ಕೋಲಾರ | ವೆಲಾಂಗಣಿ ಚರ್ಚ್ ದರ್ಶನಕ್ಕೆ ಟಿ.ಎಸ್. ಸುಧೀರ್ ಅವರಿಂದ ಉಚಿತ ಬಸ್ ವ್ಯವಸ್ಥೆ

Date:

ತಮಿಳುನಾಡಿನ ಪ್ರಸಿದ್ಧ ವೆಲಾಂಗಣಿ ಚರ್ಚ್‌ಗೆ ತೆರಳಿ ದರ್ಶನ ಪಡೆಯಲು ಕ್ರೈಸ್ತ ಸಮುದಾಯದ ಬಂಧುಗಳಿಗೆ ಜಿಲ್ಲಾ ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾಧ್ಯಕ್ಷ ಹಾಗೂ ಕ್ರೈಸ್ತ ಸಮಾಜದ ಮುಖಂಡ ಟಿ.ಎಸ್. ಸುಧೀರ್ ಅವರು ಸುಮಾರು 50 ಮಂದಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಊಟ, ರಾತ್ರಿ ಊಟ ಹಾಗೂ ಬೆಳಗಿನ ಉಪಾಹಾರದ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.


ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

- Advertisement -

ಈ ಕುರಿತು ಮಾತನಾಡಿದ ಸುಧೀರ್ ಕಳೆದ15 ದಿನಗಳ ಹಿಂದೆ ಕೋಲಾರದಿಂದ ವೆಲಾಂಗಣಿ ಉಚಿತ ಪ್ರವಾಸದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಕ್ಕೆ ಕೋಲಾರ ಮಾತ್ರವಲ್ಲದೆ ಬೆಂಗಳೂರು, ಮುಳಬಾಗಿಲು, ಬಂಗಾರಪೇಟೆ, ನರಸಾಪುರ ಸೇರಿದಂತೆ ವಿವಿಧ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪವಿತ್ರ ಸ್ಥಳಗಳ ದರ್ಶನ ಪಡೆಯಲು ಆರ್ಥಿಕವಾಗಿ ಹಾಗೂ ಇತರೆ ಕಾರಣಗಳಿಂದ ಸಾಧ್ಯವಾಗದವರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಮುಂದಿನ ಡಿಸೆಂಬರ್ 15ರಂದು ಮತ್ತೊಂದು ಪ್ರವಾಸ ಆಯೋಜಿಸುವ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಕ್ಷಾತೀತವಾಗಿ 73ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ ಯಶಸ್ವಿಗೊಳಿಸಿ: ಸಚಿವ ಎನ್. ಚಲುವರಾಯಸ್ವಾಮಿ ಕರೆ

"ನಾನು ಕ್ರೀಡಾಭಿಮಾನಿಯೇ ಹೊರತು ಕ್ರೀಡಾಪಟುವಲ್ಲ. ಆದರೆ, ನಮ್ಮ ಜಿಲ್ಲೆಯ ಕೀರ್ತಿಗಾಗಿ ಸಹಕಾರ...

ಉತ್ತರ ಕನ್ನಡ | ಜಿ.ಪಂ, ತಾ.ಪಂ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು 12 ತಾಲೂಕುಗಳ ಪಂಚಾಯಿತಿ...

ದಕ್ಷಿಣ ಕನ್ನಡ | ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ: ವಿಜಯೇಂದ್ರಗೆ ಯು.ಟಿ. ಖಾದರ್ ತಿರುಗೇಟು

ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತಾರೆ. ಅವರಿಗೆ ಪ್ರೋತ್ಸಾಹಧನ ಹೆಚ್ಚಿಸುವಂತೆ...