ಮಂಗಳೂರು | ರೀಲ್ಸ್‌ಗಳಿಗೆ ಲೈಕ್ ನೆಪದಲ್ಲಿ ₹2.30 ಲಕ್ಷ ವಂಚನೆ; ಕೇಸ್ ದಾಖಲು

Date:

ರೀಲ್ಸ್‌ಗಳಿಗೆ ಲೈಕ್ ಮಾಡಿ ಸ್ಕ್ರೀನ್‌ಶಾಟ್ ತೆಗೆದು ನಿಗದಿತ ಟೆಲಿಗ್ರಾಮ್ ಖಾತೆಗೆ ಕಳುಹಿಸಿದರೆ ಮತ್ತು ಹಣ ಹೂಡಿಕೆ ಮಾಡಿದರೆ ಕಮಿಷನ್ ಸಿಗಲಿದೆ ಎಂದು ನಂಬಿಸಿ‌ ವ್ಯಕ್ತಿಯೊಬ್ಬರಿಗೆ ₹2.30 ಲಕ್ಷ ವಂಚನೆ ಮಾಡಿರುವ ಬಗ್ಗೆ ಮಂಗಳೂರು ನಗರದ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

“ಜೂ.14ರಂದು ಅಪರಿಚಿತರು ಕೋಲ್ಡ್ ವಿಂಟರ್ ಎನ್ನುವ ಟೆಲಿಗ್ರಾಮ್ ಗ್ರೂಪ್‌ಗೆ ನನ್ನನ್ನು ಸೇರಿಸಿದ್ದಾರೆ. ಅದರಲ್ಲಿದ್ದ ಲಿಂಕ್‌ಗೆ ಕ್ಲಿಕ್ ಮಾಡಿದಾಗ ರೀಲ್ಸ್‌ಗಳು ಕಂಡು ಬಂದಿದೆ. ಅದಕ್ಕೆ ಲೈಕ್ಸ್ ಕೊಟ್ಟು ಸ್ಟೀನ್ ಶಾಟ್ ತೆಗೆದು ಮತ್ತೊಂದು ಟೆಲಿಗ್ರಾಮ್ ಖಾತೆಗೆ ಕಳುಹಿಸುವಂತೆ ಸಂದೇಶ ಬಂದಿದೆ. ಅದರಂತೆ ತಾನು ಸ್ಕ್ರೀನ್‌ಶಾಟ್ ಕಳುಹಿಸಿದ್ದು, ಆಗ ಕಮಿಷನ್ ರೂಪದಲ್ಲಿ ಬ್ಯಾಂಕ್‌ ಖಾತೆಗೆ ₹150 ಜಮೆಯಾಗಿದ್ದು, ಬಳಿಕ ಟೆಲಿಗ್ರಾಮ್ ಖಾತೆಯ ಮತ್ತೊಬ್ಬ ವ್ಯಕ್ತಿಯ ಖಾತೆಗೆ ತಾನು ಕಳುಹಿಸುವ ಕೋಡ್ ಫಾರ್ವರ್ಡ್ ಮಾಡುವಂತೆ ಮೊದಲಿನ ವ್ಯಕ್ತಿ ಸೂಚಿಸಿದ್ದ. ಅದರಂತೆ ತಾನು ಕೋಡ್ ಕಳಿಹಿಸಿದೆ”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಇದನ್ನೂ ಓದಿ: ಮಂಗಳೂರು | ತುಳುನಾಡಿನ ಪಾರಂಪರಿಕ ಕೈಮಗ್ಗ ವೃತ್ತಿಯನ್ನು ಪ್ರೋತ್ಸಾಹಿಸಿ: ಅಮರಶ್ರೀ

“ಬಳಿಕ ಎರಡನೇ ವ್ಯಕ್ತಿ ಹಣ ಹೂಡಿಕೆ ಮಾಡಿದರೆ ಶೇ.10ರಷ್ಟು ಕಮಿಷನ್ ನೀಡುವುದಾಗಿ ಸಂದೇಶ ಹಾಕಿದ್ದ. ಆತನಲ್ಲಿ ವಿಚಾರಿಸಿದ ಬಳಿಕ ಮೊದಲಿಗೆ ₹4,500 ವರ್ಗಾವಣೆ ಮಾಡಿದ್ದ, ಬಳಿಕ ಇನ್ನೊಂದು ಟೆಲಿಗ್ರಾಮ್ ಗ್ರೂಪ್‌ಗೆ ಸೇರ್ಪಡೆಗೊಳಿಸಿದರು. ಆದರಲ್ಲಿ ಜೂ.16 ರವರೆಗೆ ತನ್ನ ಮತ್ತು ಸ್ನೇಹಿತೆಯ ಖಾತೆಯಿಂದ ₹2.30 ಲಕ್ಷ ಹಣವನ್ನು ವರ್ಗಾಯಿಸಿದ್ದಾರೆ” ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೋವಿ ಸಮುದಾಯದ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುತುವರ್ಜಿ ವಹಿಸಿ : ರಾಮಪ್ಪ ಎಂ

ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ...

ರಾಯಚೂರು | ಭೀಕರ ಬರ: ₹11 ಕೋಟಿ ಬಿಡುಗಡೆ: ಸಚಿವ ಅಜಯ್ ಸಿಂಗ್

ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ...

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ: ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನ

ಉತ್ತರ ಕನ್ನಡ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್...

ರಾಯಚೂರು | ಲಿಂಗಸುಗೂರು ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ವರ್ಗಾವಣೆ

ಲಿಂಗಸುಗೂರ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ಅವರನ್ನು ವರ್ಗಾವಣೆ...