ರಾಯಚೂರು | ಬಾಲಕಿಯರ ಹಾಸ್ಟೆಲ್ ನಲ್ಲಿಅವ್ಯವಸ್ಥೆ; ವಾರ್ಡನ್ ಅಮಾನತಿಗೆ ಎಸ್‌ಎಫ್‌ಐ ಒತ್ತಾಯ

Date:

  • ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಎಸ್ಎಫ್ಐ ಮನವಿ.
  • ಕನಿಷ್ಠ ಮೂಲಭೂತ ಸೌಕರ್ಯ ಒದಗಿಸದ ವಾರ್ಡನ್ ಅಮಾನತಿಗೆ ಒತ್ತಾಯ

ರಾಯಚೂರು ಜಿಲ್ಲೆಯ ಲಿಂಗಸಗೂರು ಬಾಲಕಿಯರ ಹಾಸ್ಟಲ್ ವಾರ್ಡನ್ ನಾಗರತ್ನ ಅವರನ್ನು ಅಮಾನತುಗೊಳಿಸಿ ಹಾಸ್ಟೇಲ್ ಸಮಸ್ಯೆಗಳನ್ನು ಸರಿಪಡಿಸುವಂತೆ ಎಸ್‌ಎಫ್‌ಐ ಒತ್ತಾಯಿಸಿದೆ.

ಈ ಕುರಿತು ಬೆಂಗಳೂರನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರಾಕೇಶ್ ಕುಮಾರ್ ಕೆ. ಅವರಿಗೆ ರಾಯಚೂರು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಅವರು ಹಕ್ಕೊತ್ತಾಯ ಸಲ್ಲಿಸಿದರು.

ಲಿಂಗಸಗೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ (ಪದವಿ) ವಸತಿ ನಿಲಯದಲ್ಲಿ ಮೆನು ಚಾಟ್ ಹಾಕದೆ ಸರಿಯಾದ ಸಮಯಕ್ಕೆ ಊಟ ಸ್ವಚ್ಛತೆ ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಹಾಸ್ಟೇಲ್ ನಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಒದಗಿಸುತ್ತಿಲ್ಲ. ಇಂಥ ವಿದ್ಯಾರ್ಥಿ ವಿರೋಧಿ ವಾರ್ಡನ್ ಗೆ ಕೂಡಲೇ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕಳೆದ ಜುಲೈನಲ್ಲಿ ಲಿಂಗಸಗೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅಲ್ಲದೆ ಬೆಂಗಳೂರಿಗೆ ಬಂದು ಆಯುಕ್ತರಿಗೂ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಜಿಲ್ಲೆಯ ಡಿಡಿ ಹಾಗೂ ನೋಡಲ್ ಅಧಿಕಾರಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ತಿಂಗಳು ಕಳೆದರೂ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದೇ ಅನಿವಾರ್ಯವಾಗಿ ಹಾಸ್ಟೆಲ್ ನಲ್ಲಿ ದಿನಗಳೆಯುವಂತಾಗಿದೆ.
ಇಲಾಖೆ ಪ್ರಕಟಿಸಿದ ಫುಡ್ ಚಾಟ ಹಾಕದೆ ದಿನನಿತ್ಯ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಊಟದಲ್ಲಿ ಕನಿಷ್ಠ ತರಕಾರಿ ಬೆಳೆ ಕಾಳು ಏನೂ ಇರುವುದಿಲ್ಲ. ಪ್ರತಿಭಟನೆಯ ನಂತರವೂ ಹಾಸ್ಟೆಲ್‌ ನಲ್ಲಿ ಯಾವ ಸಮಸ್ಯೆಗಳು ಬಗೆಹರಿದಿಲ್ಲ. ಹಾಸ್ಟೆಲ್ ನಲ್ಲಿ ಸಾಮರ್ಥ್ಯಕ್ಕಿಂತಲೂ 150 ವಿದ್ಯಾರ್ಥಿಗಳು ಹೆಚ್ಚುವರಿ ಆಗಿದ್ದು, ಇನ್ನೊಂದು ಕಟ್ಟಡಕ್ಕೆ 150 ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುವುದೆಂದು ಭರವಸೆ ಕೊಟ್ಟು ಒಂದುವರೆ ತಿಂಗಳು ಕಳೆದರೂ ಇಲ್ಲಿಯವರೆಗೂ ಸ್ಥಳಾಂತರ ಮಾಡುವ ಪ್ರಯತ್ನ ನಡೆಸಿಲ್ಲ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ ? ರಾಯಚೂರು | ಶಿಕ್ಷಕ ಹುದ್ದೆಗೆ ಆಯ್ಕೆಯಾದ ಯುವಕ; ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ

“ಕರ್ತವ್ಯ ಲೋಪ ಎಸಗಿದ ವಾರ್ಡನ್ ನಾಗರತ್ನಾ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಈ ಹಾಸ್ಟೇಲ್ ಸೇರಿ ಜಿಲ್ಲೆಯ ಎಲ್ಲಾ ಹಾಸ್ಟೇಲ್ ಗಳಲ್ಲಿ ಮೆನು ಚಾಟ್ ಹಾಕಿ ಗುಣಮಟ್ಟದ ಆಹಾರ ನೀಡಬೇಕು. ಶುಚಿ ಕಿಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಬೇಕು. ಗ್ರಂಥಾಲಯ ವ್ಯವಸ್ಥೆ ಮಾಡಬೇಕು. 100 ವಿಧ್ಯಾರ್ಥಿಗಳು ವಸತಿ ಇರಬೇಕಿದ್ದ ಹಾಸ್ಟೇಲ್ ನಲ್ಲಿ 300 ವಿದ್ಯಾರ್ಥಿಗಳಿರುವುದು ಅವೈಜ್ಞಾನಿಕವಾಗಿದ್ದು, ಒಂದಿಷ್ಟು ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಶಿಫ್ಟ್ ಮಾಡಬೇಕು. ಶೌಚಾಲಯಗಳ ಅವ್ಯವಸ್ಥೆ ಸರಿಪಡಿಸಬೇಕು. ಬಾಲಕಿಯರಿಗೆ ಶುಚಿ ನ್ಯಾಪ್ಕಿನ್ ಒದಗಿಸಬೇಕು. ಹಾಸ್ಟೇಲ್ ಕಾವಲುಗಾರ ನೇಮಕ ಮಾಡಬೇಕು. ಶುದ್ದ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕು” ಎಂದು ಆಗ್ರಹಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ತಳಮಟ್ಟದಲ್ಲಿ ಗಟ್ಟಿಯಾಗಿಸಬೇಕಿದೆ: ರಮೇಶ್ ವೀರಾಪೂರು

ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ತಳಮಟ್ಟದಲ್ಲಿ ಗಟ್ಟಿಯಾಗಿ ಮುನ್ನಡೆಸಬೇಕಾದ...

ರಾಯಚೂರು | ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧ; ಖಂಡನೆ

ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ಏಪ್ರಿಲ್ 14ರಂದು ರಾಯಚೂರು ಜಿಲ್ಲೆಯ...

ರಾಯಚೂರು | ಬಿಜೆಪಿ ಸಭೆಯಲ್ಲಿ ಗಲಾಟೆ; ನಗರಸಭೆ ಸದಸ್ಯನ ಮೇಲೆ ಹಲ್ಲೆ ಯತ್ನ

ಬಿಜೆಪಿ ಪಕ್ಷದಿಂದ ರಾಯಚೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಘಟನಾತ್ಮಕ...

ರಾಯಚೂರು | ʼಬಿಜೆಪಿಗೆ ಏಕೆ ಮತಹಾಕಬೇಕು?’ ಪ್ರಶ್ನೆಯೊಂದಿಗೆ ಕಾಂಗ್ರೆಸ್ ಅಭಿಯಾನ

ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ...