ಕೊಡಗು | ಬೆಂಕಿ ಅವಘಡದಲ್ಲಿ ದಂಪತಿ ಸಾವು; ಅನಾಥವಾದ ಅನಾಥಾಶ್ರಮ

Date:

ಅನಾಥಾಶ್ರಮ ನಡೆಸುತ್ತಿದ್ದ ದಂಪತಿ ಅಡುಗೆ ಅನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟಿದ್ದಾರೆ. ದಂಪತಿ ಸಾವಿನಿಂದ ಅವರ ಮೂವರು ಮಕ್ಕಳು ಮಾತ್ರವಲ್ಲದೆ, ಸುಮಾರು 33 ಮಂದಿ ನಿರ್ಗತಿಕರು ಮತ್ತೆ ಅನಾಥರಾಗಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿಗಳಾದ ರಮೇಶ್ ಮತ್ತು ರೂಪಾ ದಂಪತಿ ಕಳೆದ 15 ವರ್ಷಗಳಿಂದ ಕುಶಾಲನಗರ ತಾಲೂಕಿನ ಗದ್ದೆಹಳ್ಳದಲ್ಲಿ ‘ವಿಕಾಸ್ ಜನಸೇವಾ’ ಅನಾಥಾಶ್ರಮ ನಡೆಸುತ್ತಿದ್ದರು.‌ ಕೊಡಗು ಜಿಲ್ಲೆಯಲ್ಲಿ ಯಾರೇ ಅನಾಥರು ಕಂಡರೂ ಅವರನ್ನ ಕರೆತಂದು ತಮ್ಮ ಅನಾಥಾಶ್ರಮದಲ್ಲಿ ಇರಿಸಿಕೊಂಡು  ಪೋಷಿಸುತ್ತಿದ್ದರು. ಊಟ, ಬಟ್ಟೆ ಸೇರಿದಂತೆ ನಾನಾ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದರು. ಅನಾಥರು ಮೃತಪಟ್ಟಾಗ ತಮ್ಮ ಮನೆಯವರೆಂಬಂತೆ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಮಾಡಿದ್ದರು.

ಆದರೆ, ಅವರ ಮನೆಯಲ್ಲಿ ಸಂಭವಿಸಿದ ಅಡುಗೆ ಅನಿಲ ಸೋರಿಕೆಯ ದುರಂತದಲ್ಲಿ ದಂಪತಿ ಇಹಲೋಕ ತ್ಯಜಿಸಿದ್ದಾರೆ. ಅಕ್ಟೋಬರ್ 4ರಂದು ರೂಪಾ ಅವರು ಅಡುವೆ ಮಾಡಲು ಗ್ಯಾಸ್‌ ಸ್ಟವ್ ಹಚ್ಚಿದ್ದಾರೆ. ಮೊದಲೇ ಅನಿಲ ಸೋರಿಕೆಯಾಗಿದ್ದರಿಂದ ಬೆಂಕಿ ಆವರಿಸಿಕೊಂಡಿದೆ. ರೂಪ ಮತ್ತು ರಮೇಶ್‌ ಅವರಿಗೆ ತೀವ್ರ ಸುಟ್ಟಗಾಯಗಳಾಗಿದ್ದವು. ರಮೇಶ್ ಅವರ ತಂದೆಗೂ ಸುಟ್ಟ ಗಾಯಗಳಾಗಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೂವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರಮೇಶ್ ಅವರು ಅಕ್ಟೋಬರ್ 8ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರೂಪ ಕೂಡ ಅಸುನೀಗಿದ್ದಾರೆ. ಹೀಗಾಗಿ, ಇಡೀ ಅನಾಥಾಶ್ರಮವೇ ಈಗ ಅನಾಥವಾಗಿದೆ. ಅನಾಥಾಶ್ರಮದಲ್ಲಿದ್ದ 33 ಮಂದಿ ಈಗ ಮತ್ತೆ ನಿರ್ಗತಿಕರಾಗುವ ಆತಂಕದಲ್ಲಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.

ಸಧ್ಯ ರಮೇಶ ಅವರ ಕುಟುಂಬಸ್ಥರು ಅನಾಥಾಶ್ರಮವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕಾಂಗ್ರೆಸ್‌ಗೆ ಮಡಿವಾಳ ಸಮಾಜ ಬೆಂಬಲ; ಬೇಡಿಕೆಗಳ ಈಡೇರಿಕೆಗೆ ಆಗ್ರಹ

ರಾಜ್ಯದಲ್ಲಿನ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು, ರಾಜ್ಯದ ಎಲ್ಲ ತಾಲೂಕಿನಲ್ಲಿ...

ಚಿಕ್ಕಮಗಳೂರು | ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಲೆನಾಡಿನ ಸಂರಕ್ಷಣ ವೇದಿಕೆ ಕರೆ

ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಲೆನಾಡಿನ ಸಂರಕ್ಷಣ ವೇದಿಕೆ...

ಚಿಕ್ಕಬಳ್ಳಾಪುರ | ಕೋಮುವಾದದ ಮಾತುಗಳನ್ನಾಡುವ ಪ್ರಧಾನಿ ದೇಶಕ್ಕೆ ಬೇಕೆ?: ಸಚಿವ ಎಂ ಸಿ ಸುಧಾಕರ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು...