ಮದ್ದೂರು | ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯಿಂದ ಕಾಯಿದೆ ಉಲ್ಲಂಘನೆ: ಅಧಿಕಾರಿಗಳ ಮೌನ

Date:

ಮದ್ದೂರು ನಗರದಲ್ಲಿರುವ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್(Sri Venkateshwara Indane Gas) ಏಜೆನ್ಸಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಎಲ್‌ಪಿಜಿ(LPG) ವಿತರಣೆ ಮಾಡುವ ಈ ಸಂಸ್ಥೆಯಲ್ಲಿ ಒಟ್ಟು 13 ಮಂದಿ(10 ಪುರುಷರು ಮತ್ತು 3 ಮಹಿಳೆಯರು) ದುಡಿಯುತ್ತಿದ್ದಾರೆ. ಆದರೆ, ಇವರ ಬದುಕಿಗೆ ಕನಿಷ್ಠ ಭದ್ರತೆಯೂ ಇಲ್ಲದಂತಾಗಿದೆ.

- Advertisement -

ಕಾರ್ಮಿಕ ನಿರೀಕ್ಷಕರು ಸಂಸ್ಥೆಗೆ ಭೇಟಿ ನೀಡಿ ಹೋಗಿ ತಪಾಸಣೆ ನಡೆಸಿದ್ದರು. ಇಲ್ಲಿ ಅಗೆದಷ್ಟು ಆಳಕ್ಕೆ ಕಾಯಿದೆಯ ಉಲ್ಲಘನೆ ನಡೆದಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ, ಕನಿಷ್ಠ ವೇತನ ಕಾಯ್ದೆ ಸೇರಿದಂತೆ ಪ್ರಮುಖ 5 ಕಾಯ್ದೆಗಳ ಅಡಿಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ತಪಾಸಣೆಯ ವೇಳೆ ಹಲವಾರು ಗಂಭೀರ ಲೋಪಗಳು ಕಂಡುಬಂದಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಪತ್ತೆಯಾದ ಪ್ರಮುಖ ಕಾನೂನು ಬಾಹಿರ ಅಂಶಗಳು

ದಾಖಲೆಗಳಿಲ್ಲದ ದುಡಿಮೆ, ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೇಮಕಾತಿ ಆದೇಶವನ್ನೇ(Appointment Order – ನಮೂನೆ 2) ನೀಡಿಲ್ಲ. ಅಂದರೆ, ಕಾನೂನಿನ ದೃಷ್ಟಿಯಲ್ಲಿ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ದಾಖಲೆಯೇ ಇಲ್ಲ.

ಗ್ಯಾಸ್‌ ಏಜೆನ್ಸಿ

ನೋಂದಣಿ ನವೀಕರಣವಿಲ್ಲ, ಸಂಸ್ಥೆಯು ತನ್ನ ಅಧಿಕೃತ ನೋಂದಣಿಯನ್ನು 2024ರ ನಂತರ ನವೀಕರಿಸಿಲ್ಲ(Not Renewed). ಸರ್ಕಾರಿ ನಿಯಮಗಳ ಪ್ರಕಾರ ಇದೊಂದು ಗಂಭೀರ ಲೋಪ‌, ವೇತನದಲ್ಲಿ ಪಾರದರ್ಶಕತೆ ಇಲ್ಲ, ನೌಕರರಿಗೆ ಸಂಬಳ ನೀಡಿದ ಬಗ್ಗೆ ‘ವೇತನ ಚೀಟಿ’ (Wage Slip) ಕೊಡುತ್ತಿಲ್ಲ, ಸಂಬಳದ ಲೆಕ್ಕ ಬರೆಯುವ ರಿಜಿಸ್ಟರ್(Wage Register) ಮತ್ತು ಹಾಜರಾತಿ ಪುಸ್ತಕವನ್ನೂ ನಿರ್ವಹಿಸುತ್ತಿಲ್ಲ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆಯೇ ಎಂಬುದನ್ನು ತಿಳಿಸುವ ದಾಖಲೆಗಳೂ(ನಮೂನೆ ಡಿ) ಇಲ್ಲ.

ರಜೆ ಮತ್ತು ಸವಲತ್ತುಗಳ ನಿರಾಕರಣೆ, ವೇತನ ಸಹಿತ ರಜೆ(Earned Leave) ರಿಜಿಸ್ಟರ್ ಇಲ್ಲ. ಹಾಗೆಯೇ, ದೀರ್ಘಕಾಲದ ಸೇವೆಗೆ ಸಿಗಬೇಕಾದ ಉಪಧನ(Gratuity) ಸೌಲಭ್ಯಕ್ಕಾಗಿ ನೌಕರರಿಂದ ನಾಮನಿರ್ದೇಶನವನ್ನೂ(Nomination) ಮಾಡಿಸಿಲ್ಲ.

ಮಾಹಿತಿ ಮರೆಮಾಚುವಿಕೆ, ಸಂಸ್ಥೆಯು 2023ನೇ ಸಾಲಿನ ವಾರ್ಷಿಕ ವರದಿಯನ್ನೇ(Annual Report) ಸರ್ಕಾರಕ್ಕೆ ಸಲ್ಲಿಸಿಲ್ಲ.

ಅಧಿಕಾರಿಗಳ ನಡೆ ಅನುಮಾನಾಸ್ಪದ!

ಲೋಪಗಳನ್ನು ಸರಿಪಡಿಸಿಕೊಂಡು 5 ದಿನಗಳ ಒಳಗಾಗಿ ವರದಿ ನೀಡುವಂತೆ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದರು. ಆದರೆ ಏಜೆನ್ಸಿಯವರು ಇಲ್ಲಿಯವರೆಗೂ ತಪ್ಪು ಸರಿಪಡಿಸಿದ ವರದಿ(ಅನುಪಾಲನ ವರದಿ) ಸಲ್ಲಿಸಿಲ್ಲ. ಇತ್ತ ಅಧಿಕಾರಿಗಳು, ಆದೇಶ ಪಾಲಿಸದ ಏಜೆನ್ಸಿಯ ವಿರುದ್ಧ ಯಾವುದೇ ಕಾನೂನು ಕ್ರಮವನ್ನೂ ಜರುಗಿಸಿಲ್ಲ.

ಈ ಸುದ್ದಿ ಓದಿದ್ದೀರಾ? ನಗರಸಭೆಗೆ ಗೆಜ್ಜಲಗೆರೆ ಸೇರ್ಪಡೆ ಸ್ವಾಭಾವಿಕ ಪ್ರಕ್ರಿಯೆ; ಶಾಸಕರ ಮೇಲಿನ ರಿಯಲ್ ಎಸ್ಟೇಟ್ ಆರೋಪ ನಿರಾಧಾರ: ಎಚ್ ಎಲ್ ಸತೀಶ್

13 ಜನ ಕನ್ನಡಿಗ ನೌಕರರ ಹಿತ ಕಾಪಾಡಬೇಕಾದ ಕಾರ್ಮಿಕ ಇಲಾಖೆ, ಏಜೆನ್ಸಿಯ ಪ್ರಭಾವಕ್ಕೆ ಮಣಿದು ಸುಮ್ಮನಿದೆಯೇ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ, ಉತ್ತರಿಸುವವರಾರು?

ವರದಿ : ಜಗದೀಶ್‌ ನಗರಕೆರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯದ ನ್ಯೂ ತಮಿಳು ಕಾಲೊನಿಯಲ್ಲಿ ‘SIR’ ಗೊಂದಲ: 207 ಮತದಾರರು ಎಲ್ಲಿ ಹೋದರು?

ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ...

ಬರದ ನೆರಳಲ್ಲಿ 101 ತಾಲ್ಲೂಕುಗಳು; ಮೈಸೂರು-ಚಾಮರಾಜನಗರ-ಮಂಡ್ಯದಲ್ಲಿ ರೈತರ ಬದುಕಿಗೆ ಕಠಿಣ ಸವಾಲು

ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ...

ಶ್ರೀರಂಗಪಟ್ಟಣ | ಇದು ಸ್ಟಾರ್ ಪವರ್ ಪಕ್ಷವಲ್ಲ, ಸಮ ಸಮಾಜದ ಪಕ್ಷ: ಚೇತನ್ ಅಹಿಂಸಾ

ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ...

ಮಳೆಯೂ ಇಲ್ಲ, ಬೆಳೆಯೂ ಇಲ್ಲ; ಕಾವೇರಿ ಹರಿದಿದ್ದು ತಮಿಳುನಾಡಿನತ್ತ-ರೈತನ ಬದುಕಿನ ಮುಂದಿನ ದಾರಿ ಏನು?

ಮಳೆ ಕೈಕೊಟ್ಟಿದೆ. ಹೊಲದಲ್ಲಿ ಬೆಳೆ ಕಾಣುತ್ತಿಲ್ಲ. ಕೆರೆ-ಕಟ್ಟೆಗಳು ತುಂಬಿಲ್ಲ. ಜಾನುವಾರುಗಳಿಗೆ ಮೇವು...