ಮುಂಡಗೋಡ | ನೀರು ತುಂಬಲು ಮೋಟಾರ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

Date:

ಮನೆಯ ಮುಂದಿನ ನಳದಲ್ಲಿ ನೀರು ತುಂಬಲು ಮೋಟಾರ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ 21 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮುಂಡಗೋಡ ತಾಲೂಕಿನ ಪಾಳಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಆಯಿಷಾ ಮಹಮ್ಮದಸಲೀಂ ಬೇಗ್ (21) ಎಂದು ಗುರುತಿಸಲಾಗಿದೆ.

- Advertisement -

ಇವರು ಮನೆಕೆಲಸ ಮಾಡಿಕೊಂಡಿದ್ದರು. ಪೊಲೀಸ್ ದೂರಿನ ಪ್ರಕಾರ, ಬೆಳಿಗ್ಗೆ ಸುಮಾರು 7.30ರ ವೇಳೆಗೆ ಮನೆಯ ಮುಂದಿನ ನಳದಲ್ಲಿ ನೀರು ಬಂದಾಗ ಆಯಿಷಾ ಅವರು ನೀರು ತುಂಬಲು ಬಕೆಟ್ ಇಟ್ಟಿದ್ದರು. ಬಳಿಕ ಮನೆಯಲ್ಲಿದ್ದ ಮೋಟಾರ್ ಅನ್ನು ಬಕೆಟ್‌ನಲ್ಲಿ ಇಟ್ಟು ವಿದ್ಯುತ್ ಸ್ವಿಚ್ ಹಾಕುವ ಸಂದರ್ಭದಲ್ಲಿ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ. ಇದರಿಂದ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ಇತ್ತ ಬೆಲೆ ಏರಿಕೆಯ ‘ಬರೆ’, ಅತ್ತ 1 ಟ್ರಿಲಿಯನ್‌...

ಒಂದೆಡೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ ಸರ್ಕಾರ "ಟ್ರಿಲಿಯನ್ ಡಾಲರ್ ಆರ್ಥಿಕತೆ"ಯ ಭವ್ಯ ಚಿತ್ರಣವನ್ನು ಸಾರ್ವಜನಿಕರ ಮುಂದಿಡುತ್ತಿವೆ. ಸದ್ಯ ಕರ್ನಾಟಕದಲ್ಲಿ ಕಂಡುಬರುತ್ತಿರುವ...

ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗರ್ವಭಂಗ: ಸೊಕ್ಕು ಮುರಿದ...

ಈ ಚುನಾವಣಾ ಫಲಿತಾಂಶದಿಂದ ಟ್ರಂಪ್ ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ. ಆದರೆ, ಮುಂದಿನ ಜನವರಿ 3ರಂದು ಹೊಸ ಕಾಂಗ್ರೆಸ್ (ಸಂಸತ್ತು) ಅಸ್ತಿತ್ವಕ್ಕೆ ಬಂದ ಬಳಿಕ ಅವರ ಆಡಳಿತದ ಹಾದಿ ಅತ್ಯಂತ ದುರ್ಗಮವಾಗಲಿದೆ....

ಈ ಸುದ್ದಿ ಓದಿದ್ದೀರಾ? ದಾಂಡೇಲಿ | ನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿ ಕಳಪೆ: ತನಿಖೆ ನಡೆಸಿ ಕ್ರಮಕ್ಕೆ ಡಿ. ಸ್ಯಾಮ್ಸನ್ ಆಗ್ರಹ

ತಕ್ಷಣ ಅವರನ್ನು ಪಾಳಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಮುಂಡಗೋಡ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಪರಿಶೀಲಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದರು.

ಮೃತರ ತಂದೆ ಶಬ್ಬೀರಸಾಬ ಸುಲೇಮಾನಸಾಬ (55) ಅವರು ನೀಡಿದ ದೂರಿನ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 194ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಮ್ಮ ಮಗಳ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಯುವತಿ ಸಾವು : ಠಾಣೆ ಎದುರು ಪ್ರತಿಭಟನೆ 

ವಿಷ ಸೇವಿಸಿ ಯುವತಿ ಸಾವನಪ್ಪಿರುವ ಘಟನೆ ಬಗ್ಗೆ ಠಾಣೆ ಮುಂದೆ ಪ್ರತಿಭಟನೆ...

ಚಿಕ್ಕಮಗಳೂರು | ಸೈಬರ್ ವಂಚನೆ: 1.68 ಲಕ್ಷ ಹಣ ದುರ್ಬಳಕೆ

ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಹೋದ ಮೊಬೈಲ್ ಫೋನನ್ನು...

ಹಾಸನ | ದಲಿತರ ಭೂಮಿ, ಶಿಕ್ಷಣ, ಉದ್ಯೋಗ ಘನತೆಯ ಬದುಕಿನ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲಿ; ಡಿಎಚ್‌ಎಸ್

ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ದಲಿತರ ಭೂಮಿ, ಶಿಕ್ಷಣ, ವಸತಿ ಮತ್ತು...