ದಾವಣಗೆರೆ | ದೇಶದ ಜನರಿಗೆ ನ್ಯಾಯಾಂಗದಲ್ಲಿ ಅಪಾರ ಗೌರವ, ಪ್ರೀತಿ ಇದೆ: ನಿವೃತ್ತ ನ್ಯಾ. ನಾಗಮೋಹನ್ ದಾಸ್

Date:

ದೇಶದ ಜನರಿಗೆ ನ್ಯಾಯಾಂಗದ ಮೇಲೆ ಅಪಾರ ಗೌರವ ಮತ್ತು ಪ್ರೀತಿ ಇದೆ ಎಂದು ವಿಶ್ರಾಂತ ನ್ಯಾ. ಎಚ್ ಎನ್ ನಾಗಮೋಹನ್ ದಾಸ್ ಹೇಳಿದರು.

ದಾವಣಗೆರೆ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ವಕೀಲರ ಭವನದಲ್ಲಿ ಜಿಲ್ಲಾ ವಕೀಲರ ಸಂಘ, ಆರ್ ಎಲ್ ಕಾನೂನು ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ʼಯುವ ವಕೀಲರ ಮುಂದಿರುವ ಸವಾಲುಗಳು ಹಾಗೂ ಸಾಧ್ಯತೆಗಳುʼ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

“ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂತು. 1950ರಲ್ಲಿ ಲಿಖಿತ ಸಂವಿಧಾನದ ಮೂಲಕ ಗಣರಾಜ್ಯ ನಿರ್ಮಾಣವಾಯಿತು. ಸಂವಿಧಾನದಡಿಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಅಸ್ತಿತ್ವಕ್ಕೆ ಬಂದಿದೆ. ಅದರಲ್ಲಿ ನ್ಯಾಯಾಂಗ ವ್ಯವಸ್ಥೆ ಬಹಳಷ್ಟು ಬಲಿಷ್ಠವಾಗಿದೆ. ಅನೇಕ ಕಾರಣಗಳಿಂದಾಗಿ ಶಾಸಕಾಂಗ, ಕಾರ್ಯಾಂಗದ ಮೇಲಿನ ಜನರ ನಂಬಿಕೆ ಕಡಿಮೆಯಾಗಿದೆ. ನ್ಯಾಯಾಂಗದಿಂದ ನ್ಯಾಯ ದೊರೆಯುವ ವಿಶ್ವಾಸದಿಂದ ಈಗಲೂ ಜನರು ವಿಶ್ವಾಸ ಉಳಿಸಿಕೊಂಡಿದ್ದಾರೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈ ದೇಶದಲ್ಲಿ 25 ಸಾವಿರ ಮಂದಿ ನ್ಯಾಯಾಧೀಶರು, 20 ಲಕ್ಷ ಮಂದಿ ವಕೀಲರು, 4-5 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಕ್ತಿ ವ್ಯಕ್ತಿಗಳ ನಡುವೆ ಇರುವ ವ್ಯಾಜ್ಯ ಇತ್ಯರ್ಥ ಮಾಡುವುದು. ವ್ಯಕ್ತಿ ಮತ್ತು ಸರಕಾರದ ನಡುವೆ ಇರುವ ವ್ಯಾಜ್ಯ ಇತ್ಯರ್ಥ ಮಾಡುವುದು, ಶಾಸಕಾಂಗ ರಚನೆ ಮಾಡಿದ ಕಾನೂನು ವ್ಯಾಖ್ಯಾನ ಮಾಡುವುದು. ಸಂವಿಧಾನ ವಿರುದ್ಧವಾಗಿ ನಡೆದರೆ ಅದನ್ನು ರದ್ದು ಮಾಡುವ ಅಧಿಕಾರವನ್ನು ನ್ಯಾಯಾಂಗ ಹೊಂದಿದೆ. ತಪ್ಪು ಮಾಡಿದ ವ್ಯಕ್ತಿಗೆ ದಂಡ ಹಾಕುವ, ಜೈಲಿಗೆ ಕಳುಹಿಸುವ, ನೇಣಿಗೆ ಏರಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಕಳೆದ 75 ವರ್ಷದಲ್ಲಿ ನ್ಯಾಯಾಂಗ ಮಾಡಿದ ಕೆಲಸಗಳಿಗೆ ಗೌರವ, ವಿಶ್ವಾಸ ಪ್ರೀತಿ ಇಟ್ಟಿದ್ದಾರೆ” ಎಂದರು.

ಸರ್ವೋಚ್ಚ ನ್ಯಾಯಾಲವು ವರ್ಷಕ್ಕೆ 70 ಸಾವಿರ ಪ್ರಕರಣ ಇತ್ಯರ್ಥ ಮಾಡುತ್ತಿದೆ. ದೇಶದ ಹೈಕೋರ್ಟ್‌ಗಳು ವಾರ್ಷಿಕ 20 ಲಕ್ಷ ಪ್ರಕರಣ ಇತ್ಯರ್ಥ ಮಾಡುತ್ತಿವೆ. ತಾಲೂಕು, ಜಿಲ್ಲಾದ್ಯಂತ 1.70 ಕೋಟಿ ಪ್ರಕರಣಗಳನ್ನು ಇತ್ಯರ್ಥ ಮಾಡಿವೆ. ಜಗತ್ತಿನ ಯಾವ ನ್ಯಾಯಾಲಯಗಳೂ ಇಷ್ಟೊಂದು ಪ್ರಕರಣ ಇತ್ಯರ್ಥ ಮಾಡಿದ ಇತಿಹಾಸವೇ ಇಲ್ಲ. ಆದರೆ, ಭಾರತದ ನ್ಯಾಯಾಂಗಗಳು ಮಾತ್ರ ಆ ಕೆಲಸ ಮಾಡಿವೆ” ಎಂದರು.

