ಕೊಡಗು | 78ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ‘ನಶಾ ಮುಕ್ತ ಭಾರತ’ ಅಭಿಯಾನ

Date:

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ 78ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ‘ನಶಾ ಮುಕ್ತ ಭಾರತ’ ಅಭಿಯಾನ 2024ರ ಪ್ರಯುಕ್ತ ಕೊಡಗು ವಿಶ್ವವಿದ್ಯಾಲಯ ಆಯೋಜಿಸಿದ್ದ “ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳು” ಕುರಿತಾಗಿ ಕೊಡಗು ಜಿಲ್ಲೆಯ ಚಿಕ್ಕಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿರುವ ಹಾರಂಗಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ ಸೀನಪ್ಪ ಮಾತನಾಡಿ, “ಸದೃಢ ರಾಷ್ಟ್ರವನ್ನಾಗಿಸುವಲ್ಲಿ ಯುವಶಕ್ತಿಯ ಪಾತ್ರ ಮುಖ್ಯವಾದದ್ದು, ಯುವಶಕ್ತಿ ಇಂದು ಮಾದಕ ವಸ್ತುಗಳ ಚಟಗಳಿಂದ ಹಾಳಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಯುವಜನತೆಯನ್ನು ವ್ಯಸನದಿಂದ ಮುಕ್ತರಾಗಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.‌

“ಯುವಜನತೆ ದೇಶದ ಆಸ್ತಿ, ಇಂತಹ ಯುವಜನತೆ ದಾರಿ ತಪ್ಪದಂತೆ, ಕುಟುಂಬ ಮತ್ತು ಸಮಾಜದ ಮೇಲೆ ಪರಿಣಾಮ ಬೀರದಂತೆ ದುಶ್ಚಟಗಳನ್ನು ಹೋಗಲಾಡಿಸಿ, ಸಾಮಾಜಿಕ ಪಿಡುಗನ್ನು ತೊಲಗಿಸಬೇಕು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಖ್ಯ ಅತಿಥಿ ಆರಕ್ಷಕ ವೃತ್ತ ನಿರೀಕ್ಷಕ ರಾಜೇಶ್ ಕೊಟ್ಯಾನ್ ಮಾತನಾಡಿ, “ಮಾದಕ ವ್ಯಸನ ಸಮಾಜಕ್ಕೆ ಮಾರಕ, ಯುವಜನತೆ ಅಸ್ತಿತ್ವಕ್ಕೆ ಕೊಡಲಿ ಪೆಟ್ಟಿದ್ದಂತೆ. ಸಾಂಘಿಕ ಹೋರಾಟದ ಮೂಲಕ ಮಾದಕ ವ್ಯಸನ ಮುಕ್ತ ಭಾರತಕ್ಕಾಗಿ ಹೋರಾಟ ಮಾಡಬೇಕಿದೆ. ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವುದು ದೊಡ್ಡ ಸವಾಲಿನ ಕೆಲಸ. ಇದು ಕೇವಲ ಇಲಾಖೆಯ ಕೆಲಸವಲ್ಲ ನಾಗರಿಕರ ಜವಾಬ್ದಾರಿಯೂ ಹೌದು. ಎಲ್ಲರೂ ಕೈಜೋಡಿಸಿದರೆ ಯುವಜನತೆ ಹಾದಿ ತಪ್ಪುವುದನ್ನು, ಸಾಮಾಜಿಕ ಗಟ್ಟಿತನವನ್ನು ಉಳಿಸಿಕೊಳ್ಳಬಹುದು” ಎಂದು ಕರೆಕೊಟ್ಟರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಬಿಸಿಎಂ ಹಾಸ್ಟೆಲ್ ಪ್ರವೇಶ ಆಯ್ಕೆಪಟ್ಟಿ ಶೀಘ್ರ ಬಿಡುಗಡೆಗೆ ಎಸ್‌ಎಫ್‌ಐ ಆಗ್ರಹ

ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುದರ್ಶನ್‌ ಕುಮಾರ್, ಡಾ ಜಮೀರ್ ಅಹಮದ್, ಮಂಜುನಾಥ್ ಗೌಡ ಸೇರಿದಂತೆ ವಿವಿಧ ವಿಭಾಗಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸೆ. 15ಕ್ಕೆ ಪ್ರಜಾಪ್ರಭುತ್ವ ದಿನ; ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯ: ಸಂತೋಷ್ ಲಾಡ್

ರಾಜ್ಯ ಸರಕಾರವು ಸೆಪ್ಟೆಂಬರ್ 15 ರಂದು 'ಪ್ರಜಾಪ್ರಭುತ್ವ ದಿನ'ವನ್ನು ವಿಶೇಷವಾಗಿ ಆಚರಿಸಲು...

ರಾಯಚೂರು | ಒಳ ಮೀಸಲಾತಿ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಸೆ.12ರಂದು ರಾಜ್ಯಾದ್ಯಂತ ತಮಟೆ ಚಳವಳಿ

ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ತೀರ್ಪು...

ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 'ಪೂರ್ಣಚಂದ್ರ...