ಶಿಫ್ಟ್ ಡಿಜೈರ್ ಕಾರು ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತವಾಗಿ ಸ್ಥಳದಲ್ಲೇ ಕಾರು ಚಾಲಕ ಮೃತಪಟ್ಟಿದ್ದು ಕಾರಿನಲ್ಲಿದ್ದ ಇನ್ನೊಬ್ಬ ಹಾಗೂ ಬಸ್ ನಲ್ಲಿದ್ದ ಹಲವರಿಗೆ ಗಾಯಗೊಂಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಮಾಚನಹಳ್ಳಿ ಗೇಟ್ ಬಳಿ ನಡೆದಿದೆ
ಚಿಂತಾಮಣಿ ಬೆಂಗಳೂರು ರಸ್ತೆ ಮಾರ್ಗ ಮಧ್ಯದ ಪೆರುಮಾಚನಹಳ್ಳಿ ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ಸಮಯದಲ್ಲಿ ಈ ಘಟನೆ ನಡೆದಿದೆ
ಅಪಘಾತದಲ್ಲಿ ಮೃತಪಟ್ಟ ಕಾರಿನ ಚಾಲಕ ಶ್ರೀನಿವಾಸಪುರ ಗ್ರಾಮದ 35 ವರ್ಷದ ಭರತ್ ಕುಮಾರ್ ರವರಾಗಿದ್ದು,ಕಾರಿನಲ್ಲಿದ್ದ ಮತ್ತೂಬ್ಬ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಸ್ಥಳಾಂತರಿಸಲಾಗಿದೆ.
ಇನ್ನೂ ಬಸ್ ನಲ್ಲಿದ್ದ ಹಲವರಿಗೆ ಗಾಯಗಳಾಗಿ ಅವರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
This video cannot be played in your browser. Open the video directly
ಶುಕ್ರವಾರ ಮಧ್ಯಾಹ್ನ 1-50 ರ ಸಮಯದಲ್ಲಿ ಬೆಂಗಳೂರುನಿಂದ ಚಿಂತಾಮಣಿಗೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗೆ ಎದುರೇಗಡೆಯಿಂದ ಓವರ್ ಟೇಕ್ ಮಾಡಿಕೊಂಡು ಬಂದ ಶಿಫ್ಟ್ ಡಿಸೈನರ್ ಕಾರು ಡಿಕ್ಕಿ ಹೊಡೆದ ರಬಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು,ಬಸ್ ರಸ್ತೆ ಬದಿಯ ಹಳಕ್ಕೆ ಬಿದ್ದು,ಬಸ್ ನ ಮುಂಭಾಗ ಕೂಡ ನಜ್ಜುಗುಜ್ಜಾಗಿದೆ.
ಇದನ್ನು ಓದಿದ್ದೀರಾ..?ಶ್ರೀನಿವಾಸಪುರ | ಸಂಘದ ಕಾರ್ಯಚಟುವಟಿಕೆಗಳಿಗೆ ಚುರುಕು: ಡಿಸಿಸಿ ಬ್ಯಾಂಕ್ ನಿರ್ದೇಶಕಿ ನಾಗರತ್ನಮ್ಮ
ಇನ್ನೂ ಘಟನಾ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿಐ ಶಿವರಾಜ್ ಮತ್ತು ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ





