿಶೇಷ ಆಯ್ಕೆ ನಡೆಯುತ್ತಿದೆ
  • ಮೂವರು ಬಾಲಕಿಯರು ಸೇರಿ 18 ವಿದ್ಯಾರ್ಥಿಗಳ ಆಯ್ಕೆ ರದ್ದು ಮಾಡಲಾಗಿದೆ

ರಾಜ್ಯ ಮಟ್ಟದ ತಂಡಗಳಿಗೆ ಕೊಡಗು ಕ್ರೀಡಾಪಟುಗಳ ವಿಶೇಷ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸುವ ನಿರ್ಧರಿಸಲಾಗಿದೆ. ಇದರಿಂದಾಗಿ ಆಯ್ಕೆಯಾದ ಮೂವರು ಬಾಲಕಿಯರು ಸೇರಿದಂತೆ 18 ವಿದ್ಯಾರ್ಥಿಗಳನ್ನು ತೆಗೆದುಹಾಕಿರುವುದರಿಂದ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಕಿಡಿಕಾರಿದ್ದಾರೆ.

“ಕೊಡಗು ಜಿಲ್ಲೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಟಗಾರರನ್ನು ಹೊಂದಿದ್ದು, ಅವರು ಒಲಿಂಪಿಕ್ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದಾರೆ. ಪೊನ್ನಂಪೇಟೆಯಲ್ಲಿ ಕಳೆದ 23 ವರ್ಷಗಳಿಂದ ಕೊಡಗು ವಿದ್ಯಾರ್ಥಿಗಳ ವಿಶೇಷ ಆಯ್ಕೆ ನಡೆಯುತ್ತಿದೆ. ಆಯ್ಕೆಯನ್ನು ರದ್ದುಗೊಳಿಸುವ ನಿರ್ಧಾರದ ಹಿಂದೆ ಹಿರಿಯ ಅಧಿಕಾರಿಗಳ ಕೈವಾಡವಿದೆ” ಎಂದು ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ಆರೋಪಿಸಿದ್ದಾರೆ.

“ರಾಷ್ಟ್ರ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಗಳು ಒಗ್ಗೂಡಿದಾಗ ಕೊಡಗಿನ ಕ್ರೀಡಾಪಟುಗಳಿಗೆ ಅವಕಾಶಗಳು ಕಡಿಮೆಯಾಗುವ ಸಾಧ್ಯತೆಯಿದೆ. ಪೊನ್ನಂಪೇಟೆ ಶಾಲೆಯಲ್ಲಿ ರಾಜ್ಯ ತಂಡಗಳಿಗೆ ಕೊಡಗು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲು ಜಿಲ್ಲಾ ಪಂಚಾಯಿತಿ ನಿರ್ಣಯ ಕೈಗೊಂಡಿದ್ದನ್ನು 2001ರಲ್ಲಿ ಕರ್ನಾಟಕ ಸರ್ಕಾರ ಅನುಮೋದಿಸಿತ್ತು” ಎಂದು ಅರುಣ್‌ ಮಾಚಯ್ಯ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಸುವರ್ಣಾವತಿ ಜಲಾಶಯದಲ್ಲಿ ಟ್ರಯಲ್ ಬೋಟಿಂಗ್

“ಕೂಡಿಗೆಯಲ್ಲಿ ರಾಜ್ಯಮಟ್ಟದ ಕ್ರೀಡಾ ಶಾಲೆ ನಡೆಯುತ್ತಿದ್ದು, ರಾಜ್ಯಮಟ್ಟದಲ್ಲಿ ಆಡುವ ಕ್ರೀಡಾಪಟುಗಳನ್ನು ಅಲ್ಲಿಂದಲೇ ಆಯ್ಕೆ ಮಾಡಲಾಗುತ್ತದೆ. ಮಡಿಕೇರಿಯ ಸಾಯಿ ಸ್ಪೋರ್ಟ್ಸ್ ರೆಸಿಡೆನ್ಷಿಯಲ್ ಶಾಲೆಯಿಂದ ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿಥಿರ ಧರ್ಮಜ ಉತ್ತಪ್ಪ ಮತ್ತು ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಕೂಡ ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ತೆಗೆದುಕೊಂಡ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸಮಯಕ್ಕೆಬಾರದ ಬಸ್‌, ದಲಿತ ವಿದ್ಯಾರ್ಥಿ ಪರಿಷತ್‌ ಪ್ರತಿಭಟನೆ

ಇಂಡಿಯ ದಲಿತ ವಿದ್ಯಾರ್ಥಿ ಪರಿಷತ್  ಹಾಗೂ ಪ್ರಗತಿಪರ ಸಂಘಟನೆಗಳು ಹಂಜಗಿ ಮತ್ತು...

ವಿಜಯಪುರ | ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ; ಆತಂಕದಲ್ಲಿ ಜನ

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ...

ಬೆಂಗಳೂರು | ಎರಡಂತಸ್ತಿನ ಕಟ್ಟಡ ಜತೆಗೆ ಧರೆಗುರುಳಿದ ಮೊಬೈಲ್ ಟವರ್

ಜೆಸಿಬಿ ಮೂಲಕ ಹಳೆ ಕಟ್ಟಡ ತೆರುವು ಮಾಡುತ್ತಿದ್ದ ವೇಳೆ ಪಕ್ಕದ ಕಟ್ಟಡದ...

ಸಂಕ್ರಾಂತಿಯಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ‘ಮುದ್ದೆ’ ಭಾಗ್ಯ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದುಡಿಯುವ ವರ್ಗ, ಬಡವರು, ನಿರ್ಗತಿಕರು, ವಿದ್ಯಾರ್ಥಿಗಳ...