ಯುವಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಜಾಗೃತ ಕರ್ನಾಟಕದಿಂದ ನ. 17ರಂದು ರಾಜ್ಯಮಟ್ಟದ ಭಾಷಣ ಸ್ಪರ್ಧೆ

Date:

ಯುವಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ, ಸಂವಿಧಾನದ ಮೌಲ್ಯಗಳು ಹಾಗೂ ಜನಪರ ಚಿಂತನೆಗಳನ್ನು ಬೆಳೆಸುವ ಉದ್ದೇಶದಿಂದ ಜಾಗೃತ ಕರ್ನಾಟಕ ಸಂಘಟನೆಯ ವತಿಯಿಂದ ನವೆಂಬರ್ 17ರಂದು ಮಂಡ್ಯದಲ್ಲಿ ರಾಜ್ಯಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

- Advertisement -

ರಾಜಕೀಯವೆಂದರೆ ಕೇವಲ ಅಧಿಕಾರ ಪಡೆಯುವ ಮಾರ್ಗವಲ್ಲ; ಅದು ಸಮಾಜದಲ್ಲಿ ಬದಲಾವಣೆ ತರುವ ಶಕ್ತಿಶಾಲಿ ಅಸ್ತ್ರವಾಗಿದೆ. ಒಳ್ಳೆಯ ಆಲೋಚನೆಗಳು, ಪ್ರಾಮಾಣಿಕತೆ ಮತ್ತು ಸಾಮಾಜಿಕ ಬದ್ಧತೆಯುಳ್ಳ ಯುವಜನರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಮಾತ್ರ ಸಮಾಜದಲ್ಲಿ ನೈಜ ಬದಲಾವಣೆ ಸಾಧ್ಯ ಎಂಬ ಆಶಯದೊಂದಿಗೆ ವಿದ್ಯಾರ್ಥಿ ಹಾಗೂ ಯುವಜನರನ್ನು ಪ್ರೇರೇಪಿಸುವ ಉದ್ದೇಶವನ್ನು ಸಂಘಟನೆ ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ,...

ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಮೆಕ್ಕೆಜೋಳದ ಬೆಲೆ ಏರಿಕೆ ಪ್ರಮುಖ ಚರ್ಚೆಯ ವಿಷಯವಾಗಿದೆ. ಮುಂಗಾರು ಮಳೆ ಕೈಕೊಟ್ಟು, ಬಿತ್ತನೆ ಪ್ರದೇಶ ಕುಸಿದು, ಬೆಳೆದ ಬೆಳೆಯೂ ಒಣಹವೆಯಿಂದ ಹಾನಿಗೊಳಗಾದ ಪರಿಣಾಮ ಮೆಕ್ಕೆಜೋಳದ ಉತ್ಪಾದನೆ...

ಯುಪಿ ಚುನಾವಣೆ | ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ಎಸ್‌ಪಿ...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇವೆ. ಆ ರಾಜ್ಯದ ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಮಾಜಿ ಮುಖ್ಯಮಂತ್ರಿ...

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

‘ರಾಜಕೀಯವು ಬದಲಾವಣೆಯ ದೊಡ್ಡ ಅಸ್ತ್ರ: ಒಳ್ಳೆಯ ಜನರು ರಾಜಕೀಯಕ್ಕೆ ಬಂದು ಬದಲಾವಣೆ ತರಬೇಕು’ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ನಡೆಯಲಿದೆ. 18ರಿಂದ 30 ವರ್ಷದೊಳಗಿನ ಯುವಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿಯೊಬ್ಬ ಸ್ಪರ್ಧಿಗೂ ಭಾಷಣ ಮಾಡಲು 8 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, ಭಾಗವಹಿಸುವ ಎಲ್ಲರಿಗೂ ಪ್ರಶಸ್ತಿಪತ್ರ ವಿತರಿಸಲಾಗುತ್ತದೆ.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 5,000 ರೂ., ದ್ವಿತೀಯ ಬಹುಮಾನವಾಗಿ 3,000 ರೂ. ಹಾಗೂ ತೃತೀಯ ಬಹುಮಾನವಾಗಿ 2,000 ರೂ. ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೆ, ಮೂವರು ಸ್ಪರ್ಧಿಗಳಿಗೆ ತಲಾ 1,000 ರೂ.ಗಳ ಸಮಾಧಾನಕರ ಬಹುಮಾನವನ್ನೂ ಘೋಷಿಸಲಾಗಿದೆ.

ಈ ವಿಶೇಷ ವರದಿ ಓದಿದ್ದೀರಾ? ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ, ರಾಜ್ಯದ ಕೃಷಿ-ಮಾರುಕಟ್ಟೆ ಚಿತ್ರಣವೇನು?

ನವೆಂಬರ್ 17, ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸ್ಪರ್ಧಿಗಳು ಹಾಜರಿರಬೇಕು. ಭಾಗವಹಿಸಲು ಆಯೋಜಕರು ಒದಗಿಸಿರುವ ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು.

ಈ ವಿಶೇಷ ಲೇಖನ ಓದಿದ್ದೀರಾ? ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ, ವಿವೇಕದ ಕಾವಲು ಕಳಚಿದಾಗ…

ಹೆಚ್ಚಿನ ಮಾಹಿತಿಗಾಗಿ 9844474816 ಅಥವಾ 8951859376 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜಾಗೃತ ಕರ್ನಾಟಕ ಸಂಘಟನೆ ತಿಳಿಸಿದೆ.

ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್ ಮಾರುಕಟ್ಟೆಯ ಕರಾಮತ್ತು!

ಯುವಜನರು ರಾಜಕೀಯವನ್ನು ಕೇವಲ ಟೀಕಿಸುವುದಕ್ಕೆ ಸೀಮಿತಗೊಳಿಸದೆ, ಅದರ ಭಾಗವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದಲ್ಲಿ ಸಮಾಜ ಪರಿವರ್ತನೆಗೆ ಮುಂದಾಗಬೇಕು ಎಂಬ ಸಂದೇಶವನ್ನು ಈ ಸ್ಪರ್ಧೆಯ ಮೂಲಕ ಸಾರಲು ಸಂಘಟನೆ ಮುಂದಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಜನಪ್ರತಿನಿಧಿಗಳು 6 ತಿಂಗಳು ವೇತನ, ಸೌಲಭ್ಯ ತ್ಯಜಿಸಿ ಬರ ನಿರ್ವಹಣೆಗೆ ಸಹಕರಿಸಲಿ

ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ರೈತರು ಮತ್ತು ಕೂಲಿಕಾರ್ಮಿಕರ...

ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಹಾಯಧನ

ಪ್ರಸಕ್ತ 2026-27ನೇ ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ...

ಕೊಪ್ಪಳ | ಸಂಚಾರ ನಿಯಮಗಳ ಉಲ್ಲಂಘನೆ: ಪೊಲೀಸರಿಂದ 1229 ಪ್ರಕರಣಗಳು ದಾಖಲು

ವಾಹನಗಳ ಸಂಚಾರದ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿರುವ ಪೊಲೀಸರು...

ಕಲಬುರಗಿ | ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ

ಸಾಲದ ಭಾರ ಮತ್ತು ಕೃಷಿ ಸಂಕಷ್ಟದಿಂದ ಕಂಗೆಟ್ಟ ಕನಕಪುರ ಗ್ರಾಮದ ರೈತ...