ಮಂಗಳೂರು | ಎಂಆರ್‌ಪಿಎಲ್‌ನಲ್ಲಿ ಭೀಕರ ಸ್ಫೋಟ: ಕಂಪಿಸಿದ ಜೋಕಟ್ಟೆ, ಹಲವು ಮನೆಗಳಿಗೆ ಹಾನಿ

Date:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಹತ್ತಿರದ ಜೋಕಟ್ಟೆ ಪ್ರದೇಶದಲ್ಲಿರುವ ಎಂಆರ್‌ಪಿಎಲ್‌ನಲ್ಲಿ (Mangalore Refinery and Petrochemicals Limited) ಭೀಕರ ಸ್ಫೋಟ ಸಂಭವಿಸಿದೆ. ಬ್ರಾಯ್ಲರ್ ಸ್ಫೋಟವಾಗಿದೆ ಎಂದು ಹೇಳಲಾಗಿದ್ದು ಹಲವಾರು ಕಾರ್ಮಿಕರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

- Advertisement -

ಫೇಸ್ 3 ಬಳಿ ಅಪಘಾತ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಪ್ರದೇಶದಲ್ಲಿ ಹೊಗೆ ಆವರಿಸಿದ್ದು, ಸ್ಫೋಟ ಸಂಭವಿಸಿದ ಪ್ರದೇಶವು ಹೊತ್ತಿ ಉರಿಯುತ್ತಿದೆ. ಸ್ಫೋಟದ ತೀವ್ರತೆಗೆ ಜೋಕಟ್ಟೆ ಪ್ರದೇಶ ಕಂಪಿಸಿದೆ. ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಹಲವು ಮನೆಗಳಿಗೆ, ಶಾಲೆಗಳಿಗೆ ಹಾನಿಯಾಗಿವೆ. ಕಿಟಕಿ ಗಾಜುಗಳು ಒಡೆದುಹೋಗಿವೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಇದನ್ನೂ ಓದಿ: ದ.ಕನ್ನಡ | 3ನೇ ದಿನಕ್ಕೆ ಕಾಲಿಟ್ಟ ಜೋಕಟ್ಟೆ ಧರಣಿ; ಸಂತ್ರಸ್ತರ ಬದುಕಿನೊಂದಿಗೆ MRPL ಚೆಲ್ಲಾಟ ಸಹಿಸಲಾಗದು: ಅಭಯಚಂದ್ರ ಜೈನ್

mrpl1
ಎಂಆರ್‌ಪಿಎಲ್ ಮುಂಭಾಗ ಸ್ಥಳೀಯರು ಜಮಾಯಿಸುತ್ತಿದ್ದಾರೆ.

ಸದ್ಯ ಜೋಕಟ್ಟೆ ಭಾಗದಲ್ಲಿ ಜನರಲ್ಲಿ ಆತಂಕ ನೆಲೆ ಮಾಡಿದ್ದು, ಎಂಆರ್‌ಪಿಎಲ್ ಮುಂಭಾಗ ಸ್ಥಳೀಯರು ಜಮಾಯಿಸುತ್ತಿದ್ದಾರೆ. ಪ್ರಾಣಪಾಯ ಸಂಭವಿಸಿದೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಜೋಕಟ್ಟೆ ಅಂಜುಮನ್ ಶಾಲೆ ಸೇರಿದಂತೆ ಹಲವು ಶಾಲೆಗಳ ಕಟ್ಟಡಗಳಲ್ಲಿ ಬಿರುಕು ಕಂಡುಬಂದಿವೆ. ಈ ನಿಟ್ಟಿನಲ್ಲಿ ಎಂಆರ್‌ಪಿಲ್‌ ಡೆಲ್ಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಸ್ಥಳೀಯ ಶಾಲೆಗಳಿಗೆ ದಿಢೀರ್ ರಜೆ ಘೋಷಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ.

ಈ ಹಿಂದೆ 2025ರ ಜುಲೈನಲ್ಲಿ ಎಂಆರ್‌ಪಿಎಲ್‌ನ ಆಯಿಲ್ ಮೂವ್‌ಮೆಂಟ್ ಏರಿಯಾ (OMS) ಟ್ಯಾಂಕ್ ಪರಿಶೀಲನೆ ನಡೆಸುತ್ತಿದ್ದಾಗ ಹೈಡ್ರೋಜನ್ ಸಲ್ಫೈಡ್ (H2S) ವಿಷಾನಿಲ ಸೋರಿಕೆಯಾಗಿ ಇಬ್ಬರು ಹಿರಿಯ ಆಪರೇಟರ್‌ಗಳು ಸಾವನ್ನಪ್ಪಿದ್ದರು. ಮೃತರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ದೀಪ್ ಚಂದ್ರ (33) ಮತ್ತು ಕೇರಳದ ಬಿಜಿಲ್ ಪ್ರಸಾದ್ (33) ಎಂದು ಗುರುತಿಸಲಾಗಿತ್ತು. ಇವರನ್ನು ರಕ್ಷಿಸಲು ಹೋದ ವಿನಾಯಕ್ ಮ್ಯಾಗೇರಿ ಎಂಬ ಮತ್ತೊಬ್ಬ ಕಾರ್ಮಿಕ ಗಂಭೀರ ಅಸ್ವಸ್ಥರಾಗಿದ್ದರು.

ಈ ಘಟನೆಯಿಂದಾಗಿ ಎಂಆರ್‌ಪಿಎಲ್‌ನಲ್ಲಿರುವ ಭಾರಿ ನಿರ್ಲಕ್ಷ್ಯ ಎದ್ದು ಕಂಡಿತ್ತು. ಗ್ಯಾಸ್ ಸೋರಿಕೆಯಾದಾಗ ಯಾವುದೇ ಎಚ್ಚರಿಕೆ ಅಲಾರಾಂ ಮೊಳಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಡಿಟಿಯುನಂತಹ ಕಾರ್ಮಿಕ ಸಂಘಟನೆಗಳು, ಎಂಆರ್‌ಪಿಎಲ್ ಅವ್ಯವಸ್ಥೆ ವಿರುದ್ಧ ಹೋರಾಡುತ್ತಿರುವ ಜೋಕಟ್ಟೆ ಹೋರಾಟ ಸಮಿತಿ ಉನ್ನತ ಮಟ್ಟದ ತನಿಖೆ ಮತ್ತು ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡುವಂತೆ ಹೋರಾಟ ನಡೆಸಿದ್ದವು. ನಿರ್ಲಕ್ಷ್ಯದ ಆರೋಪದ ಮೇಲೆ ಫ್ಯಾಕ್ಟರಿ ಮ್ಯಾನೇಜರ್ ಸೇರಿದಂತೆ ಆರು ಎಂಆರ್‌ಪಿಎಲ್ ಅಧಿಕಾರಿಗಳ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿತ್ತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಈಜಲು ತೆರಳಿದ ಯುವಕರು ನೀರುಪಾಲು; ಬೈಂದೂರಿನಲ್ಲಿ ಕೊಲೆ ಯತ್ನ ಆರೋಪಿಗಳ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ ಸ್ನೇಹಿತರೊಂದಿಗೆ ಈಜಲು...

ಬೀದರ್‌ | ಹಾಲಿಗಿಂತ ನೀರು ದುಬಾರಿಯಾಗುವ ಕಾಲ ದೂರವಿಲ್ಲ: ಮಾರುತಿ ಬೌದ್ಧೆ

ನಿಸರ್ಗದತ್ತವಾಗಿ ಉಚಿತವಾಗಿ ದೊರೆಯಬೇಕಾದ ನೀರು ಮುಂದೊಂದು ದಿನ ಹಾಲಿನ ದರಕ್ಕಿಂತಲೂ ದುಬಾರಿಯಾಗಿ...

ಬಿಹಾರದಲ್ಲಿ ಮತ್ತೊಂದು ಆಘಾತಕಾರಿ ಕೃತ್ಯ: ಬೈಕ್ ತಡೆದು ಅಪ್ರಾಪ್ತರ ಮೇಲೆ ಗೂಂಡಾಗಿರಿ

ನೆತ್ತಿಯ ಮೇಲೆ ಸೂರ್ಯ ಉರಿಯುತ್ತಿದ್ದ ಆ ಮಧ್ಯಾಹ್ನ, ವಾತಾವರಣದಲ್ಲಿ ವಿಚಿತ್ರವಾದ ಮೌನ...

ನಿಯಮಗಿರಿ ಗಣಿಗಾರಿಕೆ ಪುನರಾರಂಭದ ಕುಮ್ಮಕ್ಕು: ಜಲಮೂಲ, ಅಸ್ತಿತ್ವ ರಕ್ಷಣೆಗೆ ಸಿಡಿದೆದ್ದ ಪರಿಸರ ಪ್ರೇಮಿಗಳು!

ಒಡಿಶಾದ ರಾಯಗಡ ಮತ್ತು ಕಾಲಾಹಾಂಡಿ ಜಿಲ್ಲೆಗಳ ಗಡಿಭಾಗದಲ್ಲಿರುವ ಪ್ರಸಿದ್ಧ ನಿಯಮಗಿರಿ ಬೆಟ್ಟ...