ಮೈಸೂರು | ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ; ಮಾತಾ ಆಸ್ಪತ್ರೆಯ ವಿದ್ಯುತ್​ ಸಂಪರ್ಕ ಕಡಿತ

0
203
ಮಾತಾ ಆಸ್ಪತ್ರೆ ಕ್ಲೋಸ್

ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಮಾತಾ ಆಸ್ಪತ್ರೆಯ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಕಳೆದ 4 ತಿಂಗಳಿಂದ ಮಾತಾ ಆಸ್ಪತ್ರೆ ವಿದ್ಯುತ್ ಬಿಲ್ ಪಾವತಿಸದೆ ಬರೋಬ್ಬರಿ ₹20,000 ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಚೆಸ್ಕಾಂ ಸಿಬ್ಬಂದಿ ಮಾತಾ ಆಸ್ಪತ್ರೆಯ ವಿದ್ಯುತ್‌ ಕಡಿತಗೊಳಿಸಿದ್ದಾರೆ.

ಮಂಡ್ಯದ ಆಲೆಮನೆಯಲ್ಲಿ ಗರ್ಭದ ಸ್ಕ್ಯಾನಿಂಗ್‌ ಮಾಡಿ ಲಿಂಗಪತ್ತೆ ಮಾಡುತ್ತಿದ್ದ ಕಿರಾತಕರು, ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ಮಾಡುತ್ತಿದ್ದರು. ಇದು ದೊಡ್ಡ ಮಟ್ಟದಲ್ಲಿ ದಂಧೆಯಾಗಿದೆ. ಇದೀಗ ಆಸ್ಪತ್ರೆ ವಿರುದ್ಧ ದೂರುಗಳು ಕೇಳಿಬರುತ್ತಿದ್ದಂತೆಯೇ ಚೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಹೆಣ್ಣುಭ್ರೂಣ ಹತ್ಯೆ ಪ್ರಕರಣ ಹೆಚ್ಚಳ; ಆರೋಗ್ಯಾಧಿಕಾರಿಗಳ ವಿರುದ್ಧ ಆರೋಪ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಾತಾ ಆಸ್ಪತ್ರೆ ಮೂರು ತಿಂಗಳ ಹಿಂದೆಯೇ ಕ್ಲೋಸ್ ಆಗಿದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಆಸ್ಪತ್ರೆ ಗೋಡೆಗೆ ನೋಟಿಸ್ ಅಂಟಿಸಿದ್ದಾರೆ. ನೋಟಿಸ್‌ನಲ್ಲಿ ಐದು ತಿಂಗಳ ಹಿಂದಿನ ದಿನಾಂಕ ನಮೂದು ಮಾಡಿದ್ದು, ಮೈಸೂರು ತಾಲೂಕು ಆರೋಗ್ಯಧಿಕಾರಿ ಸಹಿಯೂ ಇದೆ. ಆದರೂ ನೊಟೀಸ್ ಯಾರು ಕೊಟ್ಟಿದ್ದಾರೆ ಗೊತ್ತಿಲ್ಲವೆಂದು ಡಿಹೆಚ್‌ಒ ಹೇಳುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ ಆರೋಗ್ಯ ಅಧಿಕಾರಿಗಳೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಎನ್ನುವ ಶಂಕೆ  ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here