ಹಾವೇರಿ | ಎಸ್ಐಆರ್ ರದ್ದು, ಜ್ಞಾನೇಶಕುಮಾರ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

Date:

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ವಿರೋಧಿಸಿ ಹಾಗೂ ಜ್ಞಾನೇಶಕುಮಾರ ರಾಜೀನಾಮೆ ನೀಡುವಂತೆ ಹಾವೇರಿ ಪಟ್ಟಣದಿಂದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

- Advertisement -

ಪ್ರತಿಭಟನೆಯಲ್ಲಿ ಶಿಗ್ಗಾವಿ ಕ್ಷೇತ್ರದ ಶಾಸಕರು ಯಾಸಿರ್ ಅಹಮದ್ ಖಾನ್ ಪಠಾಣ್ ಮಾತನಾಡಿ, “ಪ್ರಧಾನಮಂತ್ರಿ ಮೋದಿ ಗೆಳೆಯರು, ಜಗತ್ತಿನ ಯಾರ ಯಾರ ತಲೆ ಮೇಲೆ ಕೈಇಟ್ಟಿದ್ದಾರೋ ರೆ ಅವರು ಈಗ ಮನೆಗೆ ಹೋಗಿದ್ದಾರೆ‌. ಈಗ ಎಸ್ಐಆರ್ ಮೂಲಕ ಮತಗಳನ್ನು ಕದ್ದು, ಅಧಿಕಾರಿಕೆ ಬರುತ್ತಿದ್ದಾರೆ. ಈಡೀ ಭಾರತದಲ್ಲಿ ಎಸ್ಐಆರ್ ವಿರೋಧಿಸಿ, ಜ್ಞಾನೇಶಕುಮಾರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿ ಜ್ಞಾನೇಶಕುಮಾರ ಇರುವವರೆಗೂ ಅವರ ಮೇಲೆ ಏನು ಆಗದಂತೆ ಕಾಯ್ದೆಯನ್ನು ತಂದಿದ್ದಾರೆ. ಹೀಗೆ ಮಾಡಿಕೊಂಡು ಮತಗಳನ್ನು ಕಳುವು‌ ಮಾಡುತ್ತಿದ್ದಾರೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಘದ ʼಕಾವಿ ದಲ್ಲಾಳಿʼಗಳ ಬಗ್ಗೆ ಲಿಂಗಾಯತರಲ್ಲಿ ಎಚ್ಚರ ಅಗತ್ಯ

ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ನಾಮ ಮಾರ್ಗಗಳನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಕುಟುಂಬವನ್ನು ಹಿನ್ನೆಲೆಗೆ ಸರಿಸಿ, ಲಿಂಗಾಯತ ಪ್ರಾಬಲ್ಯವನ್ನು...

ಕ್ಯಾನ್ವಾದಲ್ಲಿ 1,271 ಉದ್ಯೋಗಿಗಳ ವಜಾ: ಸಾಫ್ಟ್‌ವೇರ್ ಉದ್ಯಮಕ್ಕೆ ‘AI’...

2013ರಲ್ಲಿ ಆರಂಭವಾದ ಕ್ಯಾನ್ವಾ, ವೃತ್ತಿಪರ ಗ್ರಾಫಿಕ್ ವಿನ್ಯಾಸದ ಯಾವುದೇ ತಾಂತ್ರಿಕ ಪರಿಣತಿ ಅಥವಾ ಅನುಭವವಿಲ್ಲದ ಸಾಮಾನ್ಯರಿಗೂ ಪೋಸ್ಟರ್‌ಗಳು, ಪ್ರೆಸೆಂಟೇಷನ್‌ಗಳು, ಸಾಮಾಜಿಕ ಮಾಧ್ಯಮದ ಚಿತ್ರಗಳು, ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವ ಅವಕಾಶವನ್ನು...

ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ,...

ಅಡುಗೆ ಮನೆಯ ದಿನನಿತ್ಯದ ಅಗತ್ಯವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ಮತ್ತು...

“ಮೋದಿ ಅವರು ಅಧಿಕಾರಿಗೆ ಬರುವಾಗ ಎರಡು ಕೋಟಿ ಉದ್ಯೋಗ ಕೋಡುತ್ತೇವೆಂದು ಹೇಳಿದ್ದು ಸುಳ್ಳಾಗಿದೆ. ಇಂತಹ ಅನೇಕ ಸುಳ್ಳುಗಳನ್ನು ಹೇಳುತ್ತಲೇ ಅಧಿಕಾರ ಬಂದರು. ಈಗ ಎಸ್ಐಆರ್ ಮೂಲಕ ಅರ್ಹ ಮತದಾರರನ್ನು ತಗೆಯುತ್ತಿದ್ದಾರೆ. ಹೀಗೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮೊದಲನೇ ಸ್ವಾತಂತ್ರ್ಯ ಸಂಗ್ರಾಮ ಈ ದೇಶದಿಂದ ಬ್ರಿಟೀಷರನ್ನು ಹೋಡಿಸಲಿಕ್ಕೆ ನಡೆಯಿತು. ಈಗ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಸ್ಐಆರ್ ವಿರುದ್ದ ನಡೆಯುತ್ತಿದ” ಎಂದು ಎಂದು ಹೇಳಿದರು.

ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, “ಡಾ. ಬಿ.ಆರ್.ಅಂಬೇಡ್ಕರ ಈ ದೇಶಕ್ಕೆ ಕೊಟ್ಟ ಸಂವಿಧಾನದ ಮೂಲಕ ಎಲ್ಲರಿಗೂ ಒಂದೇ ಸಮಾನ ಹಕ್ಕು ಮತದಾನದ ಹಕ್ಕನ್ನು ಕೊಟ್ಟಿದ್ದಾರೆ. ಯಾರು ನಿಜವಾಗಲೂ ಮನಸ್ಸಿನಿಂದ ತೀರ್ಮಾಣ ಮಾಡುವಂತಹ ಮತದಾರರ ಹಕ್ಕನ್ನು ಕಸಿದುಕೊಂಡು, ಬೇರೆಯವರಿಂದ ಮತದಾನ ಹಾಕಿಸಿ ಚುನಾವಣೆಯ ಪರಿಣಾಮವನ್ನ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನದ ವಿರುದ್ದ ನಡೆದುಕೊಳ್ಳುವ ರೀತಿಯಲ್ಲಿ ದೇಶದ ಚುನಾವಣೆ ಆಯೋಗ ಮುಖ್ಯ ಆಯುಕ್ತ ಜ್ಞಾನೇಶಕುಮಾರ ಸಹಾಯದಿಂದ ಈ ರೀತಿ ದೇಶದಲ್ಲಿ ನಡೆಯುತ್ತಿದೆ.

1004236695

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಪ್ರಸ್ತಾವಿಕ ಮಾತನಾಡಿ, “ನಮ್ಮ ಪಕ್ಷದ ಹಿರಿಯ ಮುಖಂಡರುಮಲ್ಲಕಾರ್ಜುನ ಖರ್ಗೆ ಆದೇಶದ ಮೇರೆಗೆ, ರಾಹುಲ್ ಗಾಂಧಿ ಸೂಚನೆಯಂತೆ ಎಸ್ಐಆರ್ ರದ್ದುಗೊಳಿಸುವಂತೆ ಹಾಗೂ ಚುನಾವಣಾ ಮುಖ್ಯಾಧಿಕಾರಿ ಜ್ಞಾನೇಶಕುಮಾರ ರಾಜೀನಾಮೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಎಲ್ಲ ಜಿಲ್ಲಾ ಕೆಂದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಹಾವೇರಿಯಲ್ಲಿಯೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.

“ಕರ್ನಾಟದಲ್ಲಿ ಎಸ್ಐಆರ್ ಆರಂಭವಾಗಿ ಮುಗಿದಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ಮತದಾರರ ಪಟ್ಟಿಯನ್ನು ಸಿದ್ದ ಪಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಲೋಪ ದೋಷಗಳು ಕಂಡು ಬಂದಿದ್ದು, ಅರ್ಹ ಮತದಾರರನ್ನು ಎಸ್ಐಆರ್ ಮೂಲಕ ಮೋದಿ, ಅಮಿತ್ ನಿರ್ದಶನದಂತೆ ಮತದಾರರ ಪಟ್ಟಿಯಿಂದ ತಗೆದು ಹಾಕುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ದೆಹಲಿಗೆ ಕಾಂಗ್ರೆಸ್ ಕಾರ್ಯಕರ್ತರು ದೇಶದಾದ್ಯಂತ ಬಂದಿದ್ದು, ಈಡೀ ಮೈದಾನವೇ ತುಂಬಿದೆ. ಎಸ್ಐಆರ್ ಅನ್ನು ವಿರೋಧಿಸುತ್ತಿಲ್ಲ, ಹಿಂದೆ ನಮ್ಮ ಸರ್ಕಾರವೂ ಮಾಡಿದ್ದು, ಇವರ ಹಾಗೆ ಮಾಡಿಲ್ಲ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳ ಮತದಾರರನ್ನು ಗುರಿಯಾಗಿಸಿ ಅವರ ಮತಗಳನ್ನು ಅರ್ಹ ಪಟ್ಟಿಯಿಂದ ತಗೆಯಲಾಗುತ್ತಿದೆ. ಈ ಮತದಾರರು ಕಾಂಗ್ರೇಸ್ ಮೂಲ ಮತಗಳಾಗಿದ್ದು, ಉವರನ್ನೇ ತಗೆದು, ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

ಶಾಸಕ ಬಸವರಾಜ ಶಿವಣ್ಣನವರ, ಹೆಸ್ಕಾಂ ಆದ್ಯಕ್ಷರು ಅಂಜಪ್ಪೀರ್ ಖಾದ್ರಿ ಪ್ರತಿಭಟನೆಯಲ್ಲಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡರು ಅಂದಾನಿಗೌಡ, ಮಹಿಳಾ ಕಾಂಗ್ರಸ್ ಅಧ್ಯಕ್ಷ ಕುಮಾರಿ ವಸಂತ, ಎಮ್.ಎಮ್. ಹಿರೇಮಠ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಮ್.ಎಮ್ಮ.ಮೇದೂರ. ಯುವ ಘಟಕದ ಅಧ್ಯಕ್ಷ ದರ್ಶನ ಲಮಾಣಿ, ಮಹದೇವಗೌಡ ಗಾಜೀಗೌಡ್ರ, ಚಂದ್ರಣ್ಣ, ಬಸವರಾಜ ಹೆಡೆಗೊಂಡ, ದಾಸಪ್ಪ ಕರ್ಜಗಿ, ಕೃಷ್ಣಪ್ಪ ಕಂಬಳಿ, ಶ್ರೀಧರ ದೊಡ್ಡಮನಿ, ರಮೇಶ ಹರಿಜನ, ಗುಡ್ಡಪ್ಪ ಜಲ್ದಿಯವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು‌

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಯುವತಿ ಸಾವು : ಠಾಣೆ ಎದುರು ಪ್ರತಿಭಟನೆ 

ವಿಷ ಸೇವಿಸಿ ಯುವತಿ ಸಾವನಪ್ಪಿರುವ ಘಟನೆ ಬಗ್ಗೆ ಠಾಣೆ ಮುಂದೆ ಪ್ರತಿಭಟನೆ...

ಚಿಕ್ಕಮಗಳೂರು | ಸೈಬರ್ ವಂಚನೆ: 1.68 ಲಕ್ಷ ಹಣ ದುರ್ಬಳಕೆ

ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಹೋದ ಮೊಬೈಲ್ ಫೋನನ್ನು...

ಹಾಸನ | ದಲಿತರ ಭೂಮಿ, ಶಿಕ್ಷಣ, ಉದ್ಯೋಗ ಘನತೆಯ ಬದುಕಿನ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲಿ; ಡಿಎಚ್‌ಎಸ್

ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ದಲಿತರ ಭೂಮಿ, ಶಿಕ್ಷಣ, ವಸತಿ ಮತ್ತು...