ಕೊಡಗು ಜಿಲ್ಲೆಯ ನಾಪೋಕ್ಲು ವ್ಯಾಪ್ತಿಗೆ ಸೇರಿದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕೆಂದು ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ (36) ಪತ್ತೆಯಾಗಿದ್ದು, ವೈದ್ಯರು ತಪಾಷಣೆ ನಡೆಸಿದ್ದಾರೆ.
ಏಪ್ರಿಲ್ 2ರ ಮದ್ಯಾನ್ಹ ಹೊತ್ತಿನಲ್ಲಿ ಕಣ್ಮರೆಯಾಗಿದ್ದ ಶರಣ್ಯರನ್ನ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ದಿನಗಳ ಬಳಿಕ ಪತ್ತೆಯಾದ ಯುವತಿ ಕಂಡು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.
ನಾಪೋಕ್ಲು ಬಳಿಯ ಕಕ್ಕಬ್ಬೆ ಗ್ರಾಮದ ಖಾಸಗಿ ಸ್ಟೇ ಹೋಂನಲ್ಲಿ ತಂಗಿದ್ದ ಶರಣ್ಯ, ಕಳೆದ ಗುರುವಾರ ಟ್ರಕ್ಕಿಂಗ್ಂಗಾಗಿ ತೆರಳಿದ್ದರು. ಇದೇ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆಗಾಗಿ 9 ತಂಡಗಳ ಪೊಲೀಸರು, ನಕ್ಸಲ್ ನಿಗ್ರಹದಳ, ಶ್ವಾನದಳ ಹಾಗೂ ಅರಣ್ಯ ಇಲಾಖೆಗೆ ಸೇರಿದ 40 ಸಿಬ್ಬಂದಿ, ಡ್ರೋನ್ ಮೂಲಕ ಸತತ ಮೂರು ದಿನ ಶೋಧ ನಡೆಸಿ ಪತ್ತೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಡಾ ಬಾಬು ಜಗಜೀವನ್ ರಾಮ್ ರ ಚಿಂತನೆಗಳು ದೇಶದ ಜನರ ಪರವಾಗಿದ್ದವು: ಸಚಿವ ಕೆ ವೆಂಕಟೇಶ್
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ. ಎಸ್. ಪೊನ್ನಣ್ಣ ಶರಣ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಪತ್ತೆಗಾಗಿ ಶ್ರಮಿಸಿದ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




