ಧಾರವಾಡ | ಗ್ರಾಹಕಿಗೆ ಠೇವಣಿ ಹಣ ಹಿಂದಿರುಗಿಸದ ಸೊಸೈಟಿಗೆ ದಂಡ

Date:

ಗ್ರಾಹಕರೊಬ್ಬರು ಠೇವಣಿ ಇರಿಸಿದ್ದ ಹಣವನ್ನು, ಅವಧಿ ಮುಗಿದರೂ ಹಿಂದಿರುಗಿಸದೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿದ್ದ ಧಾರವಾಡದ ವಿಕಾಸ್ ಅರ್ಬನ್ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸೊಸೈಟಿಗೆ ಗ್ರಾಹಕ ಆಯೋಗ ದಂಡ ವಿಶಿದಿದೆ. ಠೇವಣಿ ಹಣ ಮತ್ತು ಅದಕ್ಕೆ 13.5% ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿದೆ.

- Advertisement -

ಧಾರವಾಡದ ಕಮಲಾಪುರ ನಿವಾಸಿ ಅನ್ನಪೂರ್ಣಾಹುಲ್ಲಮನಿ ಎಂಬವರು ಸೊಸೈಟಿಯಲ್ಲಿ 2020ರಲ್ಲಿ 1.5 ಲಕ್ಷ ರೂ. ಮತ್ತು 2021ರಲ್ಲಿ 1 ಲಕ್ಷ ರೂ. ಹಣವನ್ನು ಒಂದು ವರ್ಷದ ಅವಧಿಗೆ ಠೇವಣಿ ಇಟ್ಟಿದ್ದರು. ಎರಡೂ ಠೇವಣಿಗಳ ಅವಧಿ ಮುಗಿದ ಬಳಿಕ, ಹಣ ಮತ್ತು ಬಡ್ಡಿಯ ಕೊತ್ತವನ್ನು ನೀಡುವಂತೆ ಸೊಸೈಟಿಗೆ ಕೇಳಿದ್ದರು. ಆದರೆ, ಸೊಸೈಟಿ ಹಣ ನೀಡಿರಲಿಲ್ಲ. ಹೀಗಾಗಿ, ಅನ್ನಪೂರ್ಣ ಅವರು ಸೊಸೈಟಿ ವಿರುದಧ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಸೊಸೈಟಿಗೆ ದಂಡ ವಿಧಿಸಿದ್ದಾರೆ. “ಕರಾರಿನಂತೆ ಬಡ್ಡಿ ಸಮೇತ ಠೇವಣಿ ಹಣವನ್ನು ಹಿಂದಿರುಗಿಸುವುದು ಸೊಸೈಟಿ ಕರ್ತವ್ಯ. ಆದರೆ, ಅವಧಿ ಮುಗಿದು ಎರಡು ವರ್ಷಗಳೇ ಕಳೆದಿದ್ದರೂ ಹಣ ನೀಡದೇ ಇರುವುದು ಅಕ್ಷಮ್ಯವಾಗಿದೆ” ಎಂದು ಹೇಳಿದ್ದಾರೆ.

“ಸೊಸೈಟಿಯು ಎರಡೂ ಠೇವಣಿಗಳ ಒಟ್ಟು 2.5 ಲಕ್ಷ ರೂ. ಮತ್ತು ಠೇವಣಿ ಇಟ್ಟಾಗಿನಿಂದ ಇಂದಿನವರೆಗೆ 13.5% ಬಡ್ಡಿದರದಲ್ಲಿ ಬಡ್ಡಿಯನ್ನೂ ದೂರುದಾರ ಗ್ರಾಹಕಿಗೆ ನೀಡಬೇಕು. ಅಲ್ಲದೆ, ಆಕೆಯ ಅನುಭವಿಸಿರುವ ಮಾನಸಿಕ ಹಿಂಸೆಗೆ ಪರಿಹಾರವಾಗಿ 25,000 ರೂ. ಹಾಗೂ ಪ್ರಕರಣದ ವೆಚ್ಚಕ್ಕಾಗಿ 10,000 ರೂ. ನೀಡಬೇಕು” ಎಂದು ಆದೇಶ ಹೊರಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...