ಮೈಸೂರು | ಅಮಿತ್ ಶಾ ಹೇಳಿಕೆ ವಿರುದ್ಧ ಸಿಡಿದೆದ್ದ ಪ್ರಗತಿಪರ ಸಂಘಟನೆಗಳು; ಬಂಧನಕ್ಕೆ ಆಗ್ರಹ

Date:

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಇಂದು ಡಾ ಬಿ ಆರ್ ಅಂಬೇಡ್ಕರ್ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ನಡೆಯಿತು.

- Advertisement -

ಸಂಸತ್ತಿನಲ್ಲಿ ಸಚಿವ ಅಮಿತ್ ಶಾ, “ಅಂಬೇಡ್ಕರ್ ಅಂಬೇಡ್ಕರ್.. ಎನ್ನುವುದು ಫ್ಯಾಷನ್ ಆಗಿದೆ. ಅಂಬೇಡ್ಕರ್‌ ಹೆಸರು ಹೇಳುವಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಸ್ವರ್ಗ ಪ್ರಾಪ್ತಿಯಾಗುತಿತ್ತು” ಎನ್ನುವ ಮೂಲಕ ಬಾಬಾ ಸಾಹೇಬರಿಗೆ ಅವಮಾನಿಸಿದ್ದರು. ಈ ವಿಚಾರವಾಗಿ ಹುಣಸೂರು ಪಟ್ಟಣದ ಸಂವಿಧಾನ ವೃತ್ತದಲ್ಲಿ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳು, ಎಲ್ಲಾ ಸಮುದಾಯ ಹಾಗೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಜಮಾಯಿಸಿ ಅಮಿತ್ ಶಾ ಹೇಳಿಕೆ ಖಂಡಿಸಿ ಧಿಕ್ಕಾರ ಕೂಗಿದರು. ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಪುಟದಿಂದ ಸಚಿವ ಶಾ ಅವರನ್ನು ವಜಾ ಮಾಡಬೇಕು. ಸಂವಿಧಾನದಡಿ
ಅಧಿಕಾರಕ್ಕೆ ಬಂದು ಅದೇ ಸಂವಿಧಾನ ನಿರ್ಮಾತೃ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು ಖಂಡನೀಯ. ಇಂತವರು ಅಧಿಕಾರದಲ್ಲಿರುವುದು ಶೋಭೆಯಲ್ಲ, ಸಂಪುಟದಿಂದ ವಜಾ ಮಾಡದೇ ಇದ್ದಲ್ಲಿ ದೇಶವ್ಯಾಪಿ ದೊಡ್ಡ ಹೋರಾಟದ ಮೂಲಕ ಬುದ್ಧಿ ಕಲಿಸಬೇಕಾಗುತ್ತದೆ” ಎನ್ನುವ ಸಂದೇಶ ರವಾನೆ ಮಾಡಿದರು.

“ಕೇಂದ್ರ ಸಚಿವ ಅಮಿತ್ ಶಾ ಮತ್ತು ಅವರ ಪಟಾಲಂಗಳು ದೇವರ ಹೆಸರು ಹೇಳಿ ಎಲ್ಲರೂ ಸ್ವರ್ಗಕ್ಕೆ ಹೋಗಲಿ. ಎಲ್ಲರಿಗೂ ಆದಷ್ಟು ಬೇಗ ಸ್ವರ್ಗ ಪ್ರಾಪ್ತಿಯಾಗಲಿ. ನಮಗೆ ನರಕ ಆದರೂ ಸರಿಯೇ ಡಾ ಬಾಬಾ ಸಾಹೇಬರ ಸಂವಿಧಾನದಡಿಯಲ್ಲಿ ಇಲ್ಲಿಯೇ ಬಾಳುತ್ತೇವೆ, ನಮಗೆ ನೆಮ್ಮದಿ ಇದೆ. ನಮಗೆ ಬದುಕು ಕೊಟ್ಟವರು ಅಂಬೇಡ್ಕರ್ ಅವರೇ ನಮ್ಮ ದೇವರು” ಎಂದು ಆಕ್ರೋಶ ಹೊರಹಾಕಿದರು.

WhatsApp Image 2025 01 27 at 4.59.47 PM 1

ಸಮಾನತೆಯ ಸಮಾಜಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಮಾತಾಡುವುದನ್ನು ಎಂದಿಗೂ ಸಹಿಸುವುದಿಲ್ಲ. ಇದೇ ರೀತಿ ಮುಂದುವರಿದರೆ ತಕ್ಕ ಬುದ್ದಿ
ಕಲಿಸಬೇಕಾಗುತ್ತದೆ. ಈ ಕೂಡಲೇ ಅವರನ್ನು ಬಂಧಿಸಿ, ಸಂಪುಟದಿಂದ ವಜಾ ಮಾಡುವಂತೆ ತಾಲೂಕು ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎಸಿಯವರು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಮೈಸೂರು | ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ ಸಂಚಾರಿ ಕಣ್ಣಿನ ಘಟಕ

ಪ್ರತಿಭಟನೆಯಲ್ಲಿ ಹರಿಹರ ಆನಂದ ಸ್ವಾಮಿ, ಹೊಸೂರು ಕುಮಾರ್, ತಿಮ್ಮೆ ಗೌಡ್ರು, ರತ್ನಾಪುರಿ ಪುಟ್ಟಸ್ವಾಮಿ, ನಿಂಗರಾಜ್ ಮಲ್ಲಾಡಿ, ದೇವರಾಜ್ ಮಲ್ಲಾಡಿ, ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್, ಬಸವಲಿಂಗಯ್ಯ, ದೇವರಾಜ್ ಒಡೆಯರ್, ವರದರಾಜು, ಜೆ ಮಹಾದೇವು, ಕಾಂತರಾಜು, ಅಪ್ಪಣ್ಣ, ನಿಲುವಾಗಿಲು ಪ್ರಭಾಕರ್, ಬಿಎಸ್‌ಪಿ ಪ್ರಸನ್ನ, ಬಿ ಕುಮಾರ್, ಬೆಂಕಿಪುರ ಚಿಕ್ಕಣ್ಣ, ದಶರಥ, ಅಗ್ರಹಾರ ರಾಮೇಗೌಡ, ವಕೀಲ ಪುಟ್ಟರಾಜು, ಕಿರಂಗೂರು ಸ್ವಾಮಿ, ದೇವರಾಜ ಹೈರಿಗೆ, ಗೋವಿಂದ ರಾಜು, ಶಿವರಾಜು, ಸಿದ್ದೇಶ್, ನಾರಾಯಣ, ರಾಜು ಚಿಕ್ಕ ಹುಣಸೂರು, ಅತ್ತಿಕುಪ್ಪೆ ರಾಮಕೃಷ್ಣ, ಗಿರೀಶ್, ಬಿಳಿಕೆರೆ ಸ್ವಾಮಿ, ಪುಟ್ಟರಾಜು, ಚೆಲುವರಾಜು, ನಾಗೇಶ್, ಅಭಿಲಾಶ್, ಪರಮೇಶ್, ರವೀಂದ್ರ, ಕೊಳಗಟ್ಟ ಕೃಷ್ಣ, ಹೊನ್ನಪ್ಪ, ಚಿಲ್ಕುಂದ ರವಿ, ಚೋರನ ಹಳ್ಳಿ ಶಿವಣ್ಣ, ಕೃಷ್ಣ, ಸಂತೋಷ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...