ಶಿವಮೊಗ್ಗ | ಹುಲಿ ಸಿಂಹಧಾಮಕ್ಕೆ ಶೀಘ್ರದಲ್ಲೇ ಹೊಸ ಅತಿಥಿಗಳ ಆಗಮನ

Date:

ಶಿವಮೊಗ್ಗ, ಪ್ರಾಣಿಗಳ ವಿನಿಮಯ ಕಾರ್ಯಕ್ರಮದಲ್ಲಿ ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮೂರು ಹುಲಿ ಮತ್ತು ಎರಡು ಸಿಂಹಗಳು ಆಗಮಿಸಲಿವೆ. ಇದರಿಂದ ಹುಲಿ ಮತ್ತು ಸಿಂಹಧಾಮ ಇನ್ನಷ್ಟು ಜನಾಕರ್ಷಣೆಯ ಕೇಂದ್ರವಾಗಲಿದೆ.

- Advertisement -

ತ್ಯಾವರೆಕೊಪ್ಪ ಹುಲಿ, ಸಿಂಹಧಾಮ ರಾಜ್ಯದ ಪ್ರಮುಖ ಸಫಾರಿ ಹಾಗೂ ಮೃಗಾಲಯವಾಗಿದ್ದು ಇಲ್ಲಿ ಹುಲಿ, ಸಿಂಹಗಳ ಸಫಾರಿ ಇದ್ದು, ನಂತರದ ದಿನಗಳಲ್ಲಿ ಕಾಡುಕೋಣ, ಜಿಂಕೆಗಳ ಸಫಾರಿಯನ್ನೂ ಪ್ರಾರಂಭಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ದೇಶದ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ನಡೆಯುತ್ತಿರುತ್ತದೆ. ಕೆಲವು ಮೃಗಾಲಯಗಳು ತಮ್ಮಲ್ಲಿರುವ ಹೆಚ್ಚುವರಿ ಪ್ರಾಣಿಗಳ ವಿವರ ಹಂಚಿಕೊಳ್ಳುತ್ತವೆ. ಜೊತೆಗೆ, ತಮಗೆ ಬೇಕಿರುವ ಪ್ರಾಣಿಗಳ ಪಟ್ಟಿ ನೀಡುತ್ತವೆ. ನಂತರ ಮೃಗಾಲಯಗಳ ನಡುವೆ ಒಪ್ಪಂದ ನಡೆದು ಪ್ರಾಣಿಗಳ ವಿನಿಮಯ ನಡೆಯುತ್ತದೆ.

ಇದರಂತೆ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮೂರು ಹುಲಿ ಹಾಗೂ ಎರಡು ಸಿಂಹಗಳು ಆಗಮಿಸುತ್ತಿವೆ. ಇದಕ್ಕಾಗಿ ಎರಡು ಮೃಗಾಲಯಗಳ ಮುಖ್ಯಸ್ಥರು ಹಾಗೂ ವೈದ್ಯರು ಅಲ್ಲಿನ ಮೃಗಾಲಯಕ್ಕೆ ಹೋಗಿ ಪ್ರಾಣಿಗಳ ಆರೋಗ್ಯ ಗಮನಿಸಿಕೊಂಡು ಬರುತ್ತಾರೆ. ಪ್ರತ್ಯೇಕ ಗೇಜ್​ಗಳನ್ನು ನಿರ್ಮಿಸಿ ಪ್ರಾಣಿಗಳ ವಿನಿಮಯ ಮಾಡಲಾಗುತ್ತದೆ.ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ನಾಲ್ಕು ಹೆಣ್ಣು ಹುಲಿಗಳಿವೆ. ಈಗ ಮತ್ತೆ ಮೂರು ಹುಲಿಗಳು ಬಂದರೆ ಒಟ್ಟು 7 ಹುಲಿಗಳಾಗುತ್ತವೆ. ಇಲ್ಲಿಂದ ಎರಡು ಸಿಂಹಗಳು ಹೋಗಿ ಎರಡು ಸಿಂಹಗಳು ಆಗಮಿಸಲಿವೆ.‌

1002005414

ತ್ಯಾವರೆಕೊಪ್ಪ ಹುಲಿ ಸಿಂಹಧಾಮದಿಂದ ಹೋಗುವ ಪ್ರಾಣಿಗಳು

ತ್ಯಾವರೆಕೊಪ್ಪ ಹುಲಿ ಸಿಂಹಧಾಮದಿಂದ 2 ಸಿಂಹ, 2 ನರಿ, 1 ಕರಡಿ , 2 ಆಸ್ಟ್ರಿಚ್ ಪಕ್ಷಿಗಳು ಹಾಗೂ 4 ಕಾಡುಕೋಣಗಳು ಔರಂಗಾಬಾದ್ ಹಾಗೂ ಇಂದೋರ್ ಮೃಗಾಲಯಕ್ಕೆ ರವಾನೆಯಾಗಲಿವೆ.ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಕಾರ್ಯಕಾರಿ ನಿರ್ದೇಶಕರಾದ ಅಮರಾಕ್ಷರ ಅವರು ಪ್ರತಿಕ್ರಿಯಿಸಿ, “ಪ್ರಾಣಿಗಳ ವಿನಿಮಯ ಯೋಜನೆಯಡಿ ಹುಲಿ ಮತ್ತು ಸಿಂಹಗಳನ್ನು ತರುತ್ತಿದ್ದೇವೆ. ಔರಂಗಾಬಾದ್ ಹಾಗೂ ಇಂದೋರ್ ಮೃಗಾಲಯದಿಂದ ನಮಗೆ ಪ್ರಾಣಿಗಳ ಬರುವಿಕೆ ಆಗುತ್ತದೆ. ಇಂದೋರ್ ಮೃಗಾಲಯದಿಂದ ಎರಡು ಸಿಂಹಗಳು ಬರುತ್ತಿವೆ.

ಅದೇ ರೀತಿ ಔರಂಗಾಬಾದ್ ಮೃಗಾಲಯದಿಂದ ಮೂರು ಹುಲಿಗಳು ಬರುತ್ತಿವೆ. ಇದರಲ್ಲಿ ಎರಡು ರಾಯಲ್ ಬೆಂಗಾಲ್, ಒಂದು ಬಿಳಿ ಹುಲಿ ಸೇರಿದೆ. ಇದಕ್ಕಾಗಿ ನಾವು ನಮ್ಮ ಮೃಗಾಲಯದಿಂದ ನಾಲ್ಕು ಕಾಡುಕೋಣಗಳು ಹಾಗೂ ಎರಡು ಆಸ್ಟ್ರಿಚ್ ಪಕ್ಷಿ, ಎರಡು ಸಿಂಹ, ಎರಡು ನರಿ ಹಾಗೂ ಕರಡಿಗಳನ್ನು ನೀಡುತ್ತಿದ್ದೇವೆ” ಎಂದು ತಿಳಿಸಿದರು.

“ಕಳೆದ ಏಪ್ರಿಲ್‌ನಲ್ಲಿ​ ನಾವು ಮಾತುಕತೆ ಪ್ರಾರಂಭಿಸಿದ್ದೆವು. ಪ್ರಾಣಿಗಳು ಬಹುದೂರದವರೆಗೂ ಪ್ರಯಾಣ ಮಾಡಬೇಕಾಗಿರುವುದರಿಂದ ಸಾಗಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಆಗಸ್ಟ್​ ಮಧ್ಯದಲ್ಲಿ ಔರಂಗಾಬಾದ್​ಗೆ ನಾನು ಮತ್ತು ಸಿಂಹಧಾಮದ ವೈದ್ಯರು ಇಲ್ಲಿಗೆ ಬರಲಿರುವ ಪ್ರಾಣಿಗಳ ಆರೋಗ್ಯದ ಕುರಿತು ಮಾಹಿತಿ ಪಡೆಯಲು ತೆರಳುತ್ತಿದ್ದೇವೆ.

ಅದೇ ರೀತಿ ಅಲ್ಲಿನವರೂ ನಮ್ಮ ಹುಲಿ ಮತ್ತು ಸಿಂಹಧಾಮಕ್ಕೆ ಆಗಮಿಸುತ್ತಿದ್ದಾರೆ. ಪ್ರಾಣಿಗಳ ಆರೋಗ್ಯದ ಮಾಹಿತಿ ಪಡೆದ ನಂತರ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾಣಿಗಳು ಬರಲಿವೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...