“ಭಾರತದ ಸಂವಿಧಾನ ಉಳಿದಿದೆ ಎಂದರೆ ಅದು ಭಾರತದ ನ್ಯಾಯಾಂಗ ತೀರ್ಪುಗಳಿಂದ ಕೇಶವಾನಂದ ಭಾರತಿ ಪ್ರಕರಣ ತೀರ್ಪು ಇಲ್ಲದೇ ಇರದಿದ್ದರೆ ಸಂವಿಧಾನ ಉಳಿಯುತ್ತಿರಲಿಲ್ಲ. ಕಳೆದ 75 ವರ್ಷಗಳಲ್ಲಿ ಸುಪ್ರಿಂ ಕೋರ್ಟ್ ಮತ್ತು ಹೈಕೋರ್ಟಿನ ತೀರ್ಪುಗಳು ದೇಶದ ಜನರಿಗೆ ಬಹುದೊಡ್ಡ ಕೊಡುಗೆ ನೀಡಿವೆ. ಸುಪ್ರಿಂಕೋರ್ಟ್ ತೀರ್ಪುಗಳು ಅಮೆರಿಕಾ, ಇಂಗ್ಲೆಂಡ್ ಮತ್ತು ಅಸ್ಟ್ರೇಲಿಯಾದ ಕೋರ್ಟ್‌ಗಳಲ್ಲಿಯೂ ಚರ್ಚೆಗೆ ಬರುತ್ತಿವೆ” ಎಂದು ಹೇಳಿದರು.

“ದೇಶದ ಮುಂದೆ 5 ಕೋಟಿ ಪ್ರಕರಣಗಳು ಬಾಕಿ ಇವೆ. ಪ್ರತಿ ದಿನ ಪ್ರಕರಣಗಳು ಬರುತ್ತಿವೆ. ಇದರಿಂದ ನ್ಯಾಯಾಂಗದಲ್ಲಿ ವಿಳಂಬ ಆಗುತ್ತಿದೆ. ಇಲ್ಲಿ ಭ್ರಷ್ಟಚಾರ ಆರಂಭವಾಗುತ್ತದೆ. ಇದರಿಂದ ಪ್ರಜಾಪ್ರಭುತ್ವ ಬಲಹೀನವಾಗುತ್ತದೆ. ನ್ಯಾಯಾಂಗದ ಮೇಲಿನ ನಂಬಿಕೆ ಇಲ್ಲದಾಗುತ್ತದೆ. ಇದರಿಂದ ದೇಶದಲ್ಲಿ ಆರಾಜಕತೆ ಉಂಟಾಗುತ್ತದೆ. ಎಲ್ಲ ಸರ್ಕಾರಗಳು ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತವೆ. ಇದು ಭಾರತಕ್ಕೆ ಸ್ವಾತಂತ್ರ್ಯ ಬಂದ ಅವಧಿಯಿಂದಲೂ ನಡೆದಿದೆ. ಈಗ ಸ್ವಲ್ಪ ಹೆಚ್ಚಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಒತ್ತಾಯ

“ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಹೈಕೋರ್ಟ್‌ ನ್ಯಾಯವಾದಿ ಅನಂತ ನಾಯಕ್, ವಕೀಲರಾದ ಕೆ ಎಚ್ ಪಾಟೀಲ್, ಆರ್‌ಎಲ್ ಲಾ ಕಾಲೇಜಿನ ಪ್ರಾಚಾರ್ಯ ಡಾ. ಜಿ ಎಸ್‌ ಯತೀಶ್, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ ಎಚ್ ಅರುಣ್‌ ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಎಸ್ ಬಸವರಾಜ, ಉಪಾಧ್ಯಕ್ಷ ಜಿ ಕೆ ಬಸವರಾಜ್ ಗೋಪನಾಳು, ಸಹ ಕಾರ್ಯದರ್ಶಿ ಎ ಎಸ್‌ ಮಂಜುನಾಥ್, ಶ್ರೀನಿವಾಸ್ ಬಂಡ್ರಿ, ಅನೀಸ್ ಪಾಷಾ, ಎಂ ಡಿ ರಾಮಚಂದ್ರಪ್ಪ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...

ಗೈರು ಹಾಜರಾದ ಮತಗಟ್ಟೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ: ಬಿಬಿಎಂಪಿ ಮುಖ್ಯ ಆಯುಕ್ತ

ಲೋಕಸಭಾ ಚುನಾವಣೆ ಹಿನ್ನೆಲೆ, ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕ್ಕೊಂಡಿರುವ ತರಬೇತಿಗೆ ಗೈರು ಹಾಜರಾದವರ...

ರಾಯಚೂರು | ಎಸ್‌ಯುಸಿಐ ಅಭ್ಯರ್ಥಿ ರಾಮಲಿಂಗಪ್ಪ ನಾಮಪತ್ರ ಸಲ್ಲಿಕೆ

ರಾಯಚೂರು-ಯಾದಗಿರಿ ಒಳಗೊಂಡ ರಾಯಚೂರು ಲೋಕಸಭಾ (ಪ.ಪಂ) ಕ್ಷೇತ್ರದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ...

ಗದಗ | ತಾಲೂಕು ಆಡಳಿತದಿಂದ ‘ಮೇವು ಬ್ಯಾಂಕ್’ ಆರಂಭ; ಕೆ.ಜಿಗೆ 2 ರೂ. ದರ ನಿಗದಿ

ಕೊಣ್ಣೂರು : ಜಾನುವಾರುಗಳಿಗೆ ಮೇವು ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವು...