ಸೆ.27ರಂದು ಜಗನ್ಮೋಹನ್ ಅರಮನೆಯಲ್ಲಿ ‘ಸಾರ್ವಜನಿಕ ಸೀರತ್ ಸಮಾವೇಶ’

Date:

ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಸಂದೇಶ ಹಾಗೂ ಅವರು ಬೋಧಿಸಿದ ಉದಾತ್ತ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಕರ್ನಾಟಕದಾದ್ಯಂತ “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)” ಎಂಬ ಧ್ಯೇಯವಾಕ್ಯದಡಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸೆ.27ರಂದು ಮೈಸೂರಿನ ಜಗನ್ಮೋಹನ್ ಅರಮನೆಯಲ್ಲಿ ಸಾರ್ವಜನಿಕ ಸೀರತ್ ಸಮಾವೇಶ ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

- Advertisement -

ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಮಾವೇಶದಲ್ಲಿ ಟಿ. ನರಸೀಪುರ ತಾಲೂಕಿನ ವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಮಠಾಧಿಪತಿ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮೈಸೂರು ಡಯೋಸಿಸ್‌ನ ಸಂಯೋಜಕ ಫಾ. ಅರುಳ್ ಸೆಲ್ವಕುಮಾರ್ ಹಾಗೂ ಮೈಸೂರಿನ ಸರ್ ಖಾಝಿ ಮೌಲಾನಾ ಮುಹಮ್ಮದ್ ಉಸ್ಮಾನ್ ಶರೀಫ್ ಸಾಹಬ್ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞೆ ಅವರು ಸೀರತ್ ಸಂದೇಶ ನೀಡಲಿದ್ದು, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಬೆಳ್ಗಾಮೀ ಮುಹಮ್ಮದ್ ಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್‌; ಸ್ವಾಗತಕ್ಕೆ ಖುದ್ದು...

ಬರೋಬ್ಬರಿ 11 ವರ್ಷಗಳ ಬಳಿಕ ಅಮೆರಿಕಕ್ಕೆ ಕಾಲಿಟ್ಟಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಖುದ್ದು ತೆರಳಿ ಸ್ವಾಗತಿಸಿದ ಟ್ರಂಪ್‌, ಶ್ವೇತಭವನದಲ್ಲಿ ಅದ್ದೂರಿ ಸರ್ಕಾರಿ ಔತಣ ಆಯೋಜಿಸಿದ್ದಾರೆ. AI, ಅತ್ಯಾಧುನಿಕ ಚಿಪ್‌ಗಳು, ರೇರ್‌...

ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ...

ದೇಶದ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಅತ್ಯಂತ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಈ ಗಂಭೀರವಾದ ವಿಷಯವನ್ನು...

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಸರ್ವಧರ್ಮೀಯರ ನಡುವೆ ಗೌರವ ಅಗತ್ಯ: ಅಬ್ದುಸ್ಸಲಾಮ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಜ. ಅಬ್ದುಸ್ಸಲಾಮ್ ಯು., ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನದ ಅಂಗವಾಗಿ ಸೀರತ್ ಅಭಿಯಾನ ನಡೆಸಲಾಗುತ್ತಿದ್ದು, ಅವರ ಮೌಲ್ಯಯುತ ಬೋಧನೆಗಳು ಹಾಗೂ ಸಾಮಾಜಿಕ ಕೊಡುಗೆಗಳನ್ನು ಸಾರ್ವತ್ರಿಕವಾಗಿ ಪರಿಚಯಿಸುವುದು ಇದರ ಉದ್ದೇಶವಾಗಿದೆ ಎಂದರು.

ಸೀರತ್ ಎಂದರೆ ಕೇವಲ ಪ್ರವಾದಿಯವರ ಜೀವನ ಚರಿತ್ರೆಯಲ್ಲ, ಅವರ ಬದುಕಿನ ಮೌಲ್ಯಗಳು ಮತ್ತು ಸಮಾಜದೊಂದಿಗೆ ಅವರು ನಡೆದುಕೊಂಡ ರೀತಿಯನ್ನು ಅರಿಯುವುದಾಗಿದೆ. ಈ ಹಿನ್ನೆಲೆಯಲ್ಲಿ ಅಭಿಯಾನದ ಭಾಗವಾಗಿ ಸಾಮಾಜಿಕ ಸೇವೆ, ರಕ್ತದಾನ, ವೃದ್ಧಾಶ್ರಮ ಭೇಟಿ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಹಾಗೂ ಮದೀನಾದಲ್ಲಿ ಅವರು ನೀಡಿದ ಸಾಮಾಜಿಕ ಕೊಡುಗೆಗಳನ್ನು ಜನರಿಗೆ ಪರಿಚಯಿಸುವುದರೊಂದಿಗೆ, ಸರ್ವಧರ್ಮೀಯರ ಪಾಲ್ಗೊಳ್ಳುವಿಕೆ ಮತ್ತು ಪರಸ್ಪರ ಧರ್ಮಗಳ ನಡುವೆ ಗೌರವ ಹಾಗೂ ಒಳಗೊಳ್ಳುವಿಕೆಯ ಭಾವನೆ ಬೆಳೆಸುವುದು ಅಭಿಯಾನದ ಆಶಯವಾಗಿದೆ ಎಂದರು.

ಧರ್ಮಗಳ ನಡುವೆ ಗೌರವ ಬೆಳೆಸಬೇಕು: ಕೆ. ದೀಪಕ್

ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಅರಿವು ಬೆಳೆಸುವ ಅಗತ್ಯವಿದೆ. ಯಾವುದೇ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಅನ್ಯ ಧರ್ಮವನ್ನು ಅವಹೇಳನ ಮಾಡುವುದು ಸರಿಯಲ್ಲ. ಎಲ್ಲ ಧರ್ಮಗಳ ಕುರಿತು ತಿಳಿದುಕೊಳ್ಳುವ ಹಾಗೂ ಅವುಗಳಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರವಾದಿ ಮುಹಮ್ಮದ್(ಸ) ಅವರ ಬೋಧನೆಗಳಲ್ಲಿ ಸಮಾನತೆ, ಜ್ಞಾನ, ಸರಳ ಜೀವನ, ಕ್ಷಮೆ ಹಾಗೂ ತಾಳ್ಮೆಯಂತಹ ಮೌಲ್ಯಗಳಿಗೆ ಮಹತ್ವ ನೀಡಲಾಗಿದೆ. ಜಾತಿ-ಬೇಧವನ್ನು ತೊಡೆದುಹಾಕುವುದು ಮತ್ತು ಎಲ್ಲರೂ ಸಮಾನರು ಎಂಬ ಆಶಯಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಧರ್ಮದ ವ್ಯಾಖ್ಯಾನವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಹಾಗೂ ಅನ್ಯ ಧರ್ಮವನ್ನು ಹೀಯಾಳಿಸುವ ಪ್ರವೃತ್ತಿ ಸಮಾಜದ ಆರೋಗ್ಯಕ್ಕೆ ಹಾನಿಕಾರಕ. ಎಲ್ಲ ಧರ್ಮಗಳ ನಡುವೆ ಗೌರವ, ಅಭಿಮಾನ ಮತ್ತು ಸಂಕುಚಿತ ಮನೋಭಾವ ತೊರೆಯುವ ಅಗತ್ಯವಿದೆ ಎಂದು ಹೇಳಿದರು.

ಪ್ರವಾದಿಯವರ ಬದುಕು ಅನುಕರಣೆಗೆ ಮಾದರಿ: ಕಲೀಂ ಅಹಮ್ಮದ್

ಮೆಸ್ಕೊ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕಲೀಂ ಅಹಮ್ಮದ್ ಮಾತನಾಡಿ, ಪ್ರವಾದಿ ಮುಹಮ್ಮದ್(ಸ) ಅವರ ಬದುಕು ಮತ್ತು ಅವರು ನಡೆದುಕೊಂಡ ಹಾದಿಯನ್ನು ಅರಿತುಕೊಳ್ಳುವುದು ಇಂದಿನ ಕಾಲದ ಅಗತ್ಯವಾಗಿದೆ. ತಮ್ಮ ಸಮುದಾಯದ ವ್ಯಕ್ತಿ ತಪ್ಪು ಮಾಡಿದಾಗಲೂ ಸಮರ್ಥಿಸಿಕೊಳ್ಳುವುದು ಕೋಮುವಾದದ ಮನೋಭಾವವಾಗುತ್ತದೆ. ಆದರೆ, ಪ್ರವಾದಿಯವರ ಜೀವನದಲ್ಲಿ ನ್ಯಾಯ, ಮಾನವೀಯತೆ ಹಾಗೂ ಉದಾತ್ತ ಮೌಲ್ಯಗಳಿಗೆ ಆದ್ಯತೆ ನೀಡಿರುವುದನ್ನು ಕಾಣಬಹುದು. ಅವರ ವ್ಯಕ್ತಿತ್ವವನ್ನು ಅರಿತುಕೊಂಡು ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರವಾದಿಯವರು ಸರಳ ಜೀವನಕ್ಕೆ ಒತ್ತು ನೀಡಿದ್ದು, ಕ್ಷಮೆ, ತಾಳ್ಮೆ ಮತ್ತು ಮಾನವೀಯತೆಯಂತಹ ಗುಣಗಳಿಗೆ ಮಹತ್ವ ನೀಡಿದ್ದರು. ಇಂತಹ ಮಹನೀಯರ ವಿಚಾರಗಳನ್ನು ಸಮಾಜದಲ್ಲಿ ಪರಿಚಯಿಸುವ ಕಾರ್ಯ ಅಗತ್ಯವಾಗಿದೆ ಎಂದರು.

ಸಮಾವೇಶಕ್ಕೆ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಗೌರವ ಉಪಸ್ಥಿತರಾಗಲಿದ್ದು, ಸರ್ವಧರ್ಮೀಯ ಸಹೋದರ-ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಈ ವಿಶೇಷ ಸುದ್ದಿ ಓದಿದ್ದೀರಾ? ಶಾಲಾ ದಾಖಲೆ ಪರಿಶೀಲಿಸಿ; ತಿದ್ದುಪಡಿಗೆ ಶಾಲೆ-BEO ಹಂತದವರೆಗೆ ಇರುವ ಮಾರ್ಗವೇನು?

ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ನಗರ ಶಾಖೆ ಅಧ್ಯಕ್ಷ ಜ. ಮುಹಮ್ಮದ್ ಅಸ್ಲಮ್, ಸೀರತ್ ಸಮಾವೇಶ ಸಮಿತಿ ಸದಸ್ಯ ಜ. ನೂರ್ ಮರ್ಚೆಂಟ್ ಜ. ಇಬ್ರಾಹೀಂ ಸೇಠ್, ಜ. ಇಮ್ರಾನ್ ಸಾಹಬ್, ಜ. ಶೇಖ್ ಅಸದುಲ್ಲಾ, ಅಬ್ದುಲ್ ವಾಹಿದ್, ಉಮರ್ ಫಾಝಿಲ್, ಪತ್ರಕರ್ತ ಹಾಗೂ ಸೀರತ್ ಸಮಿತಿ ಸದಸ್ಯ ಮೋಹನ್ ಮೈಸೂರು ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ‘SIR ಪರಿಶೋಧನೆ–ಪ್ರತಿರೋಧ ಪ್ರವಾಸ’ಕ್ಕೆ ಚಾಲನೆ: ಮತದಾನದ ಹಕ್ಕು ರಕ್ಷಣೆಗೆ ಜನಪರ ಹೋರಾಟ

ಮುಂಡಗೋಡ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು...

ಹಾವೇರಿ | ಹತ್ತು ತಾಸು ವಿದ್ಯುತ್ ಕೊಡಲು ರೈತ ಸಂಘ ಮನವಿ

ಬೊಮ್ಮನಹಳ್ಳಿ ಗ್ರೀಡ್ ನಿಂದ ರೈತರ ಬೋರ್ ವೆಲ್ ಪಂಪ್ಲೆಟ್ಟುಗಳಿಗೆ ಸರಿಯಾಗಿ ವಿದ್ಯುತ್...

ಧಾರವಾಡ | ಸೆ. 27ಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ

ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರುಗಳ ಕುಂದುಕೊರತೆಗಳ...