2026ರ ನೊಬೆಲ್ ಸಾಹಿತ್ಯ ಪ್ರಶಸ್ತಿ: ಕೆನಡಾದ ಖ್ಯಾತ ಕವಯಿತ್ರಿ ‘ಆನ್ ಕಾರ್ಸನ್’ ಮುಡಿಗೇರಿದ ಗರಿ

Date:

ಸಾಹಿತ್ಯ ಲೋಕದ ಅತ್ಯಂತ ಪ್ರತಿಷ್ಠಿತ ಗೌರವವಾದ 2026ನೇ ಸಾಲಿನ ‘ನೊಬೆಲ್ ಸಾಹಿತ್ಯ ಪ್ರಶಸ್ತಿ’ಗೆ ಕೆನಡಾದ ಖ್ಯಾತ ಕವಯಿತ್ರಿ ಹಾಗೂ ಪ್ರಬಂಧಗಾರ್ತಿ ಆನ್ ಕಾರ್ಸನ್ ಭಾಜನರಾಗಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ಪ್ರಕಟಿಸಿದೆ.

- Advertisement -

​ಪ್ರಾಚೀನ ಸಂಪ್ರದಾಯಗಳೊಂದಿಗೆ ಲವಲವಿಕೆಯ ಸಂವಾದ ನಡೆಸುತ್ತಲೇ, ಸಮಕಾಲೀನ ಸಾಹಿತ್ಯಕ್ಕೆ ಹೊಸ ರೂಪಗಳನ್ನು ಸೃಷ್ಟಿಸಿದ ಅವರ ‘ದಿಟ್ಟ ಮತ್ತು ನವೀನ ಕೃತಿಶ್ರೇಣಿ’ಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಅಕಾಡೆಮಿ ಶ್ಲಾಘಿಸಿದೆ. ಸಾಹಿತ್ಯದ ವಿವಿಧ ಪ್ರಕಾರಗಳ ಗಡಿಗಳನ್ನು ಮೀರಿ ಕೃತಿಗಳನ್ನು ರಚಿಸುವ ಮೂಲಕ ಅವರು ಜಾಗತಿಕ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ...

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

​1950ರಲ್ಲಿ ಕೆನಡಾದ ಟೊರೊಂಟೊದಲ್ಲಿ ಜನಿಸಿದ 76 ವರ್ಷದ ಆನ್ ಕಾರ್ಸನ್ ಅವರು, ಕಾವ್ಯ, ಗದ್ಯ ಮತ್ತು ಅನುವಾದ ಪ್ರಕಾರಗಳ ನಡುವೆ ಮುಕ್ತವಾಗಿ ವಿಹರಿಸುವ ಅಪರೂಪದ ಶೈಲಿಗೆ ಹೆಸರಾದವರು. ಅವರ ಬಹುತೇಕ ಕೃತಿಗಳಲ್ಲಿ ಪ್ರಾಚೀನ ಗ್ರೀಕ್ ಸಾಹಿತ್ಯ ಮತ್ತು ಪುರಾಣಗಳ ಪ್ರಭಾವ ದಟ್ಟವಾಗಿ ಗೋಚರಿಸುತ್ತದೆ. 1986ರಲ್ಲಿ ಪ್ರಕಟವಾದ ಅವರ ಚೊಚ್ಚಲ ಕೃತಿ ‘ಇರೋಸ್ ದಿ ಬಿಟರ್‌ಸ್ವೀಟ್’ (Eros the Bittersweet) ಪ್ರಾಚೀನ ಗ್ರೀಕ್ ಸಂಪ್ರದಾಯ ಹಾಗೂ ಆಸೆ-ಆಕಾಂಕ್ಷೆಗಳ ಪರಿಶೋಧನೆಯೊಂದಿಗೆ ಸಾಹಿತ್ಯಿಕ ವಿಮರ್ಶೆಯನ್ನು ಅತ್ಯಂತ ಹದವಾಗಿ ಬೆರೆಸಿತ್ತು.

​1998ರಲ್ಲಿ ಹೊರಬಂದ ‘ಆಟೋಬಯೋಗ್ರಫಿ ಆಫ್ ರೆಡ್’ (Autobiography of Red) ಅವರ ಅತ್ಯಂತ ಜನಪ್ರಿಯ ಕೃತಿಯಾಗಿದೆ. ಪ್ರಾಚೀನ ಗ್ರೀಕ್ ಕವಿ ಸ್ಟೆಸಿಖೋರಸ್ ಅವರ ಕಾವ್ಯದ ತುಣುಕುಗಳಿಂದ ಪ್ರೇರಿತವಾದ ಈ ಕೃತಿಯು ಗದ್ಯ-ಕಾವ್ಯದ (Novel in verse) ರೂಪದಲ್ಲಿದೆ. ಗ್ರೀಕ್ ಪುರಾಣದಲ್ಲಿ ಹೆರಾಕ್ಲಿಸ್‌ನಿಂದ ಹತನಾಗುವ ಕೆಂಪು ರೆಕ್ಕೆಗಳ ದೈತ್ಯ ‘ಗೆರಿಯಾನ್’ (Geryon) ಕಥೆಯನ್ನು, ಆಧುನಿಕ ಕಾಲದ ಹದಿಹರೆಯದ ಹುಡುಗನೊಬ್ಬನ ಪ್ರೇಮ ವೈಫಲ್ಯ ಮತ್ತು ಆಸೆಗಳ ಕಥೆಯಾಗಿ ಮಾರ್ಪಡಿಸಿದ ಅವರ ಕಲ್ಪನೆಗೆ ಸಾಹಿತ್ಯ ಲೋಕ ಬೆರಗಾಗಿತ್ತು.

​2001ರಲ್ಲಿ ‘ದಿ ಬ್ಯೂಟಿ ಆಫ್ ದಿ ಹಸ್ಬೆಂಡ್’ ಕವನ ಸಂಕಲನಕ್ಕಾಗಿ ಪ್ರತಿಷ್ಠಿತ ‘ಟಿ.ಎಸ್. ಎಲಿಯಟ್’ (TS Eliot) ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕಾರ್ಸನ್ ಪಾತ್ರರಾಗಿದ್ದರು. ಇದಲ್ಲದೆ, ಪ್ರತಿಷ್ಠಿತ ಗುಗೆನ್‌ಹೀಮ್ ಮತ್ತು ಮ್ಯಾಕ್‌ಆರ್ಥರ್ ಫೆಲೋಶಿಪ್‌ಗಳೂ ಅವರಿಗೆ ಒಲಿದಿವೆ. ಅವರ ಬರವಣಿಗೆಯ ಶೈಲಿಗೆ ಎಂಥವರೂ ಮಾರುಹೋಗುತ್ತಾರೆ ಎಂಬುದಕ್ಕೆ ಅಮೆರಿಕದ ಖ್ಯಾತ ಲೇಖಕಿ ಸುಸಾನ್ ಸೊಂಟಾಗ್ ಅವರ ಮಾತುಗಳೇ ಸಾಕ್ಷಿ. “ಇಂಗ್ಲಿಷ್‌ನಲ್ಲಿ ಬರೆಯುವ ಬೆರಳೆಣಿಕೆಯಷ್ಟು ಶ್ರೇಷ್ಠ ಲೇಖಕರಲ್ಲಿ ಕಾರ್ಸನ್ ಒಬ್ಬರು. ಯಾವುದಾದರೂ ನಿಯತಕಾಲಿಕದಲ್ಲಿ ಅವರ ಬರಹವಿದ್ದರೆ, ನಾನು ಅದನ್ನು ಕಣ್ಮುಚ್ಚಿಕೊಂಡು ಖರೀದಿಸುತ್ತೇನೆ,” ಎಂದು ಸುಸಾನ್ ಈ ಹಿಂದೆ ಕೊಂಡಾಡಿದ್ದರು.

