ಕವಿತಾಳ ಪಟ್ಟಣದ ಮದರಸಾ ದಾರುಲ್ ಹುಫ್ರಾಜ್ ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆರು ಶಿಕ್ಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯಲ್ಲಿ 12 ವರ್ಷಗಳಿಂದ ಕಲಿಯುತ್ತಿರುವ ತನ್ನ ಮಗ ಅಹ್ಮದ್ ಹುಸೇನ್‌ಗೆ ಸರಿಯಾಗಿ ಓದಲು ಬರುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕ ಅಬ್ಬಾಸ್ ಬಾಯಿಗೆ ಬಟ್ಟೆ ತುರುಕಿ, ಕಣ್ಣಿಗೆ ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಬಾಲಕನ ತಂದೆ ಅಬ್ದುಲ್ ನಹೀಂ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ಶಿಕ್ಷಕರಾದ ಹಾಜಂ ಮುಮುರಿ, ಹುಸೇನ್ ಮುಮುರಿ, ಜಯೀದ್, ಖುದರತುಲ್ಲಾ ಹಾಗೂ ಇಮ್ರಾನ್ ಶೇಖ್ ಅವರು ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೂ ತತ್ವಾರ; ರೋಗಿಗಳ ಪರದಾಟ!
ಈ ಸಂಬಂಧ ತಂದೆ ನೀಡಿದ ದೂರಿನ ಮೇರೆಗೆ ಆರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




