ವಿದ್ಯಾರ್ಥಿಗಳು ತಮ್ಮೊಳಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಬಾಲಮೇಳ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ. ಮಕ್ಕಳಿಗೆ ಕಲಿಯುವ ವಯಸ್ಸಿನಲ್ಲಿ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟು, ಪ್ರೋತ್ಸಾಹಿಸುವ ಸೇವೆ ಶ್ಲಾಘನಿಯ ಎಂದು ರಾಯಚೂರು ಜಿಲ್ಲಾ ಪಂಚಾಯತ್ ಡಿಎಸ್‌ಒ ಶಶಿಕಾಂತ್ ಶಿವಪುರೆ ಅಭಿಪ್ರಾಯಪಟ್ಟರು.
ರಾಯಚೂರು ಜಿಲ್ಲೆ ಮಾನ್ವಿ ನಗರದ ಲಯೋಲ ಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಬಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಬಣ್ಣ ಬಣ್ಣದ ಉಡುಗೆ ತೊಟ್ಟು, ಮಕ್ಕಳ ಮುಗ್ಧ ಮುಖದಲ್ಲಿ ಸಂತಸ ಸಂಭ್ರಮ ಮನೆ ಮಾಡಿತ್ತು. 22 ಹಳ್ಳಿಗಳ ಕಲಿಕಾ ಕೇಂದ್ರದ ಮಕ್ಕಳು ಬಾಲಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು 20 ತರಹದ ವಿವಿಧ ಆಟಗಳು ಮತ್ತು ಮಕ್ಕಳಿಗಾಗಿ ಪ್ರಂಬಂಧ, ಆಶುಭಾಷಣ, ಚೆಸ್, ಚಿತ್ರಕಲೆ ಮತ್ತು ಇಂಗ್ಲೀಷ್ ಟಂಗ್ ಟ್ವಿಸ್ಟರ್ ಸ್ಪರ್ಧೆಗಳನ್ನೂ ಕೂಡಾ ಆಯೋಜಿಸಲಾಗಿತ್ತು. ಆಟೋಟಗಳಲ್ಲಿ ಭಾಗವಹಿ ಸೋಲು ಗೆಲುವು ಆತಂಕವಿಲ್ಲದೇ ಸ್ಪರ್ಧೆಗಳಲ್ಲಿ ತೊಡಗಿದ್ದರು.
ಕಳೆದ ಹದಿನೈದು ವರ್ಷಗಳಿಂದ ಲೊಯೋಲ ಸಂಸ್ಥೆಯು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನಡೆಸುವಂತಹ ಕಲಿಕಾ ಕೇಂದ್ರಗಳ ಮಕ್ಕಳ ಪ್ರತಿಭೆಯನ್ನು ಹೊರ ತರಲು ಬಾಲಮೇಳ ಮುಗ್ದ ಮನಸುಗಳ ಕಲರವ ವೇದಿಕೆಯನ್ನು ರೂಪಿಸಿ ಕಾರ್ಯಕ್ರಮ ಆಯೋಜಿಸುತ್ತಿದೆ. ಎಲ್ಲ ಮಕ್ಕಳೂ ಮುಗ್ದ ಮನಸ್ಸಿನಿಂದ ಎಲ್ಲರೊಂದಿಗೂ ಬೆರೆತು ಯಾರಿಗಿಂತ ಯಾರೂ ಕಡಿಮೆ ಇಲ್ಲವೆಂಬಂತೆ ನಾನಾ ಆಟೋಟಗಳಲ್ಲಿಯೂ ಮುಕ್ತವಾಗಿ ಪಾಲ್ಗೊಂಡು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಂಭ್ರಮಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಮಾಜಿ ಶಾಸಕರ ಆರೋಪಕ್ಕೆ ಕಾಂಗ್ರೆಸ್ ಮುಖಂಡ ಧರ್ಮಜ ಉತ್ತಪ್ಪ ತಿರುಗೇಟು
ಈ ಸಂದರ್ಭದಲ್ಲಿ ಬೆಂಗಳೂರಿನ ಸಂತ ಜೊಸೇಫರ ಕಾನೂನು ಕಾಲೇಜ್ ವಿದ್ಯಾರ್ಥಿಗಳು ಮತ್ತು ಲೊಯೋಲ ಸಂಸ್ಥೆಯ ಶಿಕ್ಷಕರು ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.
ವರದಿ : ಮರಿಯಪ್ಪ