​ಆನ್ ಕಾರ್ಸನ್ ಅವರ ಕೃತಿಗಳು ವಿಭಿನ್ನ ರಚನಾ ಶೈಲಿಗೆ ಒಗ್ಗಿಕೊಂಡಿವೆ. ಪದ್ಯ, ಪ್ರಬಂಧ, ಶಾಸನಗಳು ಮತ್ತು ಗದ್ಯಗಳನ್ನು ಒಳಗೊಂಡ ‘ಮೆನ್ ಇನ್ ದಿ ಆಫ್ ಅವರ್ಸ್’ ಕೃತಿಯು 2001ರ ಚೊಚ್ಚಲ ಗ್ರಿಫಿನ್ ಕವನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ‘ಡಿಕ್ರಿಯೇಷನ್’ (Decreation) ಕೃತಿಯು ಕಾವ್ಯ, ಪ್ರಬಂಧ ಮತ್ತು ಒಪೆರಾಗಳ ಒಂದು ವಿಶಿಷ್ಟ ಸಮ್ಮಿಲನವಾಗಿತ್ತು. 2010ರಲ್ಲಿ ಪ್ರಕಟವಾದ ‘ನಾಕ್ಸ್’ (Nox) ಅವರ ಸಾಹಿತ್ಯಿಕ ಪ್ರಯೋಗಶೀಲತೆಗೆ ಅತ್ಯುತ್ತಮ ಉದಾಹರಣೆ. ಸಹೋದರನ ಮರಣದ ನಂತರ ಕಾರ್ಸನ್ ಸಿದ್ಧಪಡಿಸಿದ ನೋಟ್‌ಬುಕ್‌ನ ಮರುಮುದ್ರಣವನ್ನು ಒಳಗೊಂಡಿರುವ ಈ ಕೃತಿಯು ಒಂದು ವಿಶಿಷ್ಟವಾದ ‘ಅಕಾರ್ಡಿಯನ್ ಫೋಲ್ಡ್’ (ಮಡಚಬಹುದಾದ) ಪೆಟ್ಟಿಗೆಯ ರೂಪದಲ್ಲಿದೆ. ‘ರೆಡ್ ಡಾಕ್>’ ಮತ್ತು ‘ಫ್ಲೋಟ್’ ಅವರ ಇತರ ಪ್ರಮುಖ ಕೃತಿಗಳು.

​1901ರಿಂದ ಇಲ್ಲಿಯವರೆಗೆ ಒಟ್ಟು 118 ಬಾರಿ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನಿ ಎರ್ನಾಕ್ಸ್, ಬಾಬ್ ಡೈಲನ್, ಅಬ್ದುಲ್ ರಜಾಕ್ ಗುರ್ನಾ, ಲೂಯಿಸ್ ಗ್ಲುಕ್, ಪೀಟರ್ ಹ್ಯಾಂಡ್ಕೆ ಮತ್ತು ಓಲ್ಗಾ ಟೊಕಾರ್ಚುಕ್ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ವರ್ಷ (2025ರಲ್ಲಿ) ಹಂಗೇರಿಯನ್ ಲೇಖಕ ಲಾಸ್ಲೋ ಕ್ರಾಸ್ಜ್ನಾಹೋರ್ಕೈ ಅವರಿಗೆ ಈ ಪುರಸ್ಕಾರ ಒಲಿದಿತ್ತು. ಇದೀಗ 2026ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿರುವ ಆನ್ ಕಾರ್ಸನ್ ಅವರಿಗೆ ಬರುವ ಡಿಸೆಂಬರ್‌ನಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಅಧಿಕೃತ ಸಮಾರಂಭದಲ್ಲಿ ನೊಬೆಲ್ ಪದಕ ಮತ್ತು ಪ್ರಮಾಣಪತ್ರವನ್ನು ಪ್ರದಾನ ಮಾಡಲಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

OBC ವಿದ್ಯಾವಂತ ನಿರುದ್ಯೋಗಿಗಳ ಕುರಿತು ಅಧ್ಯಯನ; ಪ್ರವೀಣ ಪತ್ತಾರಗೆ ಕವಿವಿ ಪಿಎಚ್‌ಡಿ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಮಾಜಶಾಸ್ತ್ರ ವಿಭಾಗದ ಸಂಶೋಧಕರಾದ ಪ್ರವೀಣ ಪತ್ತಾರ ಅವರು...

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ...

ಅಮೆರಿಕದಲ್ಲಿ ಓದಿದರೂ ಭಾರತೀಯರಿಗೆ ಉದ್ಯೋಗ ಅಸಾಧ್ಯ; ಒಪಿಟಿ ಶುಲ್ಕ 60 ಲಕ್ಷ ರೂ. ಏರಿಸಲು ಟ್ರಂಪ್ ಸರ್ಕಾರ ಚಿಂತನೆ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾರೀ...

ಬೀದರ್‌ | ಬೈಕ್ ಅಪಘಾತ: ಇಬ್ಬರು ಯುವಕರು ಸಾವು

ನೆರೆಯ ತೆಲಂಗಾಣದ ಸಂಗಾರೆಡ್ಡಿ ಸಮೀಪ ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ...