ಶ್ರೀರಂಗಪಟ್ಟಣ | ಪ್ರೀತಿ-ಸ್ನೇಹವೇ ನಿಜವಾದ ದೇವರು: ಸಾಹಿತಿ ಪ್ರೊ. ತುಕಾರಾಂ

Date:

ನಾಡಗೀತೆಯಲ್ಲಿರುವ ‘ಜೈ ಭಾರತ ಜನನಿಯ ತನುಜಾತೆ, ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ, ಬೌದ್ಧ. ಪಾರ್ಸಿʼ ಎಂಬ ಸಾಲಿನಂತೆ ನಾವೆಲ್ಲರೂ ಈ ಶಾಂತಿಯ ತೋಟದ ಹೂವುಗಳು. ಈ ತತ್ವವನ್ನು ನಾವು ನಮ್ಮ ಬದುಕಿನಲ್ಲಿ ನೆರಳಿನಂತೆ ಹಿಂಬಾಲಿಸಬೇಕು. ಪ್ರೀತಿ-ಸ್ನೇಹವೇ ನಿಜವಾದ ದೇವರು ಎಂದು ಖ್ಯಾತ ಸಾಹಿತಿ ಪ್ರೊ. ತುಕಾರಾಂ ಹೇಳಿದರು.

- Advertisement -

ರಂಜಾನ್ ಪವಿತ್ರ ಮಾಸಾಚರಣೆಯ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ‘ಸಂಜಯ ಪ್ರಕಾಶನ’ ಮತ್ತು ‘ಪ್ರಜ್ಞಾವಂತರ ವೇದಿಕೆ’ಯ ವತಿಯಿಂದ ಆಯೋಜಿಸಲಾಗಿದ್ದ ‘ರಂಜಾನ್ ಇಫ್ತಾರ್ ಕೂಟ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

“ಸೌಹಾರ್ದತೆಯ ಪ್ರಾಮುಖ್ಯತೆ ಇಲ್ಲೇ ಇರುವ ʼಪ್ರೀತಿ-ಸ್ನೇಹʼ ಗುರುತಿಸುವುದೇ ನಿಜವಾದ ಧರ್ಮ. ʼಎಲ್ಲೋ ಇರುವ ದೇವರ ಹುಡುಕಿದೆ ಕಲ್ಲು ಮಣ್ಣಿನ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ…” ಎಂಬ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಕವನದ ಸಾಲುಗಳನ್ನು ಉಲ್ಲೇಖಿಸಿದರು. ಮನುಷ್ಯರ ನಡುವಿನ ಪ್ರೀತಿ ವಿಶ್ವಾಸವೇ ನಿಜವಾದ ದೇವರು. ಇಂತಹ ಸೌಹಾರ್ದತೆಯ ಸುದಿನಗಳನ್ನು ನಾವು ಶತಮಾನಗಳ ಕಾಲ ಬೆಳೆಸಿಕೊಂಡು ಹೋಗಬೇಕು” ಎಂದು ಕರೆ ನೀಡಿದರು.

ಗಂಜಾಂನ ಅಮಲೋದ್ಭವ ಚರ್ಚ್‌ನ ಧರ್ಮಾಧಿಕಾರಿ(ಫಾದರ್) ಸಾಂಘಾಯ್ ಪುಷ್ಪರಾಜ್ ಮಾತನಾಡಿ, ಮುಸ್ಲಿಂ ಬಾಂಧವರಿಗೆ ಚರ್ಚ್ ಹಾಗೂ ಬಿಷಪ್ ಪರವಾಗಿ ರಂಜಾನ್ ಶುಭಾಶಯ ಕೋರಿದರು. ಬಳಿಕ “ಉಪವಾಸ ಎಂದರೆ ಕೇವಲ ಅನ್ನ, ನೀರು ಬಿಡುವುದಲ್ಲ. ಅದು ನಮ್ಮ ಆತ್ಮಾವಲೋಕನದ ಸಮಯ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಮತ್ತು ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಪವಿತ್ರ ಕಾರ್ಯವೇ ಉಪವಾಸ. ಈ ಪುಣ್ಯದ ದಿನಗಳಲ್ಲಿ ಮುಸ್ಲಿಂ ಬಾಂಧವರು ಮಾಡುತ್ತಿರುವ ಪ್ರಾರ್ಥನೆ ಸಮಾಜಕ್ಕೆ ಒಳಿತನ್ನು ತರಲಿ” ಎಂದು ಹಾರೈಸಿದರು.‌

ಇಫ್ತಾರ್ 1

ಸೌಹಾರ್ದ ಕೂಟದಲ್ಲಿ ಅರ್ಥಗರ್ಭಿತ ಸಂದೇಶ ನೀಡಿದ ಡಾ. ಬಿ. ಸುಜಯ್ ಕುಮಾರ್, ʼಬಂಧು ದರ್ಶನವೇ ಫಲವಲಾ ಸಂಸಾರ ವೃಕ್ಷಕ್ಕೆ…ʼ ಎಂಬ ಪ್ರಸಿದ್ಧ ಸಾಲುಗಳ ಮೂಲಕ ಒಗ್ಗೂಡುವಿಕೆಯ ಮಹತ್ವವನ್ನು ಸಾರಿದರು. ಮೈಸೂರಿನ ಖ್ಯಾತ ವಿಮರ್ಶಕ ಡಾ. ಸಿ ಡಿ ನರಸಿಂಹಯ್ಯನವರ ಪ್ರಸಂಗವನ್ನು ಉಲ್ಲೇಖಿಸಿದ ಅವರು, “ಪ್ರಪಂಚದಲ್ಲಿ ಎಷ್ಟೇ ಸುಂದರವಾದ ಪ್ರಕೃತಿ ಅಥವಾ ಸಾಹಿತ್ಯವಿದ್ದರೂ, ಅವೆಲ್ಲಕ್ಕಿಂತ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಅತ್ಯಂತ ಮುಖ್ಯವಾದದ್ದು. ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಎಷ್ಟೇ ಬೆಳೆದರೂ, ನಾವು ಕೋಟ್ಯಂತರ ರೂಪಾಯಿ ಸಂಪಾದಿಸಿದರೂ, ಮನುಷ್ಯರ ನಡುವಿನ ಬಾಂಧವ್ಯವನ್ನು ಹಾಳುಮಾಡಿಕೊಂಡರೆ ಯಾವುದೇ ಪ್ರಗತಿಗೂ ಅರ್ಥವಿಲ್ಲ” ಎಂದು ಪ್ರತಿಪಾದಿಸಿದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಯುಕೆಪಿ-3ರ ಭೂಸ್ವಾಧೀನ ಜಮೀನುದಾರರಿಗೆ ಪರಿಹಾರ ವಿತರಣೆ

ನಾಡಿನ ಸರ್ವಧರ್ಮ ಸಮನ್ವಯತೆ ಮತ್ತು ಭಾವೈಕ್ಯತೆಗೆ ಅತ್ಯುತ್ತಮ ವೇದಿಕೆಯಾಗಿ ಮೂಡಿಬಂದಿತು. ವಿವಿಧ ಧರ್ಮಗಳ ಮುಖಂಡರು, ಚಿಂತಕರು ಹಾಗೂ ಗಣ್ಯರು ಒಂದೆಡೆ ಸೇರಿ ಸಹೋದರತೆಯ ಸಂದೇಶ ಸಾರಿದರು.

ಈ ಅರ್ಥಪೂರ್ಣ ಇಫ್ತಾರ್ ಕೂಟದಲ್ಲಿ ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ ಎಸ್ ವೆಂಕಟೇಶ್, ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್ ಎಂ ಶಿವಕುಮಾರ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಫ್ಸರ್ ಖಾನ್, ಇನ್ಸಾಫ್ ಸಂಸ್ಥೆಯ ಅಧ್ಯಕ್ಷ, ನೂರ್ ಮರ್ಚೆಂಟ್, ಕ್ಯಾತನಹಳ್ಳಿ ಚಂದ್ರಣ್ಣ, ಎಸ್ ಆರ್ ಸಿದ್ದೇಶ್, ಅಯೂಬ್ ಖಾನ್, ಸಿಂಧುವಳ್ಳಿ ಆಕ್ಟರ್, ಕೆ ಎಂ ಕೃಷ್ಣಕುಮಾರ್, ಆರೋಕ್ಯ ರಾಜ್, ರೇಷ್ಮಾ ಬಾನು, ಸುಜಾತಾ ಅರಸ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಅ.30 ರಂದು ಬೈಕ್ ರ್ಯಾಲಿ

ಶಿವಮೊಗ್ಗ, ಎಚ್‌ಐವಿ/ಏಡ್ಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಯುವ...

ಭದ್ರಾವತಿ | ಕುರಿ ಕಾಳಗದ ವೇಳೆ ಗಲಾಟೆ; ಯುವಕನಿಗೆ ಚಾಕು ಇರಿತ

ಕುರಿ ಕಾಳಗದ ವೇಳೆ ನಡೆಯುತ್ತಿದ್ದ ಜೂಜಾಟದ ಸಂದರ್ಭದಲ್ಲಿ ಗಲಾಟೆ ನಡೆದು ಯುವಕನೊಬ್ಬನಿಗೆ...

ಶಿವಮೊಗ್ಗ | ಶಿವಾಲಯ, ಲಕ್ಷ್ಮೀ ಟಾಕೀಸ್ ಬಳಿ ಬೀದಿ ಬದಿ ವ್ಯಾಪಾರಿಗಳ ತೆರವು

ಶಿವಮೊಗ್ಗ,ನಗರದ ೧೦೦ ಅಡಿ ರಸ್ತೆಯಲ್ಲಿರುವ ಶಿವಾಲಯದ ಪಕ್ಕದಲ್ಲಿ, ಮಹಾನಗರ ಪಾಲಿಕೆಯ ವತಿಯಿಂದ...

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಡಿಲೀಟ್: ಮೋದಿ ಸರ್ಕಾರದ ವಿರುದ್ಧ ಧ್ರುವ್ ರಾಠಿ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪೋಸ್ಟ್‌ಗಳನ್ನು ಮೋದಿ ಸರ್ಕಾರ ತೆಗೆದುಹಾಕಲಾಗುತ್ತಿದೆ ಎಂದು...