ಚಿಕ್ಕಮಗಳೂರು | ಜನರ ನೋವಿಗೆ ಮಾಧ್ಯಮ ದನಿಯಾಗಲಿ : ಭರತ್‌ ಹೆಬ್ಬಾಳ

Date:

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ರುದ್ರಮುನಿಶ್ವರ ಕಲ್ಯಾಣ ಮಂಟಪದಲ್ಲಿ ಈದಿನ.ಕಾಮ್ʼ ಮಾಧ್ಯಮ ಸಂಸ್ಥೆಯು ಎರಡು ವರ್ಷ ಪೂರೈಸಿದ ಹಿನ್ನಲೆ ಆಯೋಜಿಸಿದ್ದ ʼಈದಿನ ಸಮಾಗಮ ಹಾಗೂ ಮಲೆನಾಡಿನ ಬಿಕ್ಕಟ್ಟುಗಳುʼ ಕುರಿತು ವಿಶೇಷ ʼಸಮಾಗಮʼ ಕಾರ್ಯಕ್ರಮ ಜರುಗಿತು.

- Advertisement -

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ʼಈದಿನ.ಕಾಮ್ʼ ಮಾಧ್ಯಮದ ಸಂಪನ್ಮೂಲ ವ್ಯಕ್ತಿ ಭರತ್ ಹೆಬ್ಬಾಳ ಮಾತನಾಡಿ, ʼಸಮಾಜದಲ್ಲಿ ನೊಂದ, ನಿರ್ಗತಿಕ, ದೀನ ದಲಿತರ ಸಮಸ್ಯೆಗಳಿಗೆ ಮುಕ್ತಿಗೊಳಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಮಾಜಮುಖಿ ಪತ್ರಿಕೋದ್ಯಮ ನಡೆಸಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ಕಳೆದ ಚುನಾವಣೆಗಳಲ್ಲಿ ಕರಾರುವಕ್ಕಾಗಿ ಸಮೀಕ್ಷೆ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದೇವೆ ಎಂದರು. ಈದಿನ ಮಾಧ್ಯಮದ ಮುಂದಿನ ಕಾರ್ಯಗಳೇನು ಹಾಗೂ ಜನರಭಾಗಿತ್ವ ನಮ್ಮೊಂದಿಗೆ ಹೇಗಿರಬೇಕುʼ ಎಂದು ಮಾಹಿತಿ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ಈದಿನ ಕೇಂದ್ರೀಯ ಸಂಯೋಜಕ ಸಂತೋಷ್ ಎಚ್.ಎಂ ಮಾತನಾಡಿ, ʼಈದಿನʼ ಮಾಧ್ಯಮ ಎಂಬುದು ನಾಗರಿಕ ಪತ್ರಕರ್ತರನ್ನು ಹುಟ್ಟು ಹಾಕುವ ಮೂಲಕ ಜನರ ಕುಂದು ಕೊರತೆಗಳಿಗೆ ಜನರೇ ಸುದ್ದಿ ಬರೆಯುವಂತೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವ ವಿಶಿಷ್ಟ ಮಾಧ್ಯಮವಾಗಿದೆ. ಈದಿನ ಮಾಧ್ಯಮ ಮತ್ತಷ್ಟು ಗಟ್ಟಿಗೊಳಿಸಲು ಈ ಭಾಗದಲ್ಲಿ ಹೆಚ್ಚಿನ ನಾಗರಿಕ ಪತ್ರಕರ್ತರ ಅಗತ್ಯವಿದೆ. ಇದು ಒಂದು ಸಂಸ್ಥೆಯಲ್ಲದೇ ಜನರೇ ರೂಪಿಸಿಕೊಂಡ ಮಾಧ್ಯಮವಾಗಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯವಾಗಿದೆʼ ಎಂದು ಹೇಳಿದರು.

WhatsApp Image 2024 10 01 at 3.08.10 PM
ಸಮಾಗಮದಲ್ಲಿ ವಿವಿಧ ತಾಲೂಕಿನ 60ಕ್ಕೂ ಹೆಚ್ಚಿನ ʼಈದಿನʼ ನಾಗರಿಕ ಪತ್ರಕರ್ತರು ಪಾಲ್ಗೊಂಡಿದ್ದರು.

ಮಲೆನಾಡಿನ ಬಿಕ್ಕಟ್ಟುಗಳು ಹಾಗೂ ಸಮಸ್ಯೆಗಳಿಗೆ ಮಾಧ್ಯಮ ಸ್ಪಂದಿಸಬೇಕು ಕುರಿತು ಪರಿಸರವಾದಿ
ಡಾ.ಕಲ್ಕುಳಿ ವಿಠಲ ಹೆಗ್ಡೆ ಅವರು ವಿಸ್ತ್ರತವಾಗಿ ವಿವರಿಸಿದರು. ಮಲೆನಾಡಿನ ಪ್ರತಿ ತಾಲೂಕು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳ ಗಮನಕ್ಕೆ ಬರುವಂತೆ ಪ್ರಕಟಿಸಬೇಕು ಎಂದು ತಿಳಿಸಿದರು.

ಈದಿನ ಚಿಕ್ಕಮಗಳೂರು ಜಿಲ್ಲಾ ಸಂಯೋಜಕಿ ಗಿರಿಜಾ ಎಸ್.ಜಿ ಪ್ರಾಸ್ತಾವಿಕವಾಗಿ ಮಾತಾಡಿದರು. ಸಮಾಗಮದಲ್ಲಿ ಭಾಗವಹಿಸಿದ ಈದಿನ ಮಾಧ್ಯಮ ಓದುಗರು ತಮ್ಮ ಅಭಿಪ್ರಾಯ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅತ್ಯಾಚಾರ : 17 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾರ್ಯಕ್ರಮದಲ್ಲಿ ಲೇಖಕ ಗುರುಮೂರ್ತಿ ಜೋಗಿಬೈಲು, ರೈತ ಸಂಘಟನೆ ಹಿರಿಯ ಮುಖಂಡ ಸುರೇಶ್ ಭಟ್ರು , ಹಿರಿಯ ಪತ್ರಕರ್ತ ಯಜ್ಞಾಪುರುಷ ಭಟ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎಂಟು ತಾಲ್ಲೂಕಿನ ಪತ್ರಕರ್ತರು, ಬರಹಗಾರರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಭಾಗವಹಿಸಿದ್ದರು. ಈದಿನ ಜೋನಲ್‌ ಸಂಯೋಜಕ ಮುಹಮ್ಮದ್ ಶಾರೂಖ್ ನಿರೂಪಿಸಿ, ಸ್ವಾಗತಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸಮಾಜದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ ಪಾತ್ರ ಮಹತ್ವದ್ದು: ರಾಕೇಶ್ ಗೋಪಾಲ್ ಜೋಶಿ

ಸಮಾಜದ ಅಭಿವೃದ್ಧಿ, ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು...

ಉಳ್ಳಾಲ | ಅಪಘಾತ: ಮಗನ ಸಾವಿನ ದುಃಖದಲ್ಲೂ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ವರ್ಷಿತ್ ಕುಟುಂಬ

ಉಳ್ಳಾಲ ತಾಲೂಕಿನ ಕುತ್ತಾರು ಕೊರಗಜ್ಜ ಕಟ್ಟೆಯ ಬಳಿ ಸೋಮವಾರ ರಾತ್ರಿ ದ್ವಿಚಕ್ರ...

ಕಲಬುರಗಿ | ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಪೊಲೀಸ್ ಪೇದೆ

ಖಾಕಿ ಧರಿಸಿ ರಕ್ಷಣೆ ಮಾಡಬೇಕಾದವರೇ ಅಪರಾಧ ಕೃತ್ಯಕ್ಕೆ ಇಳಿದಿರುವ ಘಟನೆ...

ಉಡುಪಿ | ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ : ಸಚಿವ ಬಸವಂತಪ್ಪ

ಸರ್ವಋತು ಮಲ್ಪೆ ಮೀನುಗಾರಿಕಾ ಬಂದರಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಆಧುನೀಕರಣಕ್ಕೆ ಮೊದಲ...