ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ದೊಡ್ಡಕೊತ್ತಗೆರೆ ಕಾಲುವೆಯಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರಿನ ನೀಲಸಂದ್ರದ ಹನಿಸಾ ಬೇಗಂ (34), ಮಹತಾಬ್ (10), ತಸ್ಸ್ಮೀಯಾ (22), ಹತೀಕಾ ಮತ್ತು ಅರ್ಷಕ್ ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಇದ್ದ ಕಾರಣ, ಅವರೆಲ್ಲರೂ ದೊಡ್ಡಕೊತ್ತಗೆರೆಯಲ್ಲಿದ್ದ ತಮ್ಮ ಸಂಬಂಧಿಗಳ ಮನೆಗೆ ಬಂದಿದ್ದರು. ಬಿಸಿಲಿದ್ದ ಕಾರಣ, ಈಜಲು ಕಾಲುವೆಗೆ ತೆರಳಿದ್ದರು. ಈ ವೇಳೆ, ಐವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮೂವರ ಮೃತ ದೇಹವನ್ನು ಹೊರ ತೆಗೆದಿದೆ. ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.