ಯುವಜನರಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವುದು, ಸಂವಿಧಾನಿಕ ಮೌಲ್ಯಗಳನ್ನು ಬೆಳೆಸುವುದು ಹಾಗೂ ಸಾಮಾಜಿಕ ವಿಚಾರಗಳ ಕುರಿತು ಯುವಜನರ ಚರ್ಚೆ ಮತ್ತು ಭಾಗವಹಿಸುವಿಕೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಂವಾದ ಯುವ ಸಂಪನ್ಮೂಲ ಕೇಂದ್ರ, ಕೋಲಾರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಜಿಎಫ್ ಇವರ ಸಹಯೋಗದಲ್ಲಿ ‘ಯುವಜನ ಮನ ಸಂಭ್ರಮೋತ್ಸವ–2026’ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಜಿಎಫ್‌ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಜಿಎಫ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು ಯುವ ಜನರು ಭಾಗವಹಿಸಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಯುವಜನರು ಎದುರಿಸುತ್ತಿರುವ ಗೊಂದಲಗಳು, ಒತ್ತಡಗಳು ಹಾಗೂ ದಿನನಿತ್ಯದ ಬದುಕಿನಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯದ ಸವಾಲುಗಳ ಕುರಿತು ಸಂಪನ್ಮೂಲ ವ್ಯಕ್ತಿ ಮತ್ತು ಆಪ್ತ ಸಮಲೋಚಕಿಯಾದ ಫೆಟ್ರಿಷಿಯ ಪ್ರೀತಮ್ ಮಾತನಾಡಿದರು. ವೈಯಕ್ತಿಕ ಬೆಳವಣಿಗೆಯ ಜೊತೆಗೆ ಯುವಜನರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಯುವಜನರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಅರಿವು ಹೊಂದುವುದರ ಜೊತೆಗೆ, ಸಂವಿಧಾನಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಬದಲಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ಅರಿವುವನ್ನು ಸಂವಾದ ಸಂಸ್ಥೆ ನೀಡಿತ್ತು. ಯುವಜನರ ಧ್ವನಿಗೆ ವೇದಿಕೆ, ಅವರ ಆಲೋಚನೆಗಳಿಗೆ ಅವಕಾಶ’ ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮವು ಯುವಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಾಗೂ ಸಾಮಾಜಿಕ ವಿಚಾರಗಳ ಕುರಿತು ಚರ್ಚಿಸಲು ಸಂವಾದ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಸಂವಾದ ಸಂಸ್ಥೆಯೊಂದಿಗಿನ ತಾವು ಕಲಿತ ವಿಷಯಗಳ ಕುರಿತು ಯುವ ಮುಂದಾಳುಗಳಾದ ಸತ್ಯಪ್ರಿಯ, ಅಂಕಿತ ಸೌಂದರ್ಯ ಹಾಗೂ ಗಗನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದನ್ನು ಓದಿದ್ದೀರಾ..?ಚಿಂತಾಮಣಿಯಲ್ಲಿ ತಡರಾತ್ರಿ ಭಾರಿ ಗಾಳಿ-ಮಳೆಗೆ ಧರೆಗುರುಳಿದ ಶತಮಾನದ ಆಲದ ಮರ: ತಪ್ಪಿದ ಭಾರಿ ಅನಾಹುತ!
ಕಾರ್ಯಕ್ರಮದಲ್ಲಿ ಪ್ರೊ. ಅರಿವು ಶಿವಪ್ಪ, ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಪಂಡಿತ್ ಮುನಿವೆಂಕಟಪ್ಪ, ಟಿ. ವಿಜಯ್ ಕುಮಾರ್, ವೆಂಕಟಚಲಪತಿ ಸಂವಾದ ಸಂಸ್ಥೆಯ ಮುರುಳಿ ಮೋಹನ್ ಕಾಟಿ, ಇಳಾಂಗೋ ಸ್ಟಾನಿಸ್ಲಸ್ ಕೋಲಾರ ಯುವ ಸಂಪನ್ಮೂಲ ಕ್ರೇಂದ್ರದ ಸಂಯೋಜಕರು ಮತ್ತು ಆಯೋಜಕರಾದ ಕಿರಣ್ ಕುಮಾರ್ ಎನ್. ಕಾಲೇಜಿನ ಪ್ರಾಂಶುಪಾಲರಾದ ಕೆ.ನಾರಾಯಣ್, ಶ್ರೀನಿವಾಸ್ ಮೂರ್ತಿ ಎಂ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಜನರು ಸೇರಿದಂತೆ ಸುಮಾರು ಮಂದಿ ಭಾಗವಹಿಸಿದ್ದರು.




