ಪಾರ್ಕ್ ಜಾಗ ಒತ್ತುವರಿ: ಬಿಡದಿ ಪುರಸಭೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

Date:

ರಾಮನಗರದ ಬಿಡದಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಭೂಮಿಯ ಬೆಲೆ ಗಗನಕ್ಕೇರುತ್ತಿದ್ದಂತೆ ರಿಯಲ್ ಎಸ್ಟೇಟ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಸಾರ್ವಜನಿಕ ಉದ್ಯಾನವನಕ್ಕೆಂದು ಮೀಸಲಿಟ್ಟಿದ್ದ ಜಾಗವನ್ನು ಖಾಸಗಿ ಬಡಾವಣೆಯ ರಸ್ತೆಗಾಗಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

- Advertisement -

“ಬಿಡದಿ ಪುರಸಭೆ ವ್ಯಾಪ್ತಿಯ 8ನೇ ವಾರ್ಡ್‌ನಲ್ಲಿ ನಡೆಯುತ್ತಿರುವ ಅಕ್ರಮ ಒತ್ತುವರಿಗೆ ಖುದ್ದು ಪುರಸಭೆ ಅಧಿಕಾರಿಗಳೇ ಸಾಥ್ ನೀಡಿದ್ದು, ಪ್ರಕರಣ ಇದೀಗ ರಾಮನಗರ ಲೋಕಾಯುಕ್ತದ ಮೆಟ್ಟಿಲೇರಿದೆ” ಎಂದು ಸಿಸ್ತಾ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್ ಹೆಚ್ ರಾಜಶೇಖರ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಬಿಡದಿಯ ಕೇತಿಗಾನಹಳ್ಳಿ ಸರ್ವೇ ನಂಬರ್ 20 ಮತ್ತು 21/6ರ 3 ಎಕರೆ 15 ಗುಂಟೆ ವಿಸ್ತೀರ್ಣದಲ್ಲಿ ಸಿಸ್ತಾ ಬಡಾವಣೆ ನಿರ್ಮಾಣವಾಗಿದೆ. ನಿಯಮಾನುಸಾರ ಈ ಬಡಾವಣೆಯಲ್ಲಿ 1,798 ಚದರ ಅಡಿ ಜಾಗವನ್ನು ಉದ್ಯಾನವನಕ್ಕೆ ಮೀಸಲಿಡಲಾಗಿದೆ. ​ಆದರೆ, ಈ ಲೇಔಟ್ ಪಕ್ಕದಲ್ಲೇ ಸರ್ವೇ ನಂಬರ್ 22/4ರಲ್ಲಿ ನಿರ್ಮಾಣವಾಗಿರುವ ‘ಅಮೀರ್ ಜಾನ್ ಲೇಔಟ್’ನ ಕೆಲವು ನಿವೇಶನಗಳಿಗೆ ರಸ್ತೆ ಸಂಪರ್ಕವಿಲ್ಲ. ಹೀಗಾಗಿ, ತಮ್ಮ ನಿವೇಶನಗಳಿಗೆ ದಾರಿ ಮಾಡಿಕೊಳ್ಳಲು ಅಮೀರ್ ಜಾನ್ ಲೇಔಟ್‌ನ ಮಾಲೀಕರು ಸಿಸ್ತಾ ಬಡಾವಣೆಯ ಪಾರ್ಕ್ ಜಾಗವನ್ನು ಅತಿಕ್ರಮಿಸಿ ಜೆಸಿಬಿ ಮೂಲಕ ಗುಂಡಿ ತೋಡಿ, ಚರಂಡಿ ಹಾಗೂ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ.

ಬಿಡದಿ ಪಾರ್ಕ್‌ ಜಾಗ ಒತ್ತುವರಿ

​”ಅಮೀರ್ ಜಾನ್ ಲೇಔಟ್(ಸರ್ವೇ ನಂಬರ್ 22/4) ಒಟ್ಟು 1 ಎಕರೆ 15 ಗುಂಟೆ (59,895 ಚದರ ಅಡಿ) ವಿಸ್ತೀರ್ಣ ಹೊಂದಿದೆ. ಆದರೆ, ನಕ್ಷೆಯಲ್ಲಿ ಅಕ್ರಮವಾಗಿ 42 ನಿವೇಶನಗಳನ್ನು ತೋರಿಸಲಾಗಿದೆ. ಈ ಕಳ್ಳ ಲೆಕ್ಕಾಚಾರವೇ ಮಾಫಿಯಾಗೆ ಹಿಡಿದ ಕೈಗನ್ನಡಿ” ​ಎಂದಿದ್ದಾರೆ.

ನಿವೇಶನಗಳ ಒಟ್ಟು ಅಳತೆ: “42 ನಿವೇಶನಗಳು × 1200 ಚದರ ಅಡಿ = 50,400 ಚದರ ಅಡಿ. ​ರಸ್ತೆಗೆ ಬೇಕಾದ ಜಾಗ 16,800 ಚದರ ಅಡಿ. ​ಬೇಕಾಗಿರುವ ಒಟ್ಟು ಜಾಗ 67,200 ಚದರ ಅಡಿ. ಆದರೆ ​ಲಭ್ಯವಿರುವ ಜಾಗ ಕೇವಲ 59,895 ಚದರ ಅಡಿಯಿದೆ. ​ಕೊರತೆಯಿರುವ ಜಾಗ ಬರೋಬ್ಬರಿ 7,305 ಚದರ ಅಡಿ. ​ನಿವೇಶನಗಳ ಅಳತೆಗೂ, ಆಕಾರ್ ಬಂದ್‌ನಲ್ಲಿ ನಮೂದಿಸಿರುವ ಅಳತೆಗೂ ಯಾವುದೇ ಹೊಂದಾಣಿಕೆಯಿಲ್ಲ. ಇದರಿಂದಾಗಿ ನಿವೇಶನ ಸಂಖ್ಯೆ 15 ರಿಂದ 21ರ ವರೆಗಿನ ಸೈಟುಗಳಿಗೆ ವಾಸ್ತವದಲ್ಲಿ ಯಾವುದೇ ರಸ್ತೆಯಿಲ್ಲ. ನಕ್ಷೆಯಲ್ಲಿ ಕೇವಲ ನಾಮಕಾವಸ್ತೆಗೆ ರಸ್ತೆ ಎಂದು ತೋರಿಸಿ, ಪಕ್ಕದ ಸಿಸ್ತಾ ಬಡಾವಣೆಯ ಪಾರ್ಕ್ ಜಾಗವನ್ನು ಕಬಳಿಸಲು ಸಂಚು ರೂಪಿಸಲಾಗಿದೆ” ಎನ್ನಲಾಗುತ್ತಿದೆ.

​”ರಸ್ತೆಯೇ ಇಲ್ಲದ ಸೈಟೊಂದನ್ನು ರಾಜಕೀಯ ಪ್ರಭಾವಿಯೊಬ್ಬರು ಕೇವಲ 25 ಲಕ್ಷ ರೂ. ಮೌಲ್ಯ ತೋರಿಸಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ, ಕೇವಲ ಮೂರು ದಿನಗಳ ಅಂತರದಲ್ಲಿ ಅದೇ ಜಾಗವನ್ನು ಬರೋಬ್ಬರಿ 1 ಕೋಟಿ 8 ಲಕ್ಷ ರೂಪಾಯಿಗೆ ಬೇರೊಬ್ಬರಿಗೆ ಮಾರಾಟ ಮಾಡುವ ಮೂಲಕ ಭಾರೀ ಹಣಕಾಸು ಅವ್ಯವಹಾರ ನಡೆಸಲಾಗಿದೆ” ಎಂಬ ಮಾಹಿತಿ ಸಾರ್ವಜನಿಕರ ನಡುವೆ ಹರಿದಾಡುತ್ತಿದೆ.

​”ನಿಯಮಗಳ ಪ್ರಕಾರ, ಬಡಾವಣೆಯಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ ನಂತರವಷ್ಟೇ ಅಧಿಕಾರಿಗಳು ಇ-ಖಾತೆ ಮಾಡಿಕೊಡಬೇಕು. ಆದರೆ, ಅಮೀರ್ ಜಾನ್ ಲೇಔಟ್‌ನ 19 ಮತ್ತು 20ನೇ ನಂಬರ್ ನಿವೇಶನಗಳಿಗೆ ಸ್ಥಳದಲ್ಲಿ ರಸ್ತೆಯೇ ಇಲ್ಲದಿದ್ದರೂ, ಬಿಡದಿ ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಹಾಗೂ ಆರ್‌ಒ ನಂಜುಂಡಸ್ವಾಮಿ ಕಚೇರಿಯಲ್ಲೇ ಕುಳಿತು, ಸ್ಥಳ ಪರಿಶೀಲನೆಯನ್ನೂ ನಡೆಸದೆ ಕಾನೂನುಬಾಹಿರವಾಗಿ ಇ-ಖಾತೆ ಮಾಡಿಕೊಟ್ಟಿದ್ದಾರೆ. ಈ ಭ್ರಷ್ಟಾಚಾರದ ವಿರುದ್ಧ ರಾಮನಗರ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ” ಎಂದು ರಾಜಶೇಖರ್ ತಿಳಿಸಿದರು.

ಬಿಡದಿ ಪಾರ್ಕ್‌ ಜಾಗ ಒತ್ತುವರಿ 1

​”ಈ ಅಕ್ರಮದ ಕುರಿತು ಸಿಸ್ತಾ ಬಡಾವಣೆ ಕ್ಷೇಮಾಭಿವೃದ್ಧಿ ಸಂಘವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು. ಡಿಸಿ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಪುರಸಭೆ ಎಂಜಿನಿಯರ್‌ಗಳು, ಪಾರ್ಕ್ ಜಾಗದ ಗಡಿ ಗುರುತಿಸಿ ಕಲ್ಲು ನೆಟ್ಟು ಹೋಗಿದ್ದರು. ಅದೇ ರಾತ್ರಿ ಕಲ್ಲುಗಳನ್ನು ಕಿತ್ತೆಸೆದು ರಸ್ತೆ ಕಾಮಗಾರಿ ಮುಂದುವರಿಸಿದ್ದು, ಪ್ರಕರಣವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕಾಮಗಾರಿಯನ್ನು ತಡೆಹಿಡಿಯಲಾಗಿತ್ತು. ಆದರೆ, ಪ್ರಭಾವಿಗಳ ಕುಮ್ಮಕ್ಕಿನಿಂದ ಇದೀಗ ಮತ್ತೆ ರಸ್ತೆ ಕಾಮಗಾರಿ ಆರಂಭವಾಗಿದೆ” ಎಂದು ಕ್ಷೇಮಾಭಿವೃದ್ಧಿ ಸಂಘದವರು ದೂರಿದರು.

ಇದನ್ನೂ ಓದಿದ್ದೀರಾ? ವಿಜಯನಗರ | ದಶಕಗಳಿಂದ ಗುಡಿಸಲಲ್ಲಿದ್ದ ಗಣಿ ಬಾಧಿತರು: ವಸತಿ ಸಿಗುವ ಕಾಲ ಸನ್ನಿಹಿತ

“ನಮ್ಮ ಸಿಸ್ತಾ ಬಡಾವಣೆಯಲ್ಲಿ ಪಾರ್ಕ್ ಜಾಗಕ್ಕೆಂದು ಬಿಟ್ಟಿರುವ 1,798 ಅಡಿಗಳ ಜಾಗದಲ್ಲಿ ಪಕ್ಕದ ಲೇಔಟ್‌ನವರು ಅಕ್ರಮವಾಗಿ ರಸ್ತೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದೇವೆ. ಸ್ಥಳ ಪರಿಶೀಲನೆ ಮಾಡದೆ ರಸ್ತೆ ಇಲ್ಲದಿದ್ದರೂ ಇ-ಖಾತೆ ಮಾಡಿಕೊಟ್ಟ ಪುರಸಭೆ ಅಧಿಕಾರಿಗಳ ವಿರುದ್ಧವೂ ದೂರು ನೀಡಲಾಗಿದೆ. ಈ ಕೂಡಲೇ ನಮ್ಮ ಉದ್ಯಾನವನದ ಸ್ಥಳದಲ್ಲಿ ನಾಮಫಲಕ ಅಳವಡಿಸಿ, ಪಾರ್ಕ್ ಅಭಿವೃದ್ಧಿಪಡಿಸಬೇಕು” ಎಂಬುದು ದೂರುದಾರರ ಒತ್ತಾಯವಾಗಿದೆ.

ಬಿಡದಿ ಪಾರ್ಕ್‌ ಜಾಗ ಒತ್ತುವರಿ 2

ವರದಿ : ಜಗದೀಶ್‌ ನಗರಕೆರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ಪಟ್ಟು: ಹೋರಾಟಕ್ಕೆ ಸೋನಮ್ ವಾಂಗ್‌ಚುಕ್ ಬೆಂಬಲ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಹೊಣೆಗಾರಿಕೆ ಮತ್ತು...

ಬೀದರ್‌ | ಸೆ.29ರಂದು ನೀರು, ಬರ, ಪರಿಸರ ಕುರಿತು ವಿಚಾರ ಸಂಕಿರಣ

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಮ್...

ಬೀದರ್‌ | ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ಶಿಲ್ಪಿಗಳು: ಪುಣ್ಯವತಿ ವಿಸಾಜಿ

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ...

ಬೀದರ್‌ | ಅಂಬೇಡ್ಕರ್ ಚಿಂತನೆ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಲಿ: ಸಿದ್ರಾಮ ಸಿಂಧೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ...