ಉಡುಪಿ | ಮನೆ ಮಾಲೀಕನ ಮೇಲೆ ಆಸಿಡ್ ದಾಳಿ, ತಲವಾರಿನಿಂದ ಕೊ*ಲೆಗೆ ಯತ್ನ ; ಆರೋಪಿಯ ಬಂಧನ

Date:

ಮನೆ ಬಾಡಿಗೆಯ ಮುಂಗಡ ಹಣದ ವಿಚಾರದಲ್ಲಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, ಮನೆ ಮಾಲೀಕನ ಮೇಲೆ ಆಸಿಡ್ ದಾಳಿ ನಡೆಸಿ, ತಲವಾರಿನಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಡುಪಿ ನಗರದ ಕಲ್ಕೂರು ಬಿಲ್ಡಿಂಗ್‌ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ನಿನ್ನೆ ನಡೆದಿದೆ.

- Advertisement -

ಘಟನೆಯಲ್ಲಿ ಗಾಯಗೊಂಡಿರುವ ಬುಡ್ನಾರು ಕುಂಜಿಬೆಟ್ಟು ನಿವಾಸಿ ನವೀನ್ ಕುಮಾರ್ (58) ಅವರು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯ ಸುಟ್ಟಗಾಯಗಳ ಚಿಕಿತ್ಸಾ ವಿಭಾಗದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುರೇಶ್ ಆಚಾರ್ಯ (48) ಎಂಬಾತನನ್ನು ಉಡುಪಿ ನಗರ ಪೊಲೀಸರು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ನವೀನ್ ಕುಮಾರ್ ಅವರು ಕಲ್ಕೂರು ಬಿಲ್ಡಿಂಗ್‌ನ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ವಿಷ್ಣುಮೂರ್ತಿ ನಗರದ ತಮ್ಮ ಮನೆಯ ಮೊದಲ ಮಹಡಿಯನ್ನು ಸುರೇಶ್ ಆಚಾರ್ಯ ಅವರಿಗೆ ಬಾಡಿಗೆಗೆ ನೀಡಿದ್ದರು. ಬಾಡಿಗೆದಾರರು ಮನೆ ಖಾಲಿ ಮಾಡಿದ್ದು, ಮುಂಗಡವಾಗಿ ನೀಡಿದ್ದ 20 ಸಾವಿರ ರೂ. ಹಣದ ವಿಚಾರದಲ್ಲಿ ಇಬ್ಬರ ನಡುವೆ ವಿವಾದ ಉಂಟಾಗಿತ್ತು.

ಮನೆ ಪರಿಶೀಲಿಸಿದಾಗ ಗೋಡೆ ಮತ್ತು ಟ್ಯಾಪ್‌ಗಳಿಗೆ ಹಾನಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಎರಡು ತಿಂಗಳ ಬಾಡಿಗೆ ಹಾಗೂ ದುರಸ್ತಿ ವೆಚ್ಚವನ್ನು ಮುಂಗಡ ಹಣದಿಂದ ಕಡಿತಗೊಳಿಸುವುದಾಗಿ ನವೀನ್ ಕುಮಾರ್ ತಿಳಿಸಿದ್ದರು. ಇದಕ್ಕೆ ಒಪ್ಪದ ಸುರೇಶ್ ಆಚಾರ್ಯ, ಸಂಪೂರ್ಣ 20 ಸಾವಿರ ರೂ. ಹಣವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಅ.23ರಂದು ನವೀನ್ ಕುಮಾರ್ ಅವರ ಅಂಗಡಿಗೆ ಬಂದು ಬೆದರಿಕೆ ಹಾಕಿ ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸಿಡ್ ಎರಚಿ, ತಲವಾರಿನಿಂದ ದಾಳಿಗೆ ಯತ್ನ

ಅ.28ರಂದು ಸಂಜೆ ಸುಮಾರು 3.30ರ ವೇಳೆಗೆ ನವೀನ್ ಕುಮಾರ್ ಅವರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸುರೇಶ್ ಆಚಾರ್ಯ ಅಲ್ಲಿಗೆ ಬಂದು ಮುಂಗಡ ಹಣದ ವಿಚಾರವಾಗಿ ಜಗಳವಾಡಿದ್ದಾನೆ. ಬಳಿಕ ಹೊರಗೆ ಹೋಗಿ ಸ್ಕೂಟರ್‌ನಿಂದ ಬಾಟಲಿ ಹಾಗೂ ದೊಡ್ಡ ತಲವಾರನ್ನು ತಂದು, ಬಾಟಲಿಯಲ್ಲಿದ್ದ ದ್ರವವನ್ನು ಆಸಿಡ್ ಎಂದು ಹೇಳಿ ನವೀನ್ ಕುಮಾರ್ ಅವರ ಮೈಮೇಲೆ ಎರಚಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಆಸಿಡ್ ಹಾಕಿ ಸುಟ್ಟು ಕೊಂದುಬಿಡುವುದಾಗಿ ಹಾಗೂ ತಲವಾರಿನಿಂದ ಕಡಿದುಹಾಕುವುದಾಗಿ ಬೆದರಿಕೆ ಹಾಕಿ, ತಲವಾರಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ನವೀನ್ ಕುಮಾರ್ ಅವರು ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಬಲಗೈ, ಎಡಗೈ, ಸೊಂಟ, ಹೊಟ್ಟೆ, ಪಾದ ಹಾಗೂ ಮುಖದ ಭಾಗಗಳಲ್ಲಿ ಸುಟ್ಟಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವಿಶೇಷ ತಂಡದಿಂದ ಆರೋಪಿಯ ಬಂಧನ

ಘಟನೆಗೆ ಸಂಬಂಧಿಸಿದಂತೆ ನವೀನ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 124(1) ಮತ್ತು 109ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಪತ್ತೆಹಚ್ಚಲು ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ, ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಶಿವಳ್ಳಿ ಗ್ರಾಮದ ಎಂ.ಜಿ.ಎಂ. ಮೈದಾನದ ಸಮೀಪ ಸುರೇಶ್ ಆಚಾರ್ಯನನ್ನು ವಶಕ್ಕೆ ಪಡೆದಿದೆ.

ಆರೋಪಿಯ ಬಳಕೆಯಲ್ಲಿದ್ದ ಬಿಳಿ ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್ (KA 20 EK 6450) ಹಾಗೂ ಕೃತ್ಯಕ್ಕೆ ಬಳಸಿದ ತಲವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಸುರೇಶ್ ಆಚಾರ್ಯ ವಿಪರೀತ ಮದ್ಯವ್ಯಸನಿಯಾಗಿದ್ದು, ಪ್ರಸ್ತುತ ಮನೆಯಲ್ಲಿಯೇ ಚಿನ್ನ-ಬೆಳ್ಳಿಯ ಕುಸುರಿ ಕೆಲಸ ಮಾಡಿಕೊಂಡಿದ್ದಾನೆ. ಇದರೊಂದಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಆಗಿಯೂ ಅರೆಕಾಲಿಕ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ರಶ್ಮಿ ಎಸ್.ಆರ್ ನೇಮಕ 

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ರಶ್ಮಿ ಎಸ್.ಆರ್. ಅವರನ್ನು ವರ್ಗಾವಣೆ ಮಾಡಿ...

ಶ್ರೀನಿವಾಸಪುರ | ರೈತರ ಮೇಲೆ ದೌರ್ಜನ್ಯ ಆರೋಪ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದ ದಲಿತ ರೈತರ ಮೇಲಿನ...

ವಿಜಯಪುರ | ಜನನ–ಮರಣ ನೋಂದಣಿಯಲ್ಲಿ ಲೋಪಕ್ಕೆ ಅವಕಾಶ ಬೇಡ: ಡಿಸಿ ಆನಂದ ಕೆ. ಸೂಚನೆ

ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ಘಟನೆ...

ಬಾಗಲಕೋಟೆ | ಕಲಾದಗಿಯಲ್ಲಿ 12 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿ ಜಪ್ತಿಗೆ ಸೂಚನೆ

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕಲಾದಗಿ ಪಟ್ಟಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ...