ಹೆಂಡತಿ ಬೇರೆ ಗಂಡಸಿನೊಂದಿಗೆ ಮಾತನಾಡಿದರೆ ವಿವಾಹೇತರ ಸಂಬಂಧದ ಆರೋಪ ಮಾಡುವುದು ಕ್ರೌರ್ಯ: ಜಾರ್ಖಂಡ್ ಹೈಕೋರ್ಟ್

Date:

ಹೆಂಡತಿ ತನ್ನ ಗಂಡನ ಮೊಬೈಲ್ ಫೋನ್ ಬಳಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದ್ದಾಳೆ ಎನ್ನುವ ಏಕೈಕ ಕಾರಣಕ್ಕೆ ಆಕೆಗೆ ವಿವಾಹೇತರ ಸಂಬಂಧವಿದೆ ಎಂದು ಆಧಾರರಹಿತವಾಗಿ ಆರೋಪಿಸುವುದು ಪತ್ನಿಯ ಮೇಲಿನ ಮಾನಸಿಕ ಕ್ರೌರ್ಯವಾಗುತ್ತದೆ. ಅಲ್ಲದೆ, ಇಂತಹ ಅನುಮಾನದ ಮನಸ್ಥಿತಿಯು ಸಮಾಜದಲ್ಲಿರುವ ‘ಲಿಂಗ ಆಧಾರಿತ ಸಾಂಪ್ರದಾಯಿಕ ಪೂರ್ವಾಗ್ರಹ’ವನ್ನು ಬಿಂಬಿಸುತ್ತದೆ ಎಂದು ಜಾರ್ಖಂಡ್ ಹೈಕೋರ್ಟ್‌ ತಿಳಿಸಿದೆ.

- Advertisement -

ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ನೀಡಿದ್ದ ಆದೇಶವನ್ನು ಸರಿ ಎಂದು ಎತ್ತಿಹಿಡಿದ ನ್ಯಾಯಪೀಠವು, ಪತಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಪ್ರಕರಣದ ಅರ್ಜಿದಾರ ಮತ್ತು ಆತನ ಹೆಂಡತಿ ನಡುವೆ ವೈವಾಹಿಕ ಭಿನ್ನಾಭಿಪ್ರಾಯಗಳು ಮೂಡಿದ್ದವು. ಗಂಡನು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುತ್ತಾ, ತನ್ನ ಗಂಡನು ತನ್ನ ಮೊಬೈಲ್ ಬಳಸಿ ಅಪರಿಚಿತ ಪುರುಷರೊಂದಿಗೆ ಮಾತನಾಡುತ್ತಿದ್ದಳು, ಇದು ತನ್ನ ವೈವಾಹಿಕ ಜೀವನದಲ್ಲಿ ಕ್ರೌರ್ಯ ಎಸಗಿದಂತೆ ಮತ್ತು ಆಕೆ ತನ್ನನ್ನು ತೊರೆದು ದೂರವಾಗಿದ್ದಾಳೆ ಎಂದು ಆರೋಪಿಸಿದ್ದ.

Advertisements

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತರಿಗೆ ‘ಟು ಫಿಂಗರ್ ಟೆಸ್ಟ್’ ಮಾಡುವಂತಿಲ್ಲ: ಜಾರ್ಖಂಡ್ ಹೈಕೋರ್ಟ್

ಆದರೆ, ಕೌಟುಂಬಿಕ ನ್ಯಾಯಾಲಯವು ಅರ್ಜಿಯ ವಿಚಾರಣೆ ನಡೆಸಿ, ಪತಿ ಮಾಡಿದ ಆರೋಪಗಳಿಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಮತ್ತು ಕ್ರೌರ್ಯ ಸಾಬೀತಾಗಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು. ಕೆಳ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪತಿಯು ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ್ದ.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ, “ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದೆ, ಕೇವಲ ಪತ್ನಿಯು ತನ್ನ ಗಂಡನ ಫೋನ್ ಮೂಲಕ ಬೇರೊಬ್ಬ ಪುರುಷನೊಂದಿಗೆ ಸಂಭಾಷಣೆ ನಡೆಸಿದ್ದಾಳೆ ಎಂಬ ಮಾತ್ರಕ್ಕೆ ಆಕೆಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸುವುದು ಸಮಾಜದಲ್ಲಿರುವ ಲಿಂಗ ಆಧಾರಿತ ಸಾಂಪ್ರದಾಯಿಕ ಮನಸ್ಥಿತಿ ಆಗಿದೆ. ಇಂತಹ ನಡವಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಖಾರವಾಗಿ ಹೇಳಿದೆ.

ಮಹಿಳೆಯ ಚಾರಿತ್ರ್ಯದ ಮೇಲೆ ಆಧಾರರಹಿತವಾಗಿ ಸಂಶಯ ಪಡುವುದು ಮತ್ತು ವಿವಾಹೇತರ ಸಂಬಂಧದ ಆರೋಪ ಹೊರಿಸುವುದು ಆಕೆಗೆ ಎಸಗುವ ತೀವ್ರ ಸ್ವರೂಪದ ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಪತ್ನಿಯ ಪರ ವಕೀಲ ರಂಜನ್ ಕುಮಾರ್ ಅವರು ವಾದ ಮಂಡಿಸಿ, “ಪತ್ನಿಯು ಸೂಕ್ತ ಗೌರವ ಮತ್ತು ಆತ್ಮಸಾಕ್ಷಿಯ ಭದ್ರತೆ ದೊರೆತರೆ ಪತಿಯೊಂದಿಗೆ ಸೇರಿ ವೈವಾಹಿಕ ಜೀವನವನ್ನು ಪುನರಾರಂಭಿಸಲು ಇಂದಿಗೂ ಸಿದ್ಧಳಿದ್ದಾಳೆ. ಆದರೆ ಪತಿಯೇ ಆಕೆಯನ್ನು ಜೊತೆಯಲ್ಲಿ ಕರೆದೊಯ್ಯಲು, ಸಂಸಾರ ನಡೆಸಲು ನಿರಾಕರಿಸುತ್ತಿದ್ದಾನೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಪತಿಯು ತನ್ನ ಪತ್ನಿಯ ವಿರುದ್ಧ ಮಾಡಿದ ಕ್ರೌರ್ಯ ಅಥವಾ ಆಕೆ ತನ್ನನ್ನು ಪರಿತ್ಯಜಿಸಿದ್ದಾಳೆ ಎಂಬ ವಾದಕ್ಕೆ ಯಾವುದೇ ಪುರಾವೆ ಒದಗಿಸಲು ವಿಫಲನಾಗಿದ್ದಾನೆ ಎಂದು ಉಲ್ಲೇಖಿಸಿದ ನ್ಯಾಯಪೀಠವು ವಿಚ್ಛೇದನ ನೀಡಲು ನಿರಾಕರಿಸಿತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿಗೆ ಚಿರಾಗ್-ನಿತಿನ್ ಎಂಟ್ರಿ; ‘ಮಹಾ ಸಮರ’ಕ್ಕೆ ಸಜ್ಜಾದ ಎನ್‌ಡಿಎ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಬಿಹಾರದ...

100 ರೂ.ಗೆ 10 ಬಗೆಯ ತರಕಾರಿ: ‘ವೆಟ್ರಿ ಕಿಟ್’ ಯೋಜನೆ ಆರಂಭಿಸಿದ ತಮಿಳು ಸರ್ಕಾರ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಅಗತ್ಯ ತರಕಾರಿಗಳನ್ನು ಒದಗಿಸುವ...

ವಂಚನೆಗೊಳಗಾದ ಮಹಿಳೆಗೆ ಸಕಾಲದಲ್ಲಿ ಸ್ಪಂದಿಸದ ಕೆನರಾ ಬ್ಯಾಂಕ್‌: ಬಡ್ಡಿ ಸಮೇತ ಹಣ ಹಿಂದಿರುಗಿಸಲು ಸೂಚನೆ

ಸೈಬರ್ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳಾ ಗ್ರಾಹಕಿಯೊಬ್ಬರಿಗೆ ಕಳೆದುಕೊಂಡ ಹಣ ಹಾಗೂ...

ಮಹಾರಾಷ್ಟ್ರ | ಬರದ ನಡುವೆ ಸಂಭ್ರಮದ ಸಡಗರ; ಸರ್ಕಾರದ ಆದ್ಯತೆಗೆ ತೀವ್ರ ಆಕ್ರೋಶ!

ಮಹಾರಾಷ್ಟ್ರದಾದ್ಯಂತ ಭೀಕರ ಬರಗಾಲದ ಕರಿನೆರಳು ಆವರಿಸಿದೆ. ಕಳೆದ ಐದು ದಶಕಗಳಲ್ಲೇ ಕಾಣದಂತಹ...