ಸಾಗರ | ʻಮೀಶೋ ಲಕ್ಕಿ ಡ್ರಾʼ ಆಮಿಷವೊಡ್ಡಿ ಮಹಿಳೆಗೆ ರೂ.23 ಲಕ್ಷ ವಂಚನೆ

Date:

ಆನ್‌ಲೈನ್ ಶಾಪಿಂಗ್ ವೇದಿಕೆ ಮೀಶೋ ಹೆಸರಿನಲ್ಲಿ ಲಕ್ಕಿ ಡ್ರಾ ಆಮಿಷವೊಡ್ಡಿ ಸಾಗರದ ಮಹಿಳೆಯೊಬ್ಬರಿಗೆ ಬರೋಬ್ಬರಿ 23,40,179 ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ʻಮೀಶೋ ಲಕ್ಕಿ ಡ್ರಾʼ ಸಾಗರ ಮಹಿಳೆಯೊಬ್ಬರಿಗೆ ಈ ರೀತಿ ವಂಚಿಸಲಾಗಿದೆ.

- Advertisement -

ಸಂತ್ರಸ್ತ ಮಹಿಳೆಗೆ ಮೀಶೋ ಆನ್‌ಲೈನ್ ಶಾಪಿಂಗ್ ಕಡೆಯಿಂದ ಬಂದಿರುವುದಾಗಿ ಹೇಳಲಾದ ಒಂದು ಸ್ಪೀಡ್ ಪೋಸ್ಟ್ ಬಂದಿತ್ತು. ಆ ಪತ್ರವನ್ನು ಅವರು ತೆರೆದು ನೋಡಿದಾಗ, ಮೀಶೋ ಆನ್‌ಲೈನ್ ಶಾಪಿಂಗ್‌ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಕಂಪನಿಯ ನೊಂದಾಯಿತ ಗ್ರಾಹಕರಿಗಾಗಿ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿಸಿದ್ದು, ಅದರಲ್ಲಿ ನೀವು ಕೂಡ ಆಯ್ಕೆಯಾಗಿದ್ದೀರಿ ಎಂದು ಬರೆಯಲಾಗಿತ್ತು. ಅದರಲ್ಲಿದ್ದ ಒಂದು ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ನೀವು ಬಹುಮಾನ ಗೆದ್ದರೆ, ನಿಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿತ್ತು ಹಾಗೂ ಅಲ್ಲಿ ನೀಡಲಾಗಿದ್ದ ಮೊಬೈಲ್ ನಂಬರ್ 7890448206 ಗೆ ಕರೆ ಮಾಡಿ ವಿಚಾರಿಸಿ ಕಾರ್ಡ್ ಸ್ಕ್ರ್ಯಾಚ್ ಮಾಡಿದ ನಂತರ ಇದೇ ವಾಟ್ಸಪ್ ನಂಬರ್‌ಗೆ ದಾಖಲೆಗಳನ್ನು ಕಳುಹಿಸಲು ತಿಳಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಸಂತ್ರಸ್ತ ಮಹಿಳೆ ಕಾರ್ಡ್ ಸ್ಟ್ರಾಚ್ ಮಾಡಿದಾಗ ಅದರಲ್ಲಿ ಪ್ರಥಮ ಬಹುಮಾನ ಮಹೀಂದ್ರ ಕಾರ್ ಎಂದು ನಮೂದಿಸಲಾಗಿತ್ತು. ನಂತರ ವಂಚಕರೇ ಸಂತ್ರಸ್ತ ಮಹಿಳೆ ನಂಬರ್‌ಗೆ ಕರೆ ಮಾಡಿ ನೀವು ʻಮಹೀಂದ್ರ- 95ʼ ಕಾರ್ ಪ್ರಥಮ ಬಹುಮಾನವಾಗಿ ಗೆದ್ದಿರುವುದಾಗಿ ನಂಬಿಸಿ, ನಿಮಗೆ ಕಾರ್ ಬೇಕಾ ಅಥವಾ ಕಾರಿನ ಮೌಲ್ಯದ 24,85,980 ರೂ. ಹಣ ಬೇಕಾ ಎಂದು ಕೇಳಿದ್ದರು.

ನಗದು ಪಡೆಯಲು ವಾಟ್ಸಪ್‌ಗೆ ಮಹಿಳೆ ತಮ್ಮ ಪ್ಯಾನ್ ಕಾರ್ಡ್ ಮತ್ತು ಒಂದು ಫೋಟೋವನ್ನು ಕಳುಹಿಸಿದ್ದಾರೆ. ಕಾರಿನ ಮೌಲ್ಯದ ಹಣವನ್ನು ಪಡೆಯಲು ವಿವಿಧ ಚಾರ್ಜಸ್ ನೀಡುವಂತೆ ಹೇಳಿ ಸಂತ್ರಸ್ತ ಮಹಿಳೆಯಿಂದ ಒಟ್ಟು 23,40,179 ರೂ. ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.

ತಮಗೆ ವಂಚನೆಯಾಗಿರುವುದನ್ನು ಅರಿತ ಸಂತ್ರಸ್ತ ಮಹಿಳೆ ಸೆಪ್ಟೆಂಬರ್ 30, 2026 ರಂದು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಗ್ರಾಮ ಸಭೆಯಲ್ಲಿ ʻಬಾಲ್ಯ ವಿವಾಹ ಮುಕ್ತ ಅರಳಿಹಳ್ಳಿʼ ಶಪಥ

ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ದಿನಾಚರಣೆಯ...

ಶಿವಮೊಗ್ಗ | ಗನ್, ಡ್ರ್ಯಾಗರ್ ಹಿಡಿದು ರೀಲ್ಸ್‌! ಯುವಕನ ವಿರುದ್ಧ ಸುವೋ ಮೊಟೋ ಕೇಸ್‌

ಯುವಕನೊಬ್ಬ ಗನ್ ಮತ್ತು ಡ್ರ್ಯಾಗರ್ ಹಿಡಿದುಕೊಂಡು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿ...

ದೆಹಲಿಯಲ್ಲಿ ಹೊಸ ಖಾಸಗಿ ಶಾಲೆಗಳ ಸ್ಥಾಪನೆ ನಿಯಮ ಸಡಿಲಿಕೆ: ಎರಡು ಕಡ್ಡಾಯ ಷರತ್ತುಗಳ ರದ್ದು

ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಇರುವ ನಿಯಮಗಳನ್ನು ದೆಹಲಿ ಸರ್ಕಾರವು ಸಡಿಲಿಸಿದ್ದು,...