ಮಂಗಳೂರು | ಪಕ್ಕಲಡ್ಕದಲ್ಲಿ ಸೈಬರ್‌ ಅಪರಾಧದ ಬಗ್ಗೆ ಜನಜಾಗೃತಿ ಸಭೆ

Date:

ಸಾರ್ವಜನಿಕರು ಸೈಬರ್‌ ಅಪರಾಧ ಮತ್ತು ಅದರ ವಂಚನೆಗೆ ಬಲಿಯಾಗುತ್ತಿದ್ದಾರೆ. ಸೈಬರ್‌ ವಂಚನೆಯಿಂದ ಕೇವಲ ಹಣ ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು ಮಂಗಳೂರು ನಗರದ ಖ್ಯಾತ ವಕೀಲ ಸರ್ಫರಾಝ್ ಹೇಳಿದರು

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕಲಡ್ಕದ ಮಾರ್ಹೂಮ್ ಇಬ್ರಾಹಿಂ ಸಯೀದ್‌ ಸಭಾಂಗಣದಲ್ಲಿ ಜಮಾಅತೇ ಇಸ್ಲಾಮಿ ವತಿಯಿಂದ ಹಮ್ಮಿಕೊಂಡಿದ್ದ ಸೈಬರ್ ಅಪರಾಧದ ಬಗ್ಗೆ ಜನ ಜಾಗೃತಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಂಕನಾಡಿ ಪೋಲಿಸ್‌ ಠಾಣೆಯ ಉಪ ನಿರೀಕ್ಷಕ ಯೋಗೇಶ್ವರ್ ಮಾತನಾಡಿ, “ಸೈಬರ್‌ ಅಪರಾಧ, ಮಾದಕ ವ್ಯಸನ, ವಂಚನೆ ಇತ್ಯಾದಿಗಳ ಬಗ್ಗೆ ಹೆತ್ತವರು ತಮ್ಮ ಮಕ್ಕಳ ಮೇಲೆ ಒಂದು ನಿಗಾ ಇಟ್ಟಿರಬೇಕು. ಅರೆಸ್ಟ್‌ ಆದ ಮೇಲೆ ಖೇದಿಸದೆ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಬೇಕು. ಅವರ ಗೆಳೆತನ, ಪರಿಸರದ ಬಗ್ಗೆ ತಿಳಿದಿರಬೇಕು” ಎಂಬುದರ ಬಗ್ಗೆ ತನ್ನ ಅನುಭವಕ್ಕೆ ಬಂದ ಹಲವಾರು ಘಟನೆಗಳನ್ನು ಹೇಳಿ ಪೋಷಕರಿಗೆ ಜಾಗೃತಿ ಮೂಡಿಸಿದರು.

ಸೈಬರ್‌ ಅಪರಾಧಕ್ಕೆ ಅಥವಾ ವಂಚನೆಗೆ ಒಳಗಾದಾಗ ಸಾರ್ವಜನಿಕರು ಹೇಗೆ ಅದರಿಂದ ರಕ್ಷಣೆ ಹೊಂದಬಹುದು ಅದರ ಆಳ ಎಷ್ಟಿದೆ, ನಾವು ಹೇಗೆ ಜಾಗೃತರಾಗಬೇಕು ಎಂಬ ಇತ್ಯಾದಿ ವಿಷಯಗಳನ್ನು ಕಾನ್‌ಸ್ಟೆಬಲ್‌ ಪ್ರಶಾಂತ್‌ ವಿವರಿಸಿದರು.

ಪೋಲೀಸರಾದ ಪ್ರದೀಪ್‌ ಮತ್ತು ನಟರಾಜ್‌ರವರು ಸಾರ್ವಜನಿಕ ಸಂಶಯ ಮತ್ತು ಪ್ರಶ್ನೋತ್ತರದಲ್ಲಿ ಭಾಗವಹಿಸಿದರು.

ಇದನ್ನೂ ಓದಿದ್ದೀರಾ? ಹೊಲಯ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಆಚರಣೆ ʼಬಲಿ ಚಕ್ರವರ್ತಿ ಚಟ್ಟʼದ ರಹಸ್ಯ ಗೊತ್ತೇ?

ಮುಖ್ಯ ಅತಿಥಿ ಪಕ್ಕಲಡ್ಕ ಜುಮಾ ಮಸೀದಿಯ ಮೊಹಿಯುದ್ದೀನ್, ಅಧ್ಯಕ್ಷ ಜನಾಬ್ ಅಲ್ತಾಫ್ ಇಸ್ಮಾಯಿಲ್, ಜಮಾಅತೇ ಇಸ್ಲಾಮಿ ಮಂಗಳೂರು ದಕ್ಷಿಣ ಘಟಕದ ಕಾರ್ಯದರ್ಶಿ ಜನಾಬ್‌ ಸಮೀರ್‌ ದೀನ್‌ ಅಧ್ಯಕ್ಷತೆ ವಹಿಸಿದ್ದರು. ಮುಸ್‌ ಅದ್‌ ಕಿರಾಅತ್‌ ಪಠಿಸಿದರು, ಜಮಾಅತೇ ಇಸ್ಲಾಮಿ ಹಿಂದ್ ಪಕ್ಕಲಡ್ಕ, ವರ್ತುಲ ಸಂಚಾಲಕ ಸುಲೈಮಾನ್‌ ಪಕ್ಕಲಡ್ಕ, ಧನ್ಯವಾದವಿತ್ತರು. ಕಾರ್ಯದರ್ಶಿ ಅಶೀರುದ್ದೀನ್‌ ಆಲಿಯಾ ನಿರೂಪಿಸಿದರು. ಬಿಲಾಲ್‌ ಪಕ್ಕಲಡ್ಕ, ಮೊಯಿದಿನ್‌ ಪಕ್ಕಲಡ್ಕ, ಸಲೀಮ್‌ ಮಲಾರ್‌ ಸಹಕರಿಸಿದರು. ಮಹಿಳಾ ಘಟಕದ ಸಂಚಾಲಕಿ ಝೀನತ್‌ ಮೊಯಿದಿನ್‌ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ದಾರಿದೀಪ ಅವ್ಯವಸ್ಥೆ: ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಮನವಿ

ಉಡುಪಿ ನಗರಸಭೆ ವ್ಯಾಪ್ತಿಯ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಹದಗೆಟ್ಟಿರುವ ದಾರಿದೀಪ...

ಕಲಬುರಗಿ | ಹಸುಗೂಸನ್ನು ಕಸದ ರಾಶಿಗೆ ಎಸೆದು ಪರಾರಿ; ತಾಯಿ, ಅಜ್ಜಿ ಪೊಲೀಸರ ವಶಕ್ಕೆ

ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಒಂದು ದಿನದ ಹಸುಗೂಸನ್ನು ಕಸದ...

KPSC ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹಿಸಿ ಚಡಚಣದಲ್ಲಿ ಉಪವಾಸ ಸತ್ಯಾಗ್ರಹ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಕರ್ನಾಟಕ ಲೋಕಸೇವಾ...

ಉಡುಪಿ | ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿ ಕೊಲೆ

ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಲ್ಪೆಯಲ್ಲಿ ಮಂಗಳವಾರ ಬೆಳಗ್ಗೆ...