ಕೊಪ್ಪಳ | ಭೂಗಳ್ಳರ ವಿರುದ್ಧ ಆಮ್ ಆದ್ಮಿ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ಆಕ್ರೋಶ

Date:

  • ಆಮ್‌ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ
  • ಬೆಳ್ಳಂಬೆಳ್ಳಿಗೆ ಮತ ಬೇಟೆ ಆರಂಭಿಸಿದ ಆಮ್ ಆದ್ಮಿ ಅಭ್ಯರ್ಥಿ

ಗಂಗಾವತಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ಅವರು ಗಂಗಾವತಿಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ವಾಯು ವಿಹಾರಕ್ಕೆ ಬಂದಿದ್ದ ನೂರಾರು ಸಾರ್ವಜನಿಕರನ್ನು ಭೇಟಿಮಾಡಿ, ಮತಯಾಚನೆ ಮಾಡಿದರು.

ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, “ಗಂಗಾವತಿ ನಗರದಲ್ಲಿ 150ಕ್ಕೂ ಹೆಚ್ಚು ಪಾರ್ಕ್‌ಗಳಿದ್ದು, ಅದರಲ್ಲಿ 113 ಪಾರ್ಕ್‌ಗಳು ವಾಯು ವಿಹಾರಕ್ಕೆ ಯೋಗ್ಯವಾಗಿವೆ. ಆದರೆ, ಹಲವು ಪಾರ್ಕ್‌ಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಚಾಕು ಹಿಡಿದು ಹಾಡಹಗಲೇ ಬೆದರಿಕೆ ಹಾಕಿದ ಟಾಟಾ ಏಸ್‌ ಚಾಲಕ!

ಈ ಭೂಗಳ್ಳರ ಹಾವಳಿಯಿಂದ ವಾಯು ವಿಹಾರಕ್ಕೆ ಬರುವವರಿಗೆ ಗಂಗಾವತಿ ನಗರದ ಜೂನಿಯರ್ ಕಾಲೇಜ್ ಮೈದಾನ ಒಂದೇ ಆಧಾರವಾಗಿದೆ. ಆದ್ದರಿಂದ ಪೊರಕೆ ಗುರುತಿಗೆ ಮತ ಹಾಕುವ ಮೂಲಕ ನನ್ನನ್ನು ಬೆಂಬಲಿಸಿದರೆ, ವಾಯುವಿಹಾರದ ಜಾಗಗಳನ್ನು ತೆರವುಗೊಳಿಸಿ ಜನರ ಉಪಯೋಗಕ್ಕೆ ಬರುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಅಲ್ಲಿದ್ದ ಕೆಲವರು ಇದಕ್ಕೆ ಪ್ರತಿಕ್ರಿಯಿಸಿ, “ಸಾಮಾನ್ಯರು ರಾಜಕೀಯಕ್ಕೆ ಬಂದು ಅಧಿಕಾರ ಹಿಡಿದಾಗ ಮಾತ್ರ ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸಲು ಸಾಧ್ಯ ಆಗುತ್ತದೆ. ಅದು ನಿಮ್ಮಂತ ಯುವಕರಿಂದ ಮಾತ್ರ ಸಾಧ್ಯ “ಎಂದು ತಿಳಿಸಿ ಶುಭ ಕೋರಿದರು.

ಈ ವೇಳೆ ಮುಖಂಡ ವೆಂಕಟೇಶ್, ಮನೀಶ್, ಶಿವರಾಜ್ ದೊಡ್ಡಬಸಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಮತ್ತಿಬ್ಬರ ಬಂಧನ

20 ದಿನದ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು...

ಶಿವಮೊಗ್ಗ | ಸಿಡಿಲು ಬಡಿದು ಸಹೋದರರ ಸಾವು

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಹೋದರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ...

ಉತ್ತರ ಕನ್ನಡ | ಅವೈಜ್ಞಾನಿಕ ಮೀನುಗಾರಿಕೆ; ಸಮುದ್ರದಲ್ಲಿ ಮೀನು ಕ್ಷಾಮ

ಬರ ಕೇವಲ ರೈತರನ್ನು ಕಾಡುತ್ತಿಲ್ಲ, ಸಮುದ್ರ ಮೀನುಗಾರಿಕೆಗೂ ಈ ಬಾರಿ ಬರ...

‘ಬುಡಕಟ್ಟು ಸಂಶೋಧನಾ ಸಂಸ್ಥೆ’ಯ ನಿರ್ದೇಶಕನ ಬಿಡುಗಡೆ ಒತ್ತಾಯ

ʼಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆʼಯನ್ನು ಅಮಾಯಕ ಆದಿವಾಸಿಗಳಿಗಾಗಿ ಉಳಿಸಬೇಕು. ಆದರೆ